
ಸುಳ್ಯ:ಪತಿ ಹಾಗೂ ಪತಿಯ ಮನೆಯವರು ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಪತಿಗೆ ನ್ಯಾಯಾಂಗ ಬಂಧನ ವಿಧಿಸಿದ ಘಟನೆ ನಡೆದಿದೆ.
ಎಲಿಮಲೆ ಸಮೀಪದ ಸೇವಾಜೆಯ ಜನಾರ್ಧನ ಎಂಬವರ ಪತ್ನಿ ಮಂಗಳೂರಿನ ಮೂಡುಶೆಡ್ಡೆಯ ರೇಷ್ಮಾ ಎಂಬವರು ದೂರು ನೀಡಿದ್ದಾರೆ. ೨೦೨೫ ಮೇಯಲ್ಲಿ ನನ್ನ ವಿವಾಹವು ಸೇವಾಜೆಯ ಜನಾರ್ದನರೊಂದಿಗೆ ಆಗಿದೆ. ವಿವಾಹದ ಖರ್ಚು ಹಾಗೂ ಚಿನ್ನಾಭರಣಗಳಿಗೆ ಸೇರಿ ಸುಮಾರು ೩೫ ಲಕ್ಷದಷ್ಟು ಹಣ ನನ್ನ ಮನೆಯವರಿಗೆ ಖರ್ಚು ಮಾಡಿದ್ದಾರೆ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ರೇಷ್ಮಾ ಅವರು ಮಂಗಳೂರಿನ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತಿ ಜನಾರ್ಧನ, ಅತ್ತೆ ಗುಲಾಬಿ, ನಾದಿನಿಯರಾದ ಶಾರದಾ ಮತ್ತು ರೇಖಾ ಎಂಬವರ ವಿರುದ್ಧ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪತಿ ಜನಾರ್ಧನರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಗೊಳಿಸಲಾಗಿದೆ.




























