
ವಿಟ್ಲ- ವಿಟ್ಲ ಲಯನ್ಸ್ ಕ್ಲಬ್ ಗೆ ಲಯನ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅಧಿಕೃತ ಬೇಟಿ ನೀಡಿದರು. ಈ ಸಂದರ್ಭದಲ್ಲಿ ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಮಂಗಿಲಪದವು ಅಂಗನವಾಡಿಗೆ ಬೆಂಚುಗಳನ್ನು, ಚಂದಳಿಕೆ ಶಾಲೆಗೆ ಇಂಟರ್ ಕಾಮ್ ಮೈಕ್ ವ್ಯವಸ್ಥೆ, ವಿಟ್ಲ ಸರಕಾರಿ ಪ್ರೌಢಶಾಲೆ ಗೆ ಪ್ಲಾಸ್ಟಿಕ್ ಚೈರ್ ಗಳು ಮತ್ತು ಕಬಡ್ಡಿ ಮ್ಯಾಟ್, ವಿಟ್ಲ ನಾಡ ಕಚೇರಿ ಗೆ ಶೌಚಾಲಯ ಮತ್ತು ಶೀಟ್ ಅಳವಡಿಕೆ, ಬಸ್ ಶೆಲ್ಟರ್ ದುರಸ್ತಿ ಮೊದಲಾದ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಮಾಜಿ ಗವರ್ನರ್ ಡಾ ಗೀತಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಕಾರ್ಯದರ್ಶಿ ಬಾಲಕೃಷ್ಣ ಗೌಡ ಪೊನ್ನೆತ್ತಡಿ, ಕೋಶಾಧಿಕಾರಿ ದೇವಿಪ್ರಸಾದ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ರಜಿತ್ ಆಳ್ವ, ವಲಯಾಧ್ಯಕ್ಷೆ ಜೆಸಿಂತಾ ಮಸ್ಕರೇನಸ್, ಸದಸ್ಯರುಗಳಾದ ಜಲಜಾಕ್ಷಿ ಬಾಲಕೃಷ್ಣ, ಮಂಗೇಶ್ ಭಟ್ ವಿಟ್ಲ, ಪುಷ್ಪಲತಾ, ಅರವಿಂದ ರೈ, ಗಂಗಾಧರ್, ಆಂಟೊನಿ ಲೋಬೊ, ವಿನ್ನಿ ಮಸ್ಕರೇನಸ್, ಡಾ ಗಾಯತ್ರಿ ಗೀತಪ್ರಕಾಶ್, ಸಂತೋಷ್ ಶೆಟ್ಟಿ ಪೆಲತ್ತಡ್ಕ, ಸುದೇಶ್ ಭಂಡಾರಿ, ಲಿಯೋ ಕ್ಲಬ್ ಅಧ್ಯಕ್ಷೆ ಪ್ರಾಪ್ತಿ ಶೆಟ್ಟಿ, ಕಾರ್ಯದರ್ಶಿ ಎನ್ ಸಾಗರ್, ಕೋಶಾಧಿಕಾರಿ ಅನಘಾ, ಲಯನ್ ಮತ್ತು ಲಿಯೋ ಸದಸ್ಯರು ಉಪಸ್ಥಿತರಿದ್ದರು.






























