
ಸಂಜೆವಾಣಿ ವಾರ್ತೆ
ತಿ.ನರಸೀಪುರ ಡಿ.25- ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಶ್ರೀ ಸೂರ್ಯಸಿಂಹಾಸನ ಮಠದಲ್ಲಿ ಬುಧವಾರ ಆಯೋಜಿಸಿದ್ದ ವರ್ಧಂತಿ ಮಹೋತ್ಸವದಲ್ಲಿ
ಪಟ್ಟಣದ ಪೂಜಿತ್ ಮೆಡಿಕಲ್ಸ್ ಮಾಲೀಕ ಕುಮಾರ್ ಅವರು ಹೊರತಂದಿರುವ ನೂತನ ವರ್ಷದ ದಿನ ದರ್ಶಿಕೆಯನ್ನು ಸಿದ್ದಲಿಂಗಶಿ ವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು.
ವಾಟಾಳು ಶ್ರೀಗಳ 77 ನೇ ವರ್ಷದ ವಧ್ರ್ಯುಂತೋತ್ಸವ ಕಾರ್ಯಕ್ರಮದ ವೇಳೆ ಶ್ರೀಗಳು ಪೂಜಿತ್ ಮೆಡಿಕಲ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭ ಕೋರಿದರು. ಕ್ಯಾಲೆಂಡರ್ ಪ್ರತಿಯೊಬ್ಬರಿಗೂ ಅವಶ್ಯಕವಿರುವ ಸಾಧನವಾಗಿದೆ.ದಿನದ ವೇಳಾ ಪಟ್ಟಿ ಸಮಯ ನಿಗದಿ ಮಾಡುವ ಪ್ರಕ್ರಿಯೆಗೆ ಕ್ಯಾಲೆಂಡರ್ ಉತ್ತಮ ಸಾಧನವಾಗಿದೆ.ಮೆಡಿಕಲ್ ಕುಮಾರ್ ಹೊರತಂದಿರುವ ದಿನದರ್ಶಿಕೆಯ ಮುದ್ರಣ ಬಹಳ ಸುಂದರವಾಗಿದ್ದು,ಅವರ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಶ್ರೀ ಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂಜಿತ್ ಮೆಡಿಕಲ್ಸ್ ಕುಮಾರ್ ಸೇರಿದಂತೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್, ವೈದ್ಯ ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಎಸ್.ಕೆ.ಕಿರಣ್, ಹಿರಿಯೂರು ಸತ್ಯಪ್ಪ, ತೋಂಟೇಶ್, ಕಿರಗಸೂರು ಮಹದೇವಸ್ವಾಮಿ, ಆಡಿಟರ್ ಮಂಜುನಾಥ್, ಕುರುಬೂರು ಶಿವು, ಅಕ್ಕಿ ನಾಗಪ್ಪ, ರಾಜಶೇಖರ್, ಹಿರಿಯೂರು ಡೇರಿ ಅಧ್ಯಕ್ಷ ಬಸವರಾಜು, ಎಲ್‍ಐಸಿ ಪ್ರಕಾಶ್ ಮತ್ತಿತರರಿದ್ದರು.

























