ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್-ಪೆನ್ ಕಿಟ್ ವಿತರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.25:
ನಗರದ  ಭತ್ರಿಯ ಸರ್ಕಾರಿ ಪ್ರಾಥಮಿಕ ಶಾಲೆಯ  ವಿದ್ಯಾರ್ಥಿಗಳಿಗೆ ಮಹಾನಗರ ಪಾಲಿಕೆಯ ಸದಸ್ಯೆ, ಮಾಜಿ ಮೇಯರ್ ಎಂ.ರಾಜೇಶ್ವರಿ ಉಚಿತವಾಗಿ ನೋಟಬುಕ್ ಪೆನ್ ಪೆನ್ಸಿಲ್ ಕಿಟ್ ವಿತರಿಸಿದರು.
ವಸಂತ ಪಂಚಮಿ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಶುಕ್ರವಾರ ವಿದ್ಯಾ ಸರಸ್ವತಿ ಪೂಜೆಯನ್ನು ಏರ್ಪಡಿಸಲಾಗಿತ್ತು. ಪೂಜೆಯಲ್ಲಿ ಭಾಗವಹಿಸಿ ಸರಸ್ವತಿ ಭಾವಚಿತ್ರಕ್ಕೆ ಆರತಿ ಬೆಳಗಿದ ಮಾಜಿ ಮೇಯರ್ ರಾಜೇಶ್ವರಿ ಅವರು ಉಚಿತ ನೋಟಬುಕ್ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಕುಮಾರಿ, ಶಿಕ್ಷಕರಾದ ಯು.ರಾಜೇಶ್ವರಿ, ಬಿ.ದೀಪಾ, ಸಿ.ದತ್ತೇಶ್ವರ, ಸಿ.ಮಂಜುಳಾ, ಉಷಾಶ್ರೀ, ಭವಾನಿ, ವರಲಕ್ಷ್ಮೀ ಸೇರಿದಂತೆ ವಂದನಾ, ಪರಮೇಶ್, ಶ್ರೀಕಾಂತ್, ಹಂಪನಗೌಡ ಅವರು ಹಾಜರಿದ್ದರು.