Home ಜಿಲ್ಲೆ ಮಂಗಳೂರು ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಡಿಜಿಲಾಕರ್ ಮೂಲಕ ಮುಂದಿನ ದಿನಗಳಲ್ಲಿ ವಿತರಿಸಲು ಮನವಿ

ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಡಿಜಿಲಾಕರ್ ಮೂಲಕ ಮುಂದಿನ ದಿನಗಳಲ್ಲಿ ವಿತರಿಸಲು ಮನವಿ

ಮಂಗಳೂರು- ಕುಪ್ಮಕರ್ನಾಟಕದ ನಿಯೋಗವುಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಮಧುಬಂಗಾರಪ್ಪನವರನ್ನುಅವರ ನಿವಾಸದಲ್ಲಿ ಭೇಟಿ ಮಾಡಿಕುಪ್ಮ ಕಳೆದ ೨ ವರ್ಷಗಳಿಂದ ಸಲ್ಲಿಸಿರುವ ಮನವಿಯಕುರಿತಂತೆ ನಡೆದಿರುವ ಪ್ರಗತಿಯ ಬಗ್ಗೆ ಚರ್ಚೆಯನ್ನು ನಡೆಸಿತು. ಮಾನ್ಯ ಸಚಿವರು ಕುಪ್ಮ ನಿಯೋಗದ ಜೊತೆ ಸಕಾರಾತ್ಮಕವಾದ ಸ್ಪಂದನೆಯನ್ನು ನೀಡಿರುವುದುಅಭಿನಂದನೀಯವಾಗಿದೆ. ಪದವಿ ಪೂರ್ವ ಹಂತದಲ್ಲಿಆಗಬೇಕಾದ ಅನೇಕ ಬದಲಾವಣೆಗಳ ಕುರಿತಂತೆ ವಿಸ್ತೃತವಾದಚರ್ಚೆಯನ್ನು ನಡೆಸಿದ ಸಚಿವರು ನಮ್ಮಇಲಾಖೆಯ ನಿರ್ದೇಶಕರು ಸೇರಿದಂತೆಎಲ್ಲಾ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲು ವರ್ಷದಲ್ಲಿ ೨ ಬಾರಿ ಕುಪ್ಮದ ಜೊತೆ ಸಭೆ ನಡೆಸಲು ಶಾಲಾ ಶಿಕ್ಷಣ (ಪದವಿಪೂರ್ವ)ನಿರ್ದೇಶಕರಿಗೆ ಸೂಚನೆಯನ್ನು ನೀಡಿದರು.


ಈಗಾಗಲೇ ರಾಜ್ಯದಲ್ಲಿ ಸುಮಾರು೪೦೦೦ ಕ್ಕೂ ಹೆಚ್ಚು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸರಿ ಸುಮಾರು ಶೇಕಡಾ ೬೩ ರ? ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದುಉತ್ತಮಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಮತ್ತುಉತ್ತಮ ಫಲಿತಾಂಶ ನೀಡಿ ಶಿಕ್ಷಣ ಇಲಾಖೆಗೆ ಗಣನೀಯವಾದಕೊಡುಗೆಯನ್ನು ನೀಡುವ ಮಹತ್ವಪೂರ್ಣಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಈ ರೀತಿಯಉತ್ತಮ ಶಿಕ್ಷಣ ನೀಡುವಲ್ಲಿ, ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು ಹಲವಾರುರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆಎಂಬುದನ್ನು ಮಾನ್ಯ ಸಚಿವರ ಗಮನಕ್ಕೆ ತರಲಾಯಿತು.
ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಬಗ್ಗೆ ಮಾನ್ಯ ವಿಧಾನ ಸಭಾ ಸಭಾಧ್ಯಕ್ಷರ ಸಮಕ್ಷಮದಲ್ಲಿ ಮಾನ್ಯ ಶಿಕ್ಷಣ ಸಚಿವರು ಮತ್ತು ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಿನಾಂಕ: ೧೪-೦೭-೨೦೨೪ಮತ್ತು ೧೫-೦೫-೨೦೨೫ರಂದು ನಡೆದಿದ್ದ ಸಭೆಯಲ್ಲಿಕುಪ್ಮಾ ಪದಾಧಿಕಾರಿಗಳು ಭಾಗವಹಿಸಿ, ಎದುರಿಸುತ್ತಿರುವಗಂಭೀರ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರಗಳನ್ನು ನೀಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾಇಲಾಖೆಯ ಮಾನ್ಯ ಶಿಕ್ಷಣ ಮಂತ್ರಿಗಳ ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಡಿಜಿಲಾಕರ್ ಮೂಲಕ ಮುಂದಿನ ದಿನಗಳಲ್ಲಿ ವಿತರಿಸುವ ಬಗ್ಗೆ ಅದರ ಸಾಧಕ ಬಾಧಕಗಳನ್ನು ಕುಪ್ಮದ ಜೊತೆ ಚರ್ಚಿಸಬೇಕೆಂದು ಮನವಿಯನ್ನು ಮಾಡಲಾಯಿತು.
ದ್ವಿತೀಯ ಪಿಯುಸಿ ಉತ್ತೀರ್ಣದಅಂಕಪಟ್ಟಿಯಲ್ಲಿಕಾಲೇಜಿನ ಮಾನ್ಯ ಪ್ರಾಂಶುಪಾಲರ ಸಹಿ ಮತ್ತು ಮೊಹರಿನೊಂದಿಗೆಅಂಕಪಟ್ಟಿಯನ್ನು ವಿತರಿಸಬೇಕೆಂದು ಮನವಿ ಮಾಡಲಾಯಿತು.
ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಹಾಗೂ ಕನ್ನಡಅಗ್ನಿ ಸುರಕ್ಷತಾ ಪ್ರಮಾಣ ಪತ್ರವನ್ನು ೫ ವರ್ಷಗಳಿಗೊಮ್ಮೆ ನವೀಕರಿಸುವಕುರಿತಂತೆ ಈ ಹಿಂದೆಕೊಟ್ಟಿರುವ ಮನವಿಗೆ ಸರಕಾರವು ಸ್ಪಂದನೆಯನ್ನುಕೊಟ್ಟಿರುತ್ತದೆ.
ತಜ್ಞರನ್ನೊಳಗೊಂಡ ಶೈಕ್ಷಣಿಕ ಸಮಿತಿಯನ್ನುರಚಿಸುವಕುರಿತಂತೆ ಮಾಡಿದ ಮನವಿಗೆ ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದನೆಯನ್ನುಕೊಟ್ಟು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ನಿರ್ದೇಶಕರಾದ ಭರತ್‌ಇವರಲ್ಲಿ ಸಭೆಕರೆಯುವಂತೆ ಸೂಚಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಮಾನ್ಯ ಸಚಿವರ ಸೂಚನೆಯಂತೆ ಶಾಲಾ ಶಿಕ್ಷಣ(ಪದವಿ ಪೂರ್ವ) ನಿರ್ದೇಶಕರಾದ ಭರತ್‌ಇವರಜೊತೆ ಸಭೆ ನಡೆಸಿದಾಗ ಮಾನ್ಯ ನಿರ್ದೇಶಕರುಕುಪ್ಮ ಸದಸ್ಯರೊಂದಿಗೆ ಮಾರ್ಚ್ ತಿಂಗಳಲ್ಲಿ ಸಭೆ ನಡೆಸಲುಒಪ್ಪಿಗೆಯನ್ನು ಸೂಚಿಸಿದರು. ಈ ಹಿಂದಿನ ಬೇಡಿಕೆಗಳಿಗೆ ಸಂಬಂಧ ಪಟ್ಟಹಾಗೆ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಳಾಂತರ ಮತ್ತು ಹಸ್ತಾಂತರದಅಧಿಕಾರವನ್ನು ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆ ಹಂತದಲ್ಲಿ ಅನಮೋದಿಸಲು ಅವಕಾಶವನ್ನುಕಲ್ಪಿಸಲಾಗಿದೆ. ಹೊಸ ಖಾಸಗಿ ಅನುದಾನರಹಿತಕಾಲೇಜನ್ನು ಪ್ರಾರಂಭ ಮಾಡುವ ಪ್ರಕ್ರಿಯೆಯನ್ನುಆನ್‌ಲೈನ್ ಮೂಲಕ ಈ ಹಿಂದೆಇದ್ದ ೪೬ ಅಂಶಗಳ ಅರ್ಜಿ ನಮೂನೆಯನ್ನು ೨೩ ಅಂಶಗಳಿಗೆ ಸರಳೀಕರಿಸಲಾಗಿದೆ. ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಹೊಸ ಸಂಯೋಜನೆ, ಭಾಷೆ ಮತ್ತು ಹೆಚ್ಚುವರಿ ವಿಭಾಗಗಳ ಅರ್ಜಿಯನ್ನು ಸಂಪೂರ್ಣವಾಗಿಆನ್‌ಲೈನ್ ಪ್ರಕ್ರಿಯೆಗೊಳಿಸಿದ್ದು ಅರ್ಜಿಯಲ್ಲಿ ಈ ಹಿಂದೆ ೩೬ ಅಂಶಗಳ ಅರ್ಜಿ ನಮೂನೆಯನ್ನು ೨೩ ಅಂಶಗಳಿಗೆ ಸರಳೀಕರಿಸಲಾಗಿದೆ. ೨೦೨೪ರ ನಿಯಮಾವಳಿ ಪ್ರಕಾರ ಹೊಸ ಶಾಶ್ವತಅನುದಾನರಹಿತ ಕಾಲೇಜುಗಳ ಸ್ಥಳ ಪರಿಶೀಲನೆಯನ್ನುಒಟ್ಟು ಅರ್ಜಿಗಳಲ್ಲಿ ಶೇಕಡ ೫ ರಷ್ಟು ಮೂಲಕ ನಡೆಸಲಾಗುತ್ತಿತ್ತು ಹಾಗೂ ಕಳೆದ ೫ ವರ್ಷಗಳ ವರೆಗೆ ಹೊಸ ಸಂಯೋಜನೆ/ಭಾಷೆಗೆ ಸಂಬಂಧಿಸಿದ ಅರ್ಜಿಗಳನ್ನು ಶೇಕಡ ೧೦೦ ರಷ್ಟು ಸ್ಥಳ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಪ್ರಸ್ತುತ ಸಾಲಿನಿಂದ ಹೊಸ ಸಂಯೋಜನೆ / ಭಾಷೆ ಅರ್ಜಿಗಳಿಗೂ ಒಟ್ಟು ಶೇಕಡ ೫ ರಷ್ಟು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪೈಕಿ ಹೊಸ ಸಂಯೋಜನೆ/ ಭಾಷೆ ಹಾಗೂ ಹೆಚ್ಚುವರಿ ವಿಭಾಗಗಳಿಗೆ ಸಂಬಂದಿಸಿದ ಅರ್ಜಿಗಳನ್ನು ಈ ಹಿಂದೆಎಪ್ರಿಲ್‌ಅಥವಾ ಮೇ ತಿಂಗಳಲ್ಲಿ ಆಹ್ವಾನಿಸಲಾಗುತ್ತಿತ್ತು. ಇದರಿಂದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿತೊಂದರೆಉಂಟಾಗುತ್ತಿತ್ತು. ಆದ್ದರಿಂದ ೨೦೨೫-೨೬ನೇ ಸಾಲಿಗೆ ಫೆಬ್ರವರಿ ತಿಂಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಳೆದ ಸಾಲಿನಲ್ಲಿದಾಖಲಾತಿ ಸಂಖ್ಯೆ ೮೦ ವಿದ್ಯಾರ್ಥಿಗಳನ್ನು ತಲುಪಿದ ನಂತರ ಮಾಥ್ರ ಹೊಸ/ಹೆಚ್ಚುವರಿ ವಿಭಾಗಕ್ಕಾಗಿಅರ್ಜಿ ಸಲ್ಲಿಸಲುಅನುಮತಿ ನೀಡಲಾಗುತ್ತಿತ್ತು. ಪ್ರಸ್ತುತ ಸಾಲಿನಿಂದ, ೨೦೨೫-೨೬ನೇ ಶೈಕ್ಷಣಿಕ ಸಾಲಿನಲ್ಲಿದಾಖಲಾತಿ ೮೦ ವಿದ್ಯಾರ್ಥಿಗಳನ್ನು ಪೂರ್ಣಗೊಳಿಸಿರುವ ಕಾಲೇಜುಗಳಿಗೆ, ಹಿಂದಿನ ಶೈಕ್ಷಣಿಕ ವರ್ಷದದಾಖಲಾತಿಆಧಾರದವಾಗಿ ಹೊಸ/ಹೆಚ್ಚುವರಿ ವಿಭಾಗಗಳಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಮೇಲಿನ ವಿಷಯಗಳಿಗೆ ಸಂಬಂಧಪಟ್ಟ ಹಾಗೆ ಕುಪ್ಮಕರ್ನಾಟಕವು ಬೇರೆ ಬೇರೆ ಸಂದರ್ಭಗಳಲ್ಲಿ ಮಾನ್ಯ ಸಚಿವರಲ್ಲಿ ಮನವಿ ಮಾಡಿರುವ ವಿಷಯಗಳಿಗೆ ಇಲಾಖೆಯು ಸಕಾರಾತ್ಮಕವಾದ ಸ್ಪಂದನೆಯನ್ನುಕೊಟ್ಟಿರುತ್ತದೆ. ಈ ವಿಷಯವನ್ನು ಸಭೆಯ ಗಮನಕ್ಕೆ ಇಲಾಖೆಯ ನಿರ್ದೇಶಕರಾದ ಭರತ್ ಮತ್ತುಜಂಟಿ ನಿರ್ದೇಶಕರಾದ ಹರ್ಷವರ್ಧನ್‌ತಂದಿರುತ್ತಾರೆ. ಈ ನಿಯೋಗದ ನೇತೃತ್ವವನ್ನುಕುಪ್ಮರಾಜ್ಯ ಕಾರ್ಯದರ್ಶಿ ಪ್ರೊ ನರೇಂದ್ರಎಲ್ ನಾಯಕ್, ರಾಜ್ಯಉಪಾಧ್ಯಕ್ಷರಾದಯುವರಾಜ್‌ಜೈನ್‌ರಾಜ್ಯಕೋಶಾಧಿಕಾರಿರಮೇಶ್ ಕೆ, ಬೆಂಗಳೂರು ಉತ್ತರಜಿಲ್ಲಾಧ್ಯಕ್ಷರಾದ ಕೀರ್ತನ್, ಬೆಂಗಳೂರು ಉತ್ತರಜಿಲ್ಲಾ ಕಾರ್ಯದರ್ಶಿ ಡಾದೇವರಾಜ್ ವಹಿಸಿದರು.