ವಾಲ್ಮೀಕಿ ಮಹರ್ಷಿ ಕಂಚಿನ ಪುತ್ತಳಿ ಸೇರಿದಂತೆ ಭವನಕ್ಕೆ 25 ಲಕ್ಷ  ರೂ. ಅನುದಾನ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.29 ಪ
ಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿಯ ಕಂಚಿನ ಪುತ್ಥಳಿ ನಿರ್ಮಾಣ  ಹಾಗೂ ಭವನ ಪೂರ್ಣಗೊಳ್ಳಲು 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ್ ಹೇಳಿದರು.
 ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ನಡೆದ ವಾಲ್ಮೀಕಿ ನಾಯಕ ನೌಕರ ಸಂಘ ದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶೀಘ್ರದಲ್ಲಿ 50 ಲಕ್ಷ ರೂ. ಮಹರ್ಷಿಯ ಕಂಚಿನ ಪುತ್ಥಳಿ ಸ್ಥಾಪಿಸಲಾಗುವುದು.ನಾಯಕ ಸಮಾಜದಲ್ಲಿ ಈಗ ಸಾಕಷ್ಟು ಪ್ರತಿಭಾವಂತ ಮಕ್ಕಳು ಇದ್ದಾರೆ. ಅವರ ಉನ್ನತ ಶಿಕ್ಷಣಕ್ಕಾಗಿ ಸರ್ಕಾರ ಸೌಲಭ್ಯಗಳು  ಕಲ್ಪಿಸಲಾಗಿದೆ. ಅದರ ಉಪಯೋಗ ಪಡೆಯುವ ಮೂಲಕ ತಂದೆ ತಾಯಿಗಳ ಕನಸು ಈಡೇರಿಸುವ ಜೊತೆಗೆ ಅವರನ್ನು ಸಾಕುವಂತಹ ಸಂಸ್ಕಾರ ಕಲಿಯಬೇಕು. ಇಂತಹ ಪುರಸ್ಕಾರಗಳಿಂದ ಮುಂದಿನ ಪೀಳಿಗೆಯೂ ಕೂಡ ಪ್ರತಿಭಾ ಪುರಸ್ಕಾರದಲ್ಲಿ ಭಾಗಿಯಾಗಲು ಛಲ ಹುಟ್ಟಿಕೊಳ್ಳುತ್ತದೆ ಎಂದರು.
ಸಂಸದ ಈ ತುಕಾರಾಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪಾಲಕರು ಲಿಂಗ ತಾರತಮ್ಯ ಮಾಡದೇ ಎಲ್ಲಾ ತಮ್ಮ ಮಕ್ಕಳಿಗೆ  ಉನ್ನತ ಶಿಕ್ಷಣ ಕೊಡಿಸಬೇಕು.ಸಾಧನೆಗೆ ಒಬ್ಬ ಗುರು ಒಂದು ಗುರಿಯಿಟ್ಟುಕೊಂಡು
ಮುಂದೆ ನಡೆದರೆ ಯಶಸ್ವಿ ಯಾಗಲು ಸಾಧ್ಯ.ಪ್ರತಿಭಾ ಪುರಸ್ಕಾರ ನಡೆಸುವ ಮೂಲಕ ಮಕ್ಕಳಲ್ಲಿ ಮತ್ತೊಷ್ಟು ಉತ್ಸಹ ತುಂಬುತ್ತಿರುವುದು ಶ್ಲಾಘನೀಯ. ಭವನಕ್ಕೆ ಮುಂದಿನ ದಿನಗಳಲ್ಲಿ
 ಮೈಕ್ ಶಾಮಿಯಾನ ಪಾತ್ರೆ ಸಾಮಾನುಗಳು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದರು.
 ಸಂಡೂರಿನ  ಶಾಸಕಿ ಅನ್ನಪೂರ್ಣ, ವಿಎಸ್ಎಸ್ಎನ್ ಅಧ್ಯಕ್ಷ ಕನ್ನಳ್ಳಿ ಚಂದ್ರಶೇಖರ್, ಪುರಸಭೆಯ ಸದಸ್ಯ ಜೋಗಿ ಹನುಮಂತ  ಮಾತನಾಡಿದರು.
 ಕಾರ್ಯಕ್ರಮದ ಸಾನಿಧ್ಯವನ್ನು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ವಹಿಸಿ ಮಾತನಾಡಿದರು.
 ಕಾರ್ಯಕ್ರಮದ ಪ್ರಸ್ತಾವಿಕವನ್ನು ವಾಲ್ಮೀಕಿ ನೌಕರ ಸಂಘದ ತಾಲೂಕ ಅಧ್ಯಕ್ಷ ಚಂದ್ರಮಪ್ಪ ಮಾತನಾಡಿದರು.
 ಈ ವೇಳೆ ನಿವೃತ್ತ ನೌಕರರಿಗೂ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
 ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷೆ ಅಂಬಿಕಾ ದೇವಿಂದ್ರಪ್ಪ,  ವಾಲ್ಮೀಕಿ ಸಮಾಜದ ಅಧ್ಯಕ್ಷ ಟಿ ವೆಂಕೋಬಪ್ಪ, ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಮುಖಂಡರಾದ ಬಿವಿ ಶಿವಿಯೋಗಿ, ಅಕ್ಕಿ ತೋಟೇಶ್, ವೈ ಮಲ್ಲಿಕಾರ್ಜುನ,ಡಾ. ಸೂರಪ್ಪ, ಪೂರ್ಣಿಮಾ, ಕವಿತಾ, ಹೊನ್ನೂರಪ್ಪ, ಶಿಕ್ಷಕ ಮಲ್ಲಿಕಾರ್ಜುನ, ಇತರರಿದ್ದರು.
 ಕಾರ್ಯಕ್ರಮವನ್ನು ಟಿ ಸೋಮಶೇಖರ್, ಮೋಹನ್ ಅಣಜಿ,ರಾಮಕೃಷ್ಣ ನಿರ್ವಹಿಸಿದರು.