
ಸಂಜೆವಾಣಿ ವಾರ್ತೆ
ಹನೂರು.ಆ.8:- ವಾಲ್ಮೀಕಿ ಮಹರ್ಷಿಯವರ ತತ್ವ ಆದರ್ಶಗಳನ್ನ ಬಗ್ಗೆ ನಾವು ತಿಳಿದುಕೊಳ್ಳಬೇಕು ರೂಡಿಸಿಕೊಳ್ಳಬೇಕು. ಮಕ್ಕಳಿಗೆ ತಿಳಿಸಿಕೊಡಬೇಕು. ಎಲ್ಲರೂ ಸಹ ಅರಿತುಕೊಂಡು ನಮ್ಮ ಜೀವನದ ಸಾಂದರ್ಭಿಕವಾಗಿ ಅವರು ತಿಳಿಸಿ ಕೊಟ್ಟಂತಹ ವಿಚಾರಗಳನ್ನು ಅನುಸರಿಸಿ ಕೊಂಡು ಹೋದರೆ ಸಾರ್ಥಕತೆಯ ಜೀವನ ನಮ್ಮದಾಗುತ್ತದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ಅವರು ತಿಳಿಸಿದರು.
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು.
ಜಯಂತಿ ಆಚರಣೆ ಕಾರ್ಯಕ್ರಮಗಳು ಸಂಪ್ರದಾಯ ಸಂಸ್ಕೃತಿ ಎತ್ತಿ ಹಿಡಿಯುವಂತಹ ಕೆಲಸವಾಗುತ್ತದೆ.
ಕಳೆದೆರಡು ವರ್ಷಗಳ ಹಿಂದೆ ವಾಲ್ಮೀಕಿ ಮಹರ್ಷಿಯವರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗಿತ್ತು. ಈ ಬಾರಿ ಬಹಳ ಒಂದು ವಿಶೇಷ ದಿನ ಅದರಲ್ಲೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬಹಳ ಸರಳವಾಗಿ ಅರ್ಥಪೂರ್ಣವಾಗಿ ನಮ್ಮ ತಾಲೂಕಿನಲ್ಲಿ ನಡೆದಿದೆ ಎಂದರು.
ಕಳೆದ ಬಾರಿ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಸಮುದಾಯದವರು ಸಮಾಜಕ್ಕೆ ನಿವೇಶನ ಹಾಗೂ ವಾಲ್ಮೀಕಿ ಭವನ ನಿರ್ಮಾಣವಾಗಬೇಕು ಎಂಬ ಮನವಿಯನ್ನು ನನಗೆ ಕೊಟ್ಟಿದ್ದರು. ಅದೇ ಸಂದರ್ಭದಲ್ಲಿ ನಿವೇಶನ ಸಮುದಾಯ ಭವನ ನಿರ್ಮಾಣ ಮಾಡಿಸಿಕೊಡುವ ಬಗ್ಗೆ ಸಮುದಾಯದವರಿಗೆ ನಾನು ಮಾತು ಕೊಟ್ಟಿದ್ದೆ. ಅದರಂತೆ ನಿವೇಶನವನ್ನು ಗುರುತು ಮಾಡಲಾಗಿದೆ.
ಗುರುತಿಸಿರುವ ನಿವೇಶನಕ್ಕೆ ಸರಿಯಾದ ದಾಖಲಾತಿಗಳನ್ನ ಸಿದ್ಧಪಡಿಸಿ ನಂತರ ಸಮುದಾಯಕ್ಕೆ ಹಸ್ತಾಂತರ ಮಾಡುವ ಮುಖಾಂತರ ಅವರು ತಮ್ಮ ಮನದಾಳದ ಆಶಯವನ್ನು ಹೊತ್ತುಕೊಂಡು ನನಗೆ ಮನವಿಯನ್ನ ಕೊಟ್ಟಿದ್ದರು ಜೊತೆಗೆ ಇಡಿ ತಾಲೂಕಿನ ಸಮಾಜದ ಆಸೆಯಂತೆ ತಾಲೂಕಿನ ಹೃದಯ ಭಾಗದಲ್ಲಿ ಸಮುದಾಯ ಭವನ ನಿರ್ಮಾಣವಾಗಬೇಕು ಎಂಬ ಆಶಯದೊಂದಿಗೆ ಅದನ್ನು ಬಹಳಷ್ಟು ಬೇಗ ಈಡೇರಿಸುವಂತ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಿವಣ್ಣ ಮುಖ್ಯ ಭಾಷಣಕಾರರಾಗಿ ಶಿವಣ್ಣ ಅವರು ಮಾತನಾಡಿದರು, ಈ ಸಂದರ್ಭದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ತಹಶೀಲ್ದಾರ್ ಚೈತ್ರಾ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್.ಎಸ್, ಚೆಸ್ಕಾಂ ಎ.ಇ.ಇ ರಂಗಸ್ವಾಮಿ, ಪಟ್ಟಣ ಪಂ ಅಧ್ಯಕ್ಷೆ ಮಮ್ತಾಜ್ ಬಾನು, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರಾಚಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಆನಂದಮೂರ್ತಿ, ಬಿ.ಇ.ಒ ಮಹೇಶ್, ಎ.ಇ.ಇ ಚಿನ್ನಣ್ಣ, ಇ.ಒ ಉಮೇಶ್ ಸೇರಿದಂತೆ ಇನ್ನಿತರರು ಇದ್ದರು.
































