
ನವದೆಹಲಿ,ಜೂ.೨೯-ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿದ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಹೇಳಿದ್ದಾರೆ.ವಿಮಾನ ಅಪಘಾತ ಸ್ಥಳದಲ್ಲಿ ವಶಪಡಿಸಿ
ಕೊಳ್ಳಲಾದ ಏರ್ ಇಂಡಿಯಾ ವಿಮಾನದ ಕಪ್ಪು ಪೆಟ್ಟಿಗೆ ವಶದಲ್ಲಿದ್ದು ಅದರ ಸಂಪೂರ್ಣ ಮೌಲ್ಯಮಾಪನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿಮಾನ ಅಪಘಾತ ಒಂದು ದುರದೃಷ್ಟಕರ ಘಟನೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಯಾವುದೇ ಸಂಭಾವ್ಯ ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ಕೋನಗಳಿಂದಲೂ ಇದನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಎಲ್ಲಾ ಕೋನಗಳನ್ನು ನಿರ್ಣಯಿಸಲಾಗುತ್ತಿದೆ. ಹಲವಾರು ಸಂಸ್ಥೆಗಳು ಇದರ ಮೇಲೆ ಕೆಲಸ ಮಾಡುತ್ತಿವೆ” ಎಂದು ಅವರು ತಿಳಿಸಿದ್ದಾರೆ.
ಜೂನ್ ೧೨ ರಂದು, ಬೋಯಿಂಗ್ ಡ್ರೀಮ್ಲೈನರ್ ೭೮೭-೮ ಏರ್ ಇಂಡಿಯಾ ವಿಮಾಣ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ೧೭೧, ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಸೆಕೆಂಡುಗಳಲ್ಲಿ ಅಪಘಾತ
ಕ್ಕೀಡಾಯಿತು. ವಿಮಾನದಲ್ಲಿದ್ದ ೨೪೨ ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು.
ಏರ್ ಇಂಡಿಯಾ ಅಪಘಾತವನ್ನು ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ಕೋನಗಳಿಂದ ತನಿಖೆ ಮಾಡಲಾಗುತ್ತಿದೆ ಏರ್ ಇಂಡಿಯಾ ೧೭೧ ವಿಮಾನದ ಕಪ್ಪು ಪೆಟ್ಟಿಗೆ ತನಿಖಾ ತಂಡದ ಬಳಿ ಇದೆ ಮತ್ತು ವಿಶ್ಲೇಷಣೆಗಾಗಿ ವಿದೇಶಕ್ಕೆ ಕಳುಹಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ವಿಮಾನ ಮೇಘನಿನಗರ ಪ್ರದೇಶದ ಬಿಜೆ ವೈದ್ಯಕೀಯ ಕಾಲೇಜಿನ ವೈದ್ಯರ ವಸತಿ ಆವರಣಕ್ಕೆ ಅಪ್ಪಳಿಸಿತು ಮತ್ತು ಬೆಂಕಿ ಹೊತ್ತಿಕೊಂಡ ಪರಿಣಾಮ ವಿಮಾನದಲ್ಲಿದ್ದವರ ಜೊತೆಗೆ ಹಾಸ್ಟಲ್‌ನಲ್ಲಿದ್ದ ಹಲವು ಮಂದಿ ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ.
ಟೇಕ್ ಆಫ್ ಆದ ಕೂಡಲೇ ಪೈಲಟ್ ‘ಮೇಡೇ’ ಸಂಕಷ್ಟದ ಕರೆ ನೀಡಿದ್ದರು, ಸಂಪೂರ್ಣ ತುರ್ತುಸ್ಥಿತಿಯನ್ನು ಸೂಚಿಸುತ್ತದೆ ಎಂದು ಅಹಮದಾಬಾದ್‌ನ ವಾಯು ಸಂಚಾರ ನಿಯಂತ್ರಣ ತಿಳಿಸಿದೆ.