ಸಂಜೆವಾಣಿ ನ್ಯೂಸ್
ಮೈಸೂರು.ನ.03:- ಮೈಸೂರಿನ ಸಮತ ಭವನ್, ಪೃಥ್ವಿ ವಲ್ರ್ಡ್, ಚಾಮುಂಡಿ ವಿಹಾರ ಬಡಾವಣೆಯಲ್ಲಿ ಮಾಡ್ಯುಲರ್ ಕೃತಕ ಅಂಗಗಳು ಕೈ ಮತ್ತು ಕಾಲಿನ ಅಂಗಗಳ ಮಾಪನದ ವಿಕಲ ಚೇತನರಿಗೆ ಉಚಿತ ಶಿಬಿರ ಕಾರ್ಯಕ್ರಮವನ್ನು ಹಲವು ಸಂಘ ಸಂಸ್ಥೆಗಳಾದ ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ಮೈಸೂರು, ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಮೈಸೂರು, ಆಶ್ರಯ್ ಸೇವಾ ಸನ್ ಸ್ಥಾನ್, ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317 ಜಿ ವತಿಯಿಂದ ಲಯನ್ ಮಹಾವೀರ್ ಚಂದ್ ಬನ್ಸಾಲಿ ಲಯನ್ ಜಿಲ್ಲಾ ಚೇರ್ಮನ್ ರವರ ನೇತೃತ್ವದಲ್ಲಿ ಸುಮಾರು 250ಕ್ಕೂ ಹೆಚ್ಚು ಅಂಗವಿಕಲರಿಗೆ ಕೃತಕ ಕೈ ಕಾಲುಗಳ ಅಳತೆ ತೆಗೆದುಕೊಳ್ಳಲಾಗಿದ್ದು ಆ ಮೂಲಕ ಅರ್ಥಪೂರ್ಣವಾದ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದ್ದು ಮುಖ್ಯ ಅತಿಥಿಗಳಾಗಿ ಕೆ ಆರ್ ಕ್ಷೇತ್ರದ ಶಾಸಕ ಶ್ರೀವತ್ಸ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಗೋಪಾಲ್ ಗೌಡ ಆಸ್ಪತ್ರೆಯ ಖ್ಯಾತ ವೈದ್ಯರಾದ ಸುಶ್ರುತ್ ಗೌಡ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಇನ್ನು ಇದೇ ವೇಳೆ ಕಾರ್ಯಕ್ರಮವನ್ನು ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಲಯನ್ ಹೇಮಂತ್ ಕುಮಾರ್ ಬನ್ಸಾಲಿ ಅವರು ನಾವು ಈ ಮೇಲೆ ತಿಳಿಸಿರುವಂತೆ ಹಲವು ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಸುಮಾರು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಕೃತಕ ಕೈಕಾಲುಗಳ ಜೋಡಣೆ ಕಾರ್ಯಕ್ರಮವನ್ನು ಸಾವಿರಾರು ಅಂಗವಿಕಲರಿಗೆ ನೆರವೇರಿಸಿಕೊಂಡು ಬಂದಿದ್ದೇವೆ ನಮಗೆ ನೆರವಾಗಿ ಇರುವ ಪ್ರತಿಯೊಬ್ಬರಿಗೂ ಈ ಮೂಲಕ ಧನ್ಯವಾದ ತಿಳಿಸುತ್ತೇನೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ಸೇವಾ ಕಾರ್ಯಕ್ರಮವನ್ನು ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತೇವೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ ಇನ್ನು ಲಯನ್ ಜಿಲ್ಲಾ ಚೇರ್ಮೆನ್ ಮಹಾವೀರ್ ಚಂದ್ ಬನ್ಸಾಲಿ ಅವರು ಮಾತನಾಡಿ ಕಾರ್ಯಕ್ರಮದ ದೇಯೋದ್ದೇಶಗಳ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ಮೈಸೂರ್ ನ ಮದನ್ ಲಾಲ್ ಮಾರೋ ಅಧ್ಯಕ್ಷರು, ವಿನೋದ್ ಕುಮಾರ್ ಜೈನ್ ಚೇರ್ಮನ್, ಸ್ಥಾನಕ್ ವಾಸಿ ಜೈನ್ ಸಂಘದ ಅಧ್ಯಕ್ಷರಾದ ಸುಭಾಷ್ ಡಾರ್ಡ, ಕಾರ್ಯದರ್ಶಿ ಬುದ್ಧಮಲ್ ಜೈನ್, ಸಾಧು ಮಾರ್ಗಿ ಸಂಘ ಮೈಸೂರಿನ ಅಧ್ಯಕ್ಷರಾದ ಸುರೇಶ್ ಡಕ್, ಸಮ್ರತ್ ಲಾಲ್ ಡಕ್, ಮನೀಶ್ ಡಕ್, ಮೇನ ದೇವಿ ಬಾಗ್ ಮಾರ್ ತೇರಾ ಪಂತ್ ಸಭಾಧ್ಯಕ್ಷರಾದ ಪ್ರಕಾಶ್ ಡಕ್ ರಾಯಲ್ ಸೇರಿದಂತೆ ಹಲವು ಗಣ್ಯರು, ನೂರಾರು ಸಂಖ್ಯೆಯಲ್ಲಿ ಅಂಗವಿಕಲರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


























