ಇಟಾನಗರ,ಸೆ.8- ಅರುಣಾಚಲ ಪ್ರದೇಶದ ಅಣೆಕಟ್ಟು ವಿರೋಧಿ ಕಾರ್ಯಕರ್ತೆ ಮತ್ತು ವಕೀಲೆ ಭಾನು ಟಾಟಕ್ ಅವರನ್ನು ದೆಹಲಿ ವಿಮಾನ ನಿಲ್ದಾಣದ ಮೂಲಕ ಡಬ್ಲಿನ್‍ಗೆ ತೆರಳದಂತೆ ವಿಮಾನ ನಿಲ್ದಾಣದಲ್ಲಿ ತಡೆ ಹಿಡಿದ ಘಟನೆ ನಡೆದಿದೆ.
ವಲಸೆ ಅಧಿಕಾರಿಗಳು, ಭಾನು ಟಾಟಕ್ ಅವರ ವಿರುದ್ದ ರಾಜ್ಯದಲ್ಲಿ ಬಾಕಿ ಇರುವ ಎರಡು ಪೆÇಲೀಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಲುಕ್ ಔಟ್ ಸುತ್ತೋಲೆ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಬ್ಲಿನ್‍ಗೆ ಹೊರಟಿದ್ದ ಭಾನು ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿದಿದ್ದಾರೆ.
ಸಿಯಾಂಗ್ ಸ್ಥಳೀಯ ರೈತರ ವೇದಿಕೆಯ ಕಾನೂನು ಸಲಹೆಗಾರರಾದ ಭಾನು, ನಾಳೆಯಿಂದ ಡಬ್ಲಿನ್ ಸಿಟಿ ವಿಶ್ವವಿದ್ಯಾಲಯದಲ್ಲಿ ಮೂರು ತಿಂಗಳ ಶೈಕ್ಷಣಿಕ ಕೋರ್ಸ್‍ಗಾಗಿ ಐರ್ಲೆಂಡ್‍ಗೆ ಪ್ರಯಾಣಿಸಬೇಕಿತ್ತು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರದ ವಿರುದ್ಧದ ನಿಲುವಿಗಾಗಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ಅರುಣಾಚಲ ಪ್ರದೇಶ ಪೆÇಲೀಸರು, ಇಟಾನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾನು ಅವರ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ.
ಸಿಯಾಂಗ್ ಅಣೆಕಟ್ಟು ಯೋಜನೆಗೆ ಅವರ ವಿರೋಧಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ. ಮೊದಲ ಪ್ರಕರಣ 2021 ರ ಹಿಂದಿನದು, ಭಾನು ಇಟಾನಗರದ ಬಿಬಿ ಪ್ಲಾಜಾ ಮಾಲ್‍ಗೆ ಪ್ರತಿಭಟನೆಗಾಗಿ ನುಗ್ಗಿದ ಪ್ರಕರಣದ ವಿಚಾರಣೆ ಬಾಕಿ ಇದೆ. ಈ ಪ್ರಕರಣದಲ್ಲಿ ಅಸ್ಸಾಂ ಕಲಾವಿದ ನಿಲೀಮ್ ಮಹಾಂತ ಮತ್ತು ಸ್ಥಳೀಯ ಕಾರ್ಯಕರ್ತ ಎಬೊ ಮಿಲಿ ಅವರನ್ನು ಸಹ-ಆರೋಪಿಗಳೆಂದು ಹೆಸರಿಸಲಾಗಿದ್ದು, ಭಾನು ವಿಧ್ವಂಸಕ ಕೃತ್ಯಕ್ಕಾಗಿ ಹಣ ವರ್ಗಾಯಿಸಿದ್ದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶ ಯುವ ಕಾಂಗ್ರೆಸ್ ಪ್ರತಿಕ್ರಿಯಿಸಿ “ರಾಜ್ಯ ಸರ್ಕಾರದ ಉದ್ಧಟತನ” ಎಂದು ಕರೆದಿರುವುದನ್ನು ಖಂಡಿಸಿದೆ ಮೂರು ವರ್ಷಗಳಿಗಿಂತ ಹಳೆಯದಾದ ಎರಡು ಪೆÇಲೀಸ್ ಪ್ರಕರಣಗಳ ಆಧಾರದ ಮೇಲೆ ಭಾನು ಅವರನ್ನು ಅಂತರರಾಷ್ಟ್ರೀಯ ವಿಮಾನ ಹತ್ತದಂತೆ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
























