ವಿಟ್ಲ ಯಕ್ಷೋತ್ಸವ ೨೦೨೫”

ವಿಟ್ಲ- ಯಕ್ಷಭಾರತ ಸೇವಾ ಪ್ರತಿಷ್ಠಾನ ವಿಟ್ಲ ಮತ್ತು ಲಯನ್ಸ್ ಕ್ಲಬ್ ವಿಟ್ಲ ಇವರ ಆಶ್ರಯದಲ್ಲಿ ” ವಿಟ್ಲ ಯಕ್ಷೋತ್ಸವ ೨೦೨೫” ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಎರಡು ದಿನದ ಅಮೋಘ ಯಕ್ಷಗಾನ ಪ್ರದರ್ಶನ ಚಂದಳಿಕೆ ಭಾರತ ಆಡಿಟೋರಿಯಂನಲ್ಲಿ ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗುರು ಸಬ್ಬಣ್ಣಕೋಡಿ ರಾಮ ಭಟ್ ದೀಪ ಬೆಳಗಿ ಉದ್ಘಾಟಿಸಿದರು.
ಅತಿಥಿಗಳಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ಭಗವತೀ ದೇವಸ್ಥಾನದ ಮೊಕ್ತೇಸರ ಕೇಶವ ವಿಟ್ಲ, ಸುರೇಶ್ ಬನಾರಿ,ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಇವರು ಭಾಗವಹಿಸಿದ್ದರು. ಯಕ್ಭಬಾರತ ಪ್ರತಿಷ್ಠಾನ ದ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಟೇಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಸುಚಿತ್ರಾ ರಮಾನಾಥ ವಂದಿಸಿದರು ವಿಶ್ವನಾಥ ಗೌಡ ನಿರೂಪಿಸಿದರು.