
ಸಂಜೆವಾಣಿ ನ್ಯೂಸ್
ಮೈಸೂರು: ಮೇ.29:- ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯದ ಹಾದಿಯು ಉಜ್ವಲವಾಗಿ ಇರಬೇಕಾದರೆ ಅಂತರ್ಶಿಸ್ತೀಯ ಅಧ್ಯಯನ ಹೆಚ್ಚಾಗಬೇಕು ಎಂದು ಭಾರತೀಯ ವಿಜ್ಞಾನ ಭವನದ ಮಾಜಿ ನಿರ್ದೇಶಕ ಹಾಗೂ ಖ್ಯಾತ ವಿಜ್ಞಾನಿ ಪೆÇ್ರ.ಗೋವರ್ಧನ್ ಮೆಹ್ತಾ ಅಭಿಪ್ರಾಯಪಟ್ಟರು.
ಮೈಸೂರು ವಿವಿಯ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಮೈಸೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಅಧ್ಯಯನ ವಿಭಾಗ, ಸಾವಯವ ರಾಸಾಯನಿಕ ಶಾಸ್ತ್ರ ಅಧ್ಯಯನ ವಿಭಾಗದ ಸಹಯೋಗದಲ್ಲಿ ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ ಅವರ 70ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆನ್ವಿಕ ಔಷಧಿ ಕ್ಷೇತ್ರದ ಹೊಸ ಸವಾಲುಗಳು ಹಾಗೂ ನಾವೀನ್ಯತೆ ಕುರಿತಾದ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿನ ಸಂಶೋಧನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ನೀಡಬೇಕಾದರೆ ಅಂತರಶಿಸ್ತೀಯ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿರುವುದು ಇಂದಿನ ತುರ್ತು. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳನ್ನು ಬೆಸೆಯುವ ಸಂವಹÀನ ಭಾಷೆ ಈ ತನಕ ಸಿದ್ಧವಾಗದಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು. ಆಗ ಮಾತ್ರ ಅರ್ಥಪೂರ್ಣ ಸಂಶೋಧನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಂಗಪ್ಪ ಅವರು ತಮ್ಮ ಬದುಕಿನಲ್ಲಿ ಶಿಸ್ತಿಗೆ ಅತ್ಯಂತ ಮಹತ್ವ ನೀಡಿದ್ದರಿಂದಲೇ ಅವರು ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಅವರು ಸಂಶೋಧನಾ ಕಾರ್ಯದಲ್ಲಿ ಎದುರಾಗುವ ಎಲ್ಲಾ ಸಮಸ್ಯೆ, ಸವಾಲುಗಳನ್ನು ಎದುರಿಸಿ ವಿಜ್ಞಾನ ಕ್ಷೇತ್ರಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿದರು. ಶಿಕ್ಷಣ, ಆಡಳಿತ ಕ್ಷೇತ್ರದಲ್ಲೂ ಶಿಸ್ತಿಗೆ ಆದ್ಯತೆ ನೀಡಿ ಯಶಸ್ವಿಯಾದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಪೆÇ್ರ.ಟಿ.ಪಿ.ಸಿಂಗ್ ಮಾತನಾಡಿ, ರಂಗಪ್ಪ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅಂಕಿ-ಅಂಶಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ವೈಜ್ಞಾನಿಕವಾಗಿ ಸಂಶೋಧನಾ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಮಾತನಾಡಿ, ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಸಹಕಾರ ಬಹಳ ಮುಖ್ಯ. ರಂಗಪ್ಪ ಅವರು ಅತ್ಯುತ್ತಮ ಸಂಶೋಧಕರಾಗಿದ್ದ ಕಾರಣದಿಂದ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಿಗೂ ಸಹಕಾರ ನೀಡುತ್ತಿದ್ದರು ಎಂದು ಹೇಳಿದರು.
ಪೆÇ್ರ.ಕೆ.ಎಸ್.ರಂಗಪ್ಪ, ಸಿಡಿಆರ್‍ಐನ ಮಾಜಿ ನಿರ್ದೇಶಕ ಪೆÇ್ರ.ತಪಸ್ ಕುಮಾರ್ ಕುಂದು, ಸನ್ ಫಾರ್ಮಾ ರಿಸರ್ಚ್ ಕಂಪನಿಯ ನಿರ್ದೇಶಕ ಡಾ.ಟಿ.ರಾಜಾಮನ್ನಾರ್, ಪೆÇ್ರ.ನಾಗಣ್ಣ ಮತ್ತಿತರರು ಹಾಜರಿದ್ದರು.