
ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.29 ಜಿಲ್ಲಾಧ್ಯಂತ ಶುಕ್ರವಾರ ಅಣ್ಣ ತಂಗಿ, ಅಕ್ಕ ತಮ್ಮಂದಿರ ಪವಿತ್ರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ರಕ್ಷಣೆಯ ಬಂಧ: ‘ರಕ್ಷಾ ಬಂಧನ’ ಎಂದರೆ ರಕ್ಷಣೆಯ ಗಂಟು ಅಥವಾ ಬಂಧನ ಎಂದರ್ಥ. ಪವಿತ್ರ ರಕ್ಷಾ ಬಂಧನ ಹಬ್ಬವನ್ನು ಜಿಲ್ಲೆಯಾದ್ಯಂತ ಮನೆ-ಮನೆಗಳಲ್ಲಿ ಸಹೋದರಿಯರು, ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಆಚರಿಸಿದರು.
ಸ್ಥಳೀಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಹಾಗೂ ಮಂಡಲದ ಮುಖಂಡರು ಪಟ್ಟಣ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಗುರುರಾಜ ಕಟ್ಟಿಮನಿ ಹಾಗೂ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಗೋವರ್ಧನ್, ಮಂಜುನಾಥ್, ರಾಘವೇಂದ್ರ, ನಜೀರ್ ಸಾಬ್, ರಾಘವೇಂದ್ರ, ದೇವೇಂದ್ರಪ್ಪ ಅವರಿಗೆ ಬಿಜೆಪಿ ಮಹಿಳಾ ಕಾರ್ಯಕರ್ತರು ರಾಖಿ ಕಟ್ಟಿ, ಸಿಹಿ ಹಂಚುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಉಮಾದೇವಿ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಅನುರಾಧ, ಮಹಿಳಾ ಮುಖಂಡರಾದ ಲಲಿತಾ ಗೌರಿ, ಲಲಿತ, ಜಯಶ್ರೀ, ರೇಣುಕಮ್ಮ, ಶೋಭಾ, ಕಮಲ, ವಿಜಯಲಕ್ಷ್ಮಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಪ್ರಧಾನ ಕಾರ್ಯದರ್ಶಿ ಮಧುರ ಚನ್ನಶಾಸ್ತ್ರಿ. ಜಿಲ್ಲಾ ಐಟಿ ವಿಭಾಗದ ನಾಗರಾಜ್, ಮಂಡಲ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಇಂತಿಯಾಜ್ ಮತ್ತಿತರರು ಇದ್ದರು.































