ವಚನ ವಿಜಯದಶಮಿ ಚೆಂದ-ಎಸ್.ಟಿ.ಎಸ್

ಬೆಂಗಳೂರು,ಅ೩:ದಸರೆಯ ಹನ್ನೊಂದು ದಿನಗಳಲ್ಲಿಯೂ ಕನ್ನಡದ ಸ್ವತಂತ್ರ್ಯ ಧೀರೆಯರ ನೆನೆಯುವ ವಚನ ದಸರಾ ಅರ್ಥಪೂರ್ಣವಾಗಿದ್ದು ಬಹು ಚೆಂದ ಕಾರ್ಯ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದರು.


ಕಲ್ಯಾಣ ಬಡಾವಣೆಯಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ದಸರೆಯ ಸಮಾರೋಪದಲ್ಲಿ ಮಾತನಾಡಿದ ತಮ್ಮ ಯಶವಂತಪುರ ಕ್ಷೇತ್ರದ ಎಲ್ಲ ಬಡಾವಣೆಗಳಲ್ಲಿ ನಡೆಯಲಿ ಎಂದು ಆಶಿಸಿದರು. ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ವಚನಜ್ಯೋತಿ ಬಳಗದ ಮಕ್ಕಳ ವಚನ ಮೇಳವನ್ನು ಸ್ಮರಿಸಿದ ಎಸ್.ಟಿ.ಎಸ್., ಮಕ್ಕಳಲ್ಲಿ ವಚನ ಬಿತ್ತನೆ ಸಾರ್ಥಕವಾದ ಅದನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮದಾಗಿದೆ ಎಂದು ಹೇಳಿದರು.


ಬೇಲಿಮಠದ ಶ್ರೀಗಳು ಮಾತನಾಡಿ ಮೈಸೂರು ಪ್ರಾಂತ್ಯದಲ್ಲಿ ಜಾಗೃತಿಗೊಂಡ ವಚನ ಪ್ರಜ್ಞೆಯನ್ನು ಸಹಿಸದ ವಿಶಾಲಾಕ್ಷ ಪಂಡಿತ ಎಂಬ ಚಿಕ್ಕದೇವರಾಜನ ಮಂತ್ರಿ ಸಮಾಲೋಚನೆ ನೆಪದಲ್ಲಿ ನಂಜನಗೂಡಿನಲ್ಲಿ ನೂರಾರು ವಚನ ಜಂಗಮರನ್ನು ಕೊಲ್ಲಿಸಿದ್ದು ಐತಿಹಾಸಿಕ ಘಟನೆ ಮತ್ತು ವಿಷಾದಕರ ಎಂದು ಪೂಜ್ಯರು ವಿವರಿಸಿದರು.


ಹೊಸಗನ್ನಡದ ಸಮಯದಲ್ಲಿ ಫ.ಗು. ಹಿರಿಯರಾದ ಎಂ.ಆರ್.ಶ್ರಿ ಅವರು ವಚನಗಳನ್ನು ಕನ್ನಡದ ಸ್ವಯಾರ್ಜಿತ ಸ್ವತ್ತು ಎಂದು ಬಣ್ಣಿಸಿರುವುದನ್ನು ನೆನೆದ ಪೂಜ್ಯರು ಪ್ರಸಕ್ತ ಕಾಲದಲ್ಲಿ ಎಳೆಯ ಪೀಳಿಗೆಗೆ ವಚನಗಳನ್ನು ಪರಿಚಯಿಸುತ್ತಿರುವ ವಚನಜ್ಯೋತಿ ಬಳಗದ ಕಾರ್ಯ ಎಲ್ಲ ಸಂಘಗಳಿಗೂ ಮಾದರಿ ಎಂದು ಪ್ರಶಂಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ವಚನ ದಸರೆಯಲ್ಲಿ ಪ್ರತಿದಿನವೂ ಒಬ್ಬೊಬ್ಬ ವಚನಕಾರ್ತಿಯರ ಪರಿಚಯ ಮಾಡಿಕೊಂಡು ಅವರುಗಳ ವಚನಗಳ ವ್ಯಾಖ್ಯಾನ ನಡೆಸಲಾಗಿದ್ದು ಬೇರೆ ಬೇರೆ ತಂಡಗಳ ವಚನ ಗಾಯನ ನಡೆದಿದೆ ಎಂದು ತಿಳಿಸಿದರು.


ಆಶ್ರಯದಾತರಾದ ಪದ್ಮಜ ಪ್ರಸನ್ನ, ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಮುಖ್ಯ ಕಾರ್ಯನಿರ್ವಾಹಕ ರಾಜಾ ಗುರುಪ್ರಸಾದ್, ಗಾಯಕಿಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಕಿರಣ್ ಬಳ್ಳಾರಿ, ವಚನ ಕಲಿಕಾ ತರಗತಿಯ ಸಂಚಾಲಕರಾದ ಮಧು ಶಿವಕುಮಾರ್, ದಿವಾಕರ್, ಪ್ರಾಧ್ಯಾಪಕ – ರಂಗವಿಮರ್ಶಕ ರುದ್ರೇಶ್ ಅದರಂಗಿ, ನಿವೃತ್ತ ಅಧಿಕಾರಿಗಳಾದ ಪ್ರಕಾಶ್ ಮಜಗಿ, ರಾಜು, ಬಡಾವಣೆಯ ಹಿರಿಯರಾದ ಚೆನ್ನಮಲ್ಲಯ್ಯ, ಚಂದ್ರಶೇಖರಯ್ಯ ಮೊದಲಾದವರು ಉಪಸ್ಥಿತರಿದ್ದರು.