
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.24- ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನಆದ್ಯತೆ ನೀಡಿ ನಿಮ್ಮ ಭವಿಷ್ಯಉಜ್ವಲ ಮಾಡಿಕೊಳ್ಳಿ ಎಂದು ಮೈಸೂರಿನ ಹೆಸರಾಂತ ಸಾಹಿತಿ ನಗರ್ಲೆ ಶಿವಕುಮಾರ್ ತಿಳಿಸಿದರು
ನಗರದಜೋಡಿರಸ್ತೆಯಲ್ಲಿರುವಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯ ಬಿಎಡ್‍ಕಾಲೇಜಿನಲ್ಲಿ ಶನಿವಾರ ನಡೆದ ಮೂರನೇ ವರ್ಷದ ಸ್ನೇಹ ಸಮ್ಮಿಲನ ಮತ್ತು ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದಅವರು, ನಿರಂತರವಾಗಿಕಠಿಣ ಶ್ರಮದಿಂದ ವಿದ್ಯಾಭ್ಯಾಸಕಲಿತರೆ ಪರೀಕ್ಷೆಯಲ್ಲಿಉತ್ತಮಅಂಕ ಗಳಿಸಿ ಸರ್ಕಾರಿ ಕೆಲಸ ಪಡೆದುಕೊಳ್ಳಬಹುದುಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾಭ್ಯಾಸದಜೊತೆಗೆಕಾಲೇಜಿನ ಆಡಳಿತ ಮಂಡಳಿ, ಪೆÇೀಷಕರು ಹಾಗೂಜಿಲ್ಲೆಗೆಕೀರ್ತಿತನ್ನಿ. ಹಣ ಆಸ್ತಿ ಕಳ್ಳತನ ವಾಗಬಹುದುಆದರೆ ವಿದ್ಯೆಯನ್ನುಯಾರು ಕಳ್ಳತನ ಮಾಡಲು ಸಾಧ್ಯವಾಗಿಲ್ಲ.ವಿದ್ಯೆಇದ್ದರೆವಿಶ್ವದಯಾವುದೇ ಭಾಗದಲ್ಲಿ ನೀವು ಜೀವಿಸಬಹುದುಎಂದು ತಿಳಿಸಿದಅವರು,ಜೀವನದಲ್ಲಿ ಸಮಯ ಪ್ರಜ್ಞೆ, ಗುರು ಹಿರಿಯರ ಹಾಗೂ ಪೆÇೀಷಕರ ಮಾರ್ಗದರ್ಶನದಿಂದ ನೀವು ಉತ್ತಮ ಸಾಧನೆ ಮಾಡುವಜೊತೆಗೆ ಬಿಡುವಿನ ಸಂದರ್ಭದಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ಓದುವಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯ ಬಿಎಡ್‍ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಬಸವಣ್ಣ ಮಾತನಾಡಿ, ಸುತ್ತೂರು ಶ್ರೀಗಳ ಆಶೀರ್ವಾದದೊಂದಿಗೆ ಲಕ್ಷಾಂತರ ಮಂದಿ ಬಿಎಡ್ ವಿದ್ಯಾಭ್ಯಾಸ ಮುಗಿಸಿ.ಜಿಲ್ಲೆ,ರಾಜ್ಯ,ಅಂತರರಾಜ್ಯ ಶಿಕ್ಷಕ ವೃತ್ತಿ ವೃತ್ತಿ ಮಾಡುತ್ತಿರುವುದು ಮೆಚ್ಚುಗೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳಾಗಿ ಸೇವೆ ಮಾಡುತ್ತಿರುವುದು ಮೆಚ್ಚುಗೆ ವಿಷಯ.ಕಾಲೇಜಿನ ಪರೀಕ್ಷೆಯಲ್ಲಿ ನೂರಕ್ಕೆ ನೂರು ಪಲಿತಾಂಶ ಪ್ರಕಟವಾಗಿದ್ದು ಬಿಎಡ್‍ನಲ್ಲಿ ವಿದ್ಯಾಭ್ಯಾಸ ಮಾಡಿದ ನೂರಕ್ಕೆ ನೂರು ಮಂದಿ ಖಾಸಗಿ, ಸರ್ಕಾರಿ ಕೆಲಸಕ್ಕೆ ಸೇರಿತಮ್ಮಜೀವನವನ್ನು ನಂದಾದೀಪವಾಗಿ ಮಾಡಿಕೊಂಡಿದ್ದಾರೆಎಂದು ಹೇಳಿದರು.
ಜೆಎಸ್‍ಎಸ್ ಬಿಎಡ್‍ಕಾಲೇಜಿನ ಪೆÇ್ರ.ಕೆ.ಎಂ.ಯೋಗೇಶ್,ಹಿರಿಯ ವಿದ್ಯಾರ್ಥಿಗಳ ಸಂಘದಅಧ್ಯಕ್ಷ ಹಾಗೂ ಅಲೂರು ಸರ್ಕಾರಿ ಪದವಿ ಪೂರ್ವಕಾಲೇಜಿನಉಪನ್ಯಾಸಕ. ಬಿ.ನಾಗರಾಜು, ಕಾರ್ಯದರ್ಶಿ ಹಾಗೂ ಮರಿಯಲ ಶ್ರೀ ಮುರುಘರಾಜೇಂದ್ರ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಪಿ.ಮಹದೇವಸ್ವಾಮಿ,ಕುದೇರು ಸರ್ಕಾರಿ ಪದವಿ ಪೂರ್ವಕಾಲೇಜುಉಪನ್ಯಾಸಕರಾಜೇಂದ್ರ, ಚಾಮರಾಜನಗರಆರ್‍ಟಿಓಕಚೇರಿಅಧೀಕ್ಷಕಿ ಹಿರಿಯ ವಿದ್ಯಾರ್ಥಿನಿ ಕೆ.ಪಿ.ದೀಪಾ, ಜೆಎಸ್‍ಎಸ್ ಮಹಿಳಾ ಕಾಲೇಜಿನ ಪೆÇ್ರ.ಅರುಣಶ್ರೀ, ಪೆÇ್ರ.ವೀರೇಶ್. ಪೆÇ್ರ.ಸಿದ್ದರಾಜು, ರಾಜುಜೈನ್, ಹಿರಿಯ ವಿದ್ಯಾರ್ಥಿಗಳಾದ ಉಪನ್ಯಾಸಕಿ ಶೀಲಾ, ಶಶಿಕಲಾ, ಜಯಶಂಕರ್, ತೇಜಸ್ವಿನಿ, ಭಾವನ,ನಂದಿನಿ,ಶಿಲ್ಪ, ಸೇರಿದಂತೆರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನ ಗಳಿಸಿದರು.




























