Home ಜಿಲ್ಲೆ ಮೈಸೂರು ವಚನಗಳ ಇತಿಹಾಸವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ವಚನಗಳ ಇತಿಹಾಸವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಸಂಜೆವಾಣಿ ನ್ಯೂಸ್
ಮೈಸೂರು: ಫೆ.11:-
ಸಮಾಜದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶಿವ ಶರಣರು ತಮ್ಮ ತಮ್ಮ ವಚನಗಳ ಮೂಲಕ ಪ್ರಯತ್ನಿಸಿದರು. ಸಮಾಜದಲ್ಲಿ ಮುಂದಿನ ಪೀಳಿಗೆಗೆ ಇವರ ವಿಚಾರಧಾರೆ ಮತ್ತು ಸಮಾಜದ ಅಸಮಾನತೆ ಬಗ್ಗೆ ತಿಳಿದುಕೊಳ್ಳಬೇಕು. ವಚನ ಇತಿಹಾಸವು ಮರೆಯಾಗುತ್ತಿದ್ದು. ಪ್ರವಚನ ಪ್ರಶ್ನೋತ್ತರ ಮತ್ತು ವಚನಗಳು ಪುಸ್ತಕಗಳನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಚನ ಇತಿಹಾಸವನ್ನು ಬೋಧನೆ ಮಾಡಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ತಿಳಿಸಿದರು.


ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ವಚನಕಾರರ ಸಂದೇಶವನ್ನು ಇಟ್ಟುಕೊಂಡು ಇಂದು ಜೀವನ ನಡೆಸಬೇಕು. ಸಮಾಜ ಉತ್ತಮವಾದ ರೀತಿಯಲ್ಲಿ ಇರಬೇಕಾದರೆ ಹಿಂದಿನ ಶಿವಶರಣ ವಚನಗಳ ಸಂದೇಶ ಮಹತ್ವವನ್ನು ತಿಳಿದು ಬದುಕಿನಲ್ಲಿ ಮಾನಸಿಕವಾಗಿ ಸದೃಢವಾಗಿ ತಮ್ಮ ಕಾಯಕವನ್ನು ನಡೆಸಬೇಕು ಎಂದು ಹೇಳಿದರು


ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಇತಿಹಾಸವನ್ನು ತಿದ್ದುಪಡಿ ಮಾಡಲು ಯಾರಿಗೂ ಶಕ್ತಿ ಇಲ್ಲ ಅದನ್ನು ಅರ್ಥಮಾಡಿಕೊಳ್ಳಬೇಕು. ಭಾಷೆ, ಧರ್ಮ ಜಾತಿ ಇವುಗಳನ್ನು ಸಮಾಜದಲ್ಲಿ ಸಮಸ್ಯೆಗಳನ್ನಾಗಿ ನಾವೇ ಸೃಷ್ಟಿಸಿಕೊಂಡಿದ್ದೇವೆ. ಸಮಾಜದಲ್ಲಿ ಏಳುಬೀಳುಗಳನ್ನು ತಿಳಿದು ಜೀವನ ನಡೆಸಬೇಕು ಇದು ಅತ್ಯಗತ್ಯ. ಇಂದು ನಾವು ಸಮಾಜದಲ್ಲಿ ಬೇರೆಯವರ ಪೈಪೆÇೀಟಿಗೆ ಜೀವನ ಮಾಡುತ್ತಿದ್ದೇವೆ ಇಂದು ಮಾನವ ಅತಿಯಾದ ದುರಾಸೆಗಳಿಂದ ತುಂಬಿದ್ದಾನೆ ಎಂದರು.
ಜನರು ಅವರ ಅವಶ್ಯಕತೆಗೆ ತಕ್ಕಂತೆ ಅನುಗುಣವಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಸಂವಿಧಾನದ ಅಂಶಗಳನ್ನು ಇಟ್ಟುಕೊಂಡು ಎಲ್ಲರೂ ಜೀವನದಲ್ಲಿ ಮುಂದೆ ಬರಬೇಕು ಹುಟ್ಟು ದೇವರ ಸೃಷ್ಟಿ. ಹುಟ್ಟಿದ ಮೇಲೆ ಜೀವನ ಹೇಗೆ ನಡೆಸಿಕೊಂಡು ಹೋಗುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.


ತಮ್ಮ ಕೆಲಸ ಯಾವುದೇ ಇರಲಿ ಬೇದ ಭಾವವಿಲ್ಲದೆ ಕೀಳರಿಮೆ ಇಲ್ಲದೆ ಬದುಕನ್ನು ಸಾಗಿಸಬೇಕು ಸಮಾಜದಲ್ಲಿ ಸೌಲಭ್ಯಗಳಿಂದ ವಂಚಿತರಾದವರು ಶಿಕ್ಷಣದಿಂದ ಮೇಲೆ ಬರಲಿಕ್ಕೆ ಸಾಧ್ಯ ಆದ್ದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಅಗತ್ಯ. ನಮ್ಮ ಜೀವನ ಬೇರೆಯವರಿಗೆ ಪ್ರೇರಣೆಯಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಪರಿಷತ್ತಿನ ಶಾಸಕರಾದ ಸಿ ಎನ್ ಮಂಚೇಗೌಡ ಶಿವ ಶರಣರ ಹರಳಯ್ಯ ಮಹಾಸಂಸ್ಥಾನ ಮಠದ ಶ್ರೀ ಶ್ರೀ ರುದ್ರಪ್ಪ ಹರಳಯ್ಯ ಸ್ವಾಮೀಜಿ, ಕನ್ನಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಎಡತೋರ ನಿಂಗರಾಜು ಪಾಳ್ಯ ರಾಜಪ್ಪ, ಕೆ. ಆರ್ ನಗರದ ಮಹದೇವ ಮತ್ತಿತರರು ಉಪಸ್ಥಿತರಿದ್ದರು.