ವಿಜೃಂಭಣೆಯಿಂದ ನಡೆದ ಹರದನಹಳ್ಳಿ ಶ್ರೀ ಕುಂಟಮ್ಮತಾಯಿ ಕೊಂಡೋತ್ಸವ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.23-
ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಾಯಕ ಜನಾಂಗದ ವತಿಯಿಂದ ಶ್ರೀ ಕುಂಟಮ್ಮತಾಯಿ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಶ್ರೀ ಕುಂಟಮ್ಮತಾಯಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿಯಿಂದಲೆ ದೇವರಿಗೆ, ಅಭಿμÉೀಕ, ವೀಶೇಷ ಪೂಜೆ ಪುನಸ್ಕಾರ ಸಲ್ಲಿಸಿ, ದೇವರಿಗೆ ಹೂವಿನಿಂದ ಅಲಂಕರಣೆ ಮಾಡಿ, ಹಸಿರು ತೊರಣಗಳಿಂದ ಶೃಂಗರಿಸಿ ಇತರ ಪೂಜಕೈಂಕರ್ಯಗಳು ನಡೆದವು


ಬೆಳಗ್ಗೆ ಗ್ರಾಮದ ಪ್ರಸಿದ್ದ ಕಲ್ಯಾಣಿಕೊಳದ ಬಳಿ, ದೇವರ ಮೂರ್ತಿ, ಕಂಡಾಯಗಳಿಗೆ ಪೂಜೆಸಲ್ಲಿಸಿ, ಅಲ್ಲಿಂದ ಹೊರಟ ಕೊಂಡೋತ್ಸವದ ಮೆರವಣಿಗೆ, ಸತ್ಕಾ, ಸೂರಿಪನಕ, ಡೊಳ್ಳುಕುಣಿತ, ನಗಾರಿ, ತಮಟೆ, ಮಂಗಳವಾದ್ಯ, ಗಾಡಿಗೊಂಬೆ, ಇನ್ನಿತರ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಾದ ನಾಯಕರಬೀದಿ, ಶ್ರೀಸಿದ್ದಲಿಂಗೇಶ್ವರ ದೇವಸ್ಥಾನ ಹಾಗೂ ಮಾರಮ್ಮನ ಬೀದಿ, ಅಮಚವಾಡಿ ರಸ್ತೆ ಮೂಲಕ ಸಾಗಿ ದೇವಸ್ಥಾನ ಅವರಣದಲ್ಲಿ ಕೊನೆಗೊಂಡಿತು, ಬಳಿಕ ಬೆಳಗ್ಗೆ 9,50 ರಲ್ಲಿ ಕೊಂಡೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಜಿಲ್ಲೆಯ ವಿವಿದ ಭಾಗಗಳಿಂದ ಆಗಮಿಸಿದ್ದ ಭಕ್ತರು ಕೊಂಡೋತ್ಸವವನ್ನು ಕಣ್ತುಂಬಿಕೊಂಡರು,


ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಕೋಮಿನ ಯಜಮಾನರು, ಹಾಗೂ ಗ್ರಾಮಸ್ಥರು, ಪೆÇೀಲಿಸ್ ಸಿಬ್ಬಂದಿವರ್ಗ ಇತರರು ಪಾಲ್ಗೊಂಡಿದ್ದರು.