
ಮಂಗಳೂರು, ಸೆ.೨: ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದ ಕರ್ನಾಟಕ ವೃತ್ತಿ ಶಿಕ್ಷಣ ಅಭಿವೃದ್ಧಿ ನಿಗಮದ ವತಿಯಿಂದ ಅಂತಾರಾಷ್ಟ್ರೀಯ ನೇಮಕಾತಿ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿ. ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶ ಪರಿಚಯಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ‘ವಿದೇಶದಲ್ಲಿ ಅಧ್ಯಯನ’ ಕಾರ್ಯಕ್ರಮದ ಪೋಸ್ಟರನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ನೆರವೇರಿಸಿದರು.
ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ವರ್ಷ ಸೆ. ೬ರಂದು ವಿದೇಶದಲ್ಲಿ ಅಧ್ಯಯನ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದೆ ಎಂದರು.
ಪದವಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಆಸ್ಟ್ರೇಲಿಯಾ, ಅಮೆರಿಕ, ಇಂಗ್ಲೆಂಡ್, ಜರ್ಮನಿ, ಸಿಂಗಾಪುರ, ಯುಎಇ, ಐರ್ಲೆಂಡ್, ನ್ಯೂಝಿಲೆಂಡ್ ಹಾಗೂ ಇತರ ದೇಶಗಳಲ್ಲಿ ೭೫ಕ್ಕೂ ಅಧಿಕ ಜಾಗತಿಕ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಅವಕಾಶವಿದೆ. ಶೇ. ೫೦ರಷ್ಟು ವಿದ್ಯಾರ್ಥಿ ವೇತನ ದೊರೆಯಲಿದ್ದು, ಕಾರ್ಯಕ್ರಮದಲ್ಲಿ ಅಧ್ಯಯನದ ಬಗ್ಗೆ ವೈಯಕ್ತಿಕ ಸಮಾಲೋಚನೆ, ಲಭ್ಯವಿರುವ ವಿದ್ಯಾರ್ಥಿ ವೇತನ ಮತ್ತು ಸ್ಥಳದಲ್ಲೇ ಅರ್ಹತಾ ಮೌಲ್ಯಮಾಪನ, ವಿವಿ ಪ್ರವೇಶ, ವೀಸಾ, ಹಣಕಾಸು, ಆರೋಗ್ಯ ವಿಮೆ ಕುರಿತು ಮಾರ್ಗದರ್ಶನ, ಭಾಷಾ ನೈಪುಣ್ಯತೆಯ ಮಾರ್ಗದಶನ ಹಾಗೂ ಅರ್ಜಿ ಸಲ್ಲಿಕೆಯ ಸಹಾಯ ಪಡೆಯಬಹುದು ಎಂದು ಅವರು ಹೇಳಿದರು.
ಆಸಕ್ತ ಅಭ್ಯರ್ಥಿಗಳು hಣಣಠಿs:sಣuಜಥಿಚಿbಡಿoಚಿಜ.ಞsಜಛಿಞಚಿಡಿಟಿಚಿಣಚಿಞಚಿ.ಛಿom ಮೂಲಕ ಸೆ.೬ರೊಳಗೆ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ೭೩೩೮೬೭೪೭೯೧ಗೆ ಕರೆ ಮಾಡಬಹುದು.

































