
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.11 :ನಗರದ ಓಪಿಡಿ ಬಳಿಯ ವಿದ್ಯಾನಗರ ಸರ್ಕಲ್ ನಲ್ಲಿ ರಸ್ತೆ ವಿಸ್ತರಣಾ ಕಾರ್ಯ ಇಂದು ಆರಂಭಗೊಂಡಿದೆ.
ವಿದ್ಯಾನಗರ ಸರ್ಕಲ್ ನಿಂದ ವಿಮಾನ ನಿಲ್ದಾಣದವರೆಗೆ 80 ಅಡಿ ರಸ್ತೆ ಮಾಡುವ ಕೆಲಸ ನಡೆದಿದೆ. ವಿದ್ಯಾನಗರ ಸರ್ಕಲ್ ಅಲ್ಲಿ ಒಂದು ವೃತ್ತ ವನ್ನು ಸಹ ಅಭಿವೃದ್ದಿ ಪಡಿಸುವುದಾಗಿ ಪಾಲಿಕೆ ಸದಸ್ಯೆ ಮಾಜಿ ಮೇಯರ್ ಎಂ. ರಾಜೇಶ್ವರಿ ಸುಬ್ಬರಾಯ್ಡು ತಿಳಿಸಿದ್ದಾರೆ























