
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.02: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಧಾನ ಸೌದದ ಮುಂಭಾಗದ ಮೆಟ್ಟಿಲುಗಳ ಮೇಲೆ ವೇದಿಕೆ ರಚಿಸಿ ಉರ್ದು ಹಬ್ಬ ಆಚರಣೆಗೆ ಮುಂದಾಗಿರುವುದನ್ನು ವಿರೋಧಿಸಿ ನಿನ್ನೆ ಸಂಜೆ ನಗರದಲ್ಲಿ ಕರ್ನಾಟಕ ರಕ್ಷಣ ವೇದಿಕೆ ಪ್ರವೀಣ ಕುಮಾರ ಶೆಟ್ಟಿ ಬಣ ಪಂಜಿನಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿತು.
ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ವಿ.ಹೆಚ್. ಹುಲುಗಪ್ಪ, ರಾಜ್ಯ ಮುಖಂಡ ಅದ್ದಿಗೇರಿ ನೇತೃತ್ವದಲ್ಲಿ ಗಡಗಿ ಚೆನ್ನಪ್ಪ ಸರ್ಕಲ್ ನಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು ಉರಿಯುವ ಪಂಜುಗಳನ್ನು ಹಿಡಿದು ರಾಜ್ಯ ಸರ್ಕಾರ ಉರ್ದು ಹಬ್ಬ ಆಚರಣೆ ಮುಂದಾಗಿದ್ದನ್ನು ಖಂಡಿಸಿದರು. ಪ್ರತಿಭಟನೆ ವೇಳೆ ಸರ್ಕಾರ ವಿರುದ್ದ ಘೋಷಣೆ ಕೂಗಿ. ಯಾವುದೇ ಕಾರಣಕ್ಕೆ ವಿಧಾನ ಸೌದದ ಮುಂದೆ ಉರ್ದು ಹಬ್ಬ ನಡೆಯಬಾರದು ಎಂದು ಆಗ್ರಹಿಸಿದರು.
ಈ ಮಧ್ಯೆ ಉರ್ದು ಹಬ್ಬ ಅಲ್ಲಿ ಆಚರಣೆ ಮಾಡುವದಕ್ಕೆ ಅನುಮತಿ ನಿರಾಕರಿಸಲಾಗಿದೆಯಂತರ. ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.


























