
ನವದೆಹಲಿ,ಜ೨೦:ನಿರ್ಗಮಿತ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ ನಿತಿನ್ ನಬಿನ್ ವಿಶ್ವದ ಅತಿದೊಡ್ಡ ಪಕ್ಷದ ೧೨ ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದೀರಿ ಅಭಿನಂದನೆಗಳು ಪಕ್ಷದ ಜವಾಬ್ದಾರಿ ವಹಿಸಿಕೊಂಡು ಮುನ್ನೆಯಿರಿ ,ಪ್ರಧಾನಿ ನಾಯಕತ್ವದಲ್ಲಿ ಪಶ್ವಿಮ ಬಂಗಾಳ ,ಪುದುಚೆರಿ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವೆಯಲ್ಲಿ ಜಯಬೇರಿ ಬಾರಿಸಿ ಎಂದು ಹೇಳಿದ್ದಾರೆ.
೨೦೨೪ ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ನಮ್ಮ ನಿರೀಕ್ಷೆಗಳನ್ನು ಪೂರೈಸಲಿಲ್ಲ. ಈ ಫಲಿತಾಂಶಗಳು ಪಕ್ಷವನ್ನು ಮಾತ್ರವಲ್ಲದೆ ದೇಶದ ಸಾರ್ವಜನಿಕರನ್ನೂ ಅಚ್ಚರಿಗೊಳಿಸಿದವು. ದೇಶದ ಮತದಾರರ ಮನಸ್ಸಿನಲ್ಲಿ ನಿರಾಶೆಯ ಭಾವನೆ ಮೂಡಿತು. ಮತದಾರರಲ್ಲಿ ಅಸಮಾಧಾನದ ಭಾವನೆ ಬೆಳೆಯಿತು, ಮತ್ತು ದೇಶದ ಮತದಾರರು ಮುಂಬರುವ ಯಾವುದೇ ಚುನಾವಣೆಯಲ್ಲಿ ಪ್ರದಾನಿ ಅವರಿಗೆ ತಮ್ಮ ಸಂಪೂರ್ಣ ಆಶೀರ್ವಾದವನ್ನು ನೀಡುತ್ತಿದ್ದಾರೆ ಎಂದರು
೨೦೨೪ ರ ಲೋಕಸಭಾ ಚುನಾವಣೆಯ ನಂತರ, ಫಲಿತಾಂಶಗಳು ಘೋಷಣೆಯಾಗುವ ಮೊದಲೇ ಅವರು ಸಿಹಿತಿಂಡಿಗಳನ್ನು ವಿತರಿಸಲು ವ್ಯವಸ್ಥೆ ಮಾಡುತ್ತಿದ್ದರು ಪ್ರಧಾನಿ ನಾಯಕತ್ವದಲ್ಲಿ ೨೭ ವರ್ಷಗಳ ನಂತರ, ದೆಹಲಿಯಲ್ಲಿ ಕಮಲ ಅರಳಿತು ಮತ್ತು ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಯಿತು ಎಂದಿದ್ದಾರೆ
ನೂತನ ಅಧ್ಯಕ್ಷ ನಿತಿನ್ ನಬೀನ್ ಮಾತನಾಡು
ಇಂದಿನ ಕ್ಷಣ ನನಗೆ ಸಂಕಲ್ಪದ ಕ್ಷಣ. ಕೇವಲ ಒಂದು ಹುದ್ದೆಯನ್ನು ವಹಿಸಿಕೊಳ್ಳುತ್ತಿಲ್ಲ ಈ ಪಕ್ಷದ ಸಿದ್ಧಾಂತ, ಸಂಪ್ರದಾಯಗಳು ಮತ್ತು ರಾಷ್ಟ್ರೀಯತಾವಾದಿ ಚಳವಳಿಯ ಜವಾಬ್ದಾರಿಯನ್ನು ಸ್ವೀಕರಿಸುತ್ತಿದ್ದೇನೆ ಮತ್ತು ಈ ಸಂದರ್ಭದಲ್ಲಿ, ಎಲ್ಲಾ ಹಿರಿಯ ಸಹೋದ್ಯೋಗಿಗಳಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ ಎಂದಿದ್ದಾರೆ
೧೪೦ ಕೋಟಿ ಭಾರತೀಯರು ಅಭಿವೃದ್ಧಿ ಹೊಂದಿದ ಭಾರತದ ತಮ್ಮನ್ನು ಜೋಡಿಸಿಕೊಳ್ಳುತ್ತಿದ್ದಾರೆ ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಪ್ರಧಾನ ಮಂತ್ರಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ
.ಈ ವೇಳೆ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.






















