
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ. 29 :- ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಸೇವೆ ಅನನ್ಯವಾಗಿದೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಅವರು ತಾಲೂಕಿನ ತಾಯಕನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಬೆಟ್ಟದ ಹೂವು ಸೇವಾ ಸಂಸ್ಥೆ ಹಾಗೂ ಹಳೆ ವಿದ್ಯಾರ್ಥಿಗಳ ಬಳಗದಿಂದ ಆಯೋಜಿಸಿದ್ದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಎಷ್ಟೇ ಉನ್ನತ ಹುದ್ದೆಗೆ ಹೋದರೂ ತಮಗೆ ಶಿಕ್ಷಣ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಲಾರರು ಮಕ್ಕಳಿಗೆ ಜ್ಞಾನಾರ್ಜನೆ ನೀಡುವ ಮೂಲಕ ಭವಿಷ್ಯ ರೂಪಿಸುವ ಶಿಕ್ಷಕರ ಸೇವೆ ಸ್ಮರಣೀಯವಾಗಿದ್ದು, ಅಂತಹ ಗುರುಗಳನ್ನು ಗೌರವಿಸುವ ಹಾಗೂ ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದ ಶಾಸಕರು, ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೆ ಕೊಠಡಿಗಳು, ಶೌಚಾಲಯಗಳ ನಿರ್ಮಾಣ ಸೇರಿ ಮೂಲಸೌಕರ್ಯ ಒದಗಿಸಲು ಹೆಚ್ಚು ಒತ್ತು ನೀಡಿದ್ದೇನೆ. ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಮೂಲಸೌಲಭ್ಯ ಒದಗಿಸುವ ಮೂಲಕ ಹಿಂದುಳಿದ ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದೇನೆ. ಅಲ್ಲದೆ ತಮ್ಮೂರಿನ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಸೇವಾ ಭಾವನೆ ಹೊಂದುವುದು ಉತ್ತಮ ಕಾರ್ಯವಾಗಿದೆ. ಎಲ್ಲಾ ಹಳ್ಳಿಗಳಲ್ಲೂ ಇಂಥ ವಾತಾವರಣ ನಿರ್ಮಾಣಗೊಂಡರೆ ಆಯಾ ಗ್ರಾಮದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಕುಷ್ಟಗಿ ಸರಕಾರಿ ಪಪೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಿ.ನಾಗೇಂದ್ರಪ್ಪ ಸೂರಮ್ಮನಹಳ್ಳಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕಲಿಕೆಗೆ ಶಿಕ್ಷಕರು ಒತ್ತು ನೀಡುವುದರ ಜತೆಗೆ ಜೀವನ ಕೌಶಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ತಿಳಿಸಬೇಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಮತ್ತು ಆಂಗ್ಲಭಾಷೆಯ ವಿಷಯಗಳ ಜ್ಞಾನಾರ್ಜನೆಗೆ ಪ್ರಾಥಮಿಕ ಹಂತದಲ್ಲೇ ಹೆಚ್ಚಿನ ಆದ್ಯತೆ ನೀಡುವ ಅನಿವಾರ್ಯತೆಯೂ ಇರುವುದು ಪ್ರತಿಯೊಬ್ಬ ಶಿಕ್ಷಕರು ಅರಿಯಬೇಕಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರಿಗೆ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ : ತಾಲೂಕಿನ ತಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಿವೃತ್ತ ಶಿಕ್ಷಕರಾದ ಎಲ್.ರಾಮಪ್ಪ, ಜಿ.ತಿಪ್ಪೇರುದ್ರಪ್ಪ, ಸಿ.ತಿಪ್ಪಣ್ಣ, ಡಿ.ಪಾಲಯ್ಯ, ಕೆ.ವೆಂಕಟೇಶ್, ಎಂ.ಸನಾವುಲ್ಲಾ ಸಾಹೇಬ್, ಜಿ.ಎ.ಕೆಂಚಪ್ಪ, ಟಿ.ಶರಣಪ್ಪ, ಎಂ.ಎನ್.ಶಿವಲಿಂಗಪ್ಪ, ಬಿ.ಬೀರಪ್ಪ, ಜಿ.ಮಲ್ಲಿಕಾರ್ಜುನಪ್ಪ, ಶರಣಪ್ಪ, ಅನ್ನಪೂರ್ಣಮ್ಮ, ಕೆ.ಭೀಮಾನಾಯ್ಕ, ಎನ್.ಮಲ್ಲಿಕಾರ್ಜುನಪ್ಪ, ಜಿ.ತಿಪ್ಪೇಸ್ವಾಮಿ, ಮಾಜಿ ಸೈನಿಕ ಬಿ.ತಿರುಮಲೇಶ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಾಪೆ ತಿಪ್ಪೇಸ್ವಾಮಿ ಸೇರಿ ಇತರರನ್ನು ಹಳೇ ವಿದ್ಯಾರ್ಥಿ ಗಳು ಹಾಗೂ ಗಣ್ಯರು ಗ್ರಾಮದ ಮುಖಂಡರು ಸೇರಿ ಗುರುವಂದನೆ ಸಲ್ಲಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪ್ಯಾರಿಮಾಬೀ ಗನಿಸಾಬ್, ಸದಸ್ಯರಾದ ಕೆ.ಎನ್.ರಾಘವೇಂದ್ರ, ಬಿ.ಕುಮಾರರೆಡ್ಡಿ, ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಎಸ್.ಕರಿಬಸಪ್ಪ, ಉಣ್ಣೆ ಕೈಮಗ್ಗ ನೇಕಾರ ಸಂಘದ ರಾಜ್ಯ ನಿರ್ದೇಶಕ ಕೆ.ಮಾರುತಿ, ಅಧ್ಯಕ್ಷ ಡಿ.ರವಿ, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಮಹಾಂತಪ್ಪ, ಮುಖ್ಯಶಿಕ್ಷಕ ಆಲೂರು ಕೆ.ಲಿಂಗಪ್ಪ, ಶಿಕ್ಷಕ ರಾಜಗೋಪಾಲ್, ತಾಲೂಕು ಭೂಮಾಪಕ ಸಿ.ಎಂ.ಮoಜುನಾಥ, ಸರ್ವೆ ಸೂಪರವೈಸರ್ ಲೋಕಿಕೆರೆ ಟಿ.ಲೋಕೇಶ್, ಬೆಟ್ಟದ ಹೂವು ಸೇವಾ ಸಂಸ್ಥೆ ಅಧ್ಯಕ್ಷ ಡಾ.ಡಿ.ಸುರೇಂದ್ರಕುಮಾರ್, ಪದಾಧಿಕಾರಿಗಳಾದ ಈ.ಮಂಜುನಾಥ, ಕೆ.ಜಿ.ದಿನೇಶ್, ಬಿ.ಟಿ.ಮಂಜುನಾಥ, ಕೆ.ಸತೀಶ್, ಹಳೇಮನೆ ಮಹಾದೇವ್, ಜಿ.ಟಿ.ಶ್ರೀಧರ, ಜೆ.ಎಂ.ಪ್ರಕಾಶ್ ಸ್ವಾಮಿ, ಎನ್.ಚಂದ್ರಶೇಖರಪ್ಪ, ಕೆ.ಚನ್ನಬಸಪ್ಪ, ಕೆ.ಈಶ್ವರ್, ಮಾಳಗಿ ಗಿಡ್ಡಪ್ಪ, ಡಾ.ವಿ.ಬಸವರಾಜ ಸೇರಿ ಗ್ರಾಮಸ್ಥರು, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳ ಬಳಗ ಉಪಸ್ಥಿತರಿದ್ದರು.