ವಿಟ್ಲ:ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ

ವಿಟ್ಲ ವಿಶ್ವ ಹಿಂದು ಪರಿಷದ್ ಮಾತೃ ಮಂಡಳಿ, ದುರ್ಗಾವಾಹಿನಿ ಇದರ ಆಶ್ರಯದಲ್ಲಿ ೩೧ ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆಯು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ವೇದ ಮೂರ್ತಿ ಉದಯೇಶ ಕೆಲಿಲಾಯರ ಪೌರೋಹಿತ್ಯ ದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಸನ್ನ ಚೆಕ್ಕಿಮನೆ ಇವರು ಧಾರ್ಮಿಕ ಉಪನ್ಯಾಸ ನೀಡಿದರು. ಮಾತೃ ಮಂಡಳಿಯ ಅಧ್ಯಕ್ಷೆ ಚಂದ್ರಕಾತಿ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷೆ ರಾಜೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವ್ಯ ರಾಜೇಶ್ ಸ್ವಾಗತಿಸಿದರು. ಅಧ್ವಿಕ, ಆರಾಧ್ಯ ಮತ್ತು ಶ್ರಾವಣಿ ಆಶಯಗೀತೆ ಹಾಡಿದರು. ರಶ್ಮಿ ಹರೀಶ್ ವಂದಿಸಿದರು. ರೇವತಿ ನಿರೂಪಿಸಿದರು.