ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಕರೆ


ಸಂಜೆವಾಣಿ ವಾರ್ತೆ
ಸಂಡೂರು:ಅ: 29: 
ಇಂದು ವಿದ್ಯಾರ್ಥಿಗಳು ದೈಹಿಕ ಚಟುವಟಿಕೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಅಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಬಿ.ಪಿ. ಸುಗರ್ ಬರುವಂತಹ ದುಸ್ಥಿತಿಯನ್ನು ತಡೆಯುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯವಾಗಿದೆ ಎಂದು ಸಂಸದ ಈ.ತುಕರಾಂ ತಿಳಿಸಿದರು.
ಅವರು ತಾಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ಎನ್.ಎಂ.ಡಿ.ಸಿ. ಸಿ.ಎಸ್.ಅರ್ ಅನುದಾನದಲ್ಲಿ ತಾಲೂಕಿನ 25 ಶಾಲೆಗಳಿಗೆ ಪ್ರತಿ 1 ಲಕ್ಷದಂತೆ 25 ಲಕ್ಷ ಮೊತ್ತದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ ಎಲ್ಲಿ ದೈಹಿಕ ಕಸರತ್ತು ಇರುತ್ತದೆಯೋ ಅಲ್ಲಿ ಬುದ್ದಿಯೂ ಸಹ ಬೆಳವಣಿಗೆಯಾಗುತ್ತದೆ, ಅದ್ದರಿಂದ ಪ್ರತಿಯೊಂದು ಮಗವೂ ಸಹ ಕ್ರೀಡೆಗಳಲ್ಲಿ ಭಾಗಿಯಾಗಬೇಕು, ಇದರಿಂದ ಚಟುವಟಿಕೆಯಿಂದ ಕೂಡಿರಲು ಸಾಧ್ಯ, ಅನಾರೋಗ್ಯದಿಂದ ದೂರವಾಗಲು ಸಹ ಸಹಕಾರಿಯಾಗಿದೆ, ಅದ್ದರಿಂದ ಪಾಲಕರು ಎಲ್ಲಾ ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಅದಕ್ಕೆ ಶಿಕ್ಷಕರೂ ಸಹ ಪೂರ್ಣಪ್ರಮಾಣದಲ್ಲಿ ಸಹಕರಿಸಬೇಕು ಎಂದರು.
ಮಕ್ಕಳಿಗೆ ಬೇಕಾದ ಕೊಠಡಿಗಳು, ಕ್ರೀಡಾ ಸಾಮಾಗ್ರಿಗಳು, ಪ್ರಯೋಗಾಲಯಗಳು, ಗ್ರಂಥಾಲಯದ ವ್ಯವಸ್ಥೆ, ಕಂಪ್ಯೂಟರ್ ಶಿಕ್ಷಣದ ವ್ಯವಸ್ಥೆ ಮಾಡಿದ್ದು ಅವುಗಳ ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಪ್ರಗತಿಯನ್ನು ಸಾಧಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಗಂಟಿಕುಮಾರಸ್ವಾಮಿ, ಶರಣಯ್ಯಸ್ವಾಮಿ, ಹನುಮಂತಪ್ಪ, ಗಡಾದ್ ರಮೇಶ್, ತಹಶೀಲ್ದಾರ ಅನಿಲ್ ಕುಮಾರ್, ಶಿಕ್ಷಣಾಧಿಕಾರಿ ಐ.ಆರ್.ಅಕ್ಕಿ, ನೀರಾವರಿ ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖಾಧಿಕಾರಿ ನಾಗರಾಜ, ಬಿ.ಆರ್.ಪಿ ಕಾರ್ತಿಕ್, ಸಿ.ಆರ್.ಪಿ.ಓಬಣ್ಣ, ಚಿನ್ನಾಪುರಗೌಡ, ಮಾಜಿತಾ.ಪಂ. ಅಧ್ಯಕ್ಷ ಶರಣಯ್ಯ, ಗ್ರಾ.ಪಂ. ಅಧ್ಯಕ್ಷೆ ಪಾರ್ವತಮ್ಮಕುಮಾರಸ್ವಾಮಿ, ಮಹಿಳಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ವರಲಕ್ಷ್ಮಿ, ಉಪಾಧ್ಯಕ್ಷೆ ಮಂಜುಳ ನಾಗರಾಜ್, ಗ್ರಾ.ಪಂ. ಮಾಜಿಅಧ್ಯಕ್ಷಗೋವಿಂದರೆಡ್ಡಿ, ಸದಸ್ಯರಾದಗೋವಿಂದಪ್ಪ, ಜಿ.ಹೊನ್ನೂರಪ್ಪ, ಶಿಕ್ಷಕರಾದ ಮಂಜುನಾಥ ಹೊಳಗುಂದಿ ಮತ್ತು ಬಸವಕುಮಾರ್, ನಾಗೇಶ್ ಪಾಟೀಲ್, ಅಂಗನವಾಡಿಗೌರವಾಧ್ಯಕ್ಷೆ ನಾಗರತ್ನಮ್ಮ, ಅಧ್ಯಕ್ಷೆ ವೆಂಕಟಲಕ್ಷ್ಮಿ, ತುಂಬರಗುದ್ದಿ ಹಾಗೂ ಬಂಡ್ರಿಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಗ್ರಾಮ ಪಂಚಾಯಿತಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು, ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.