
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.06: ಅಪಘಾತ ಸಂಬಂಧ ಪ್ರಕರಣದ ಕೇಸ್ ಪಡೆಯುವ ವಿಚಾರದಲ್ಲಿ ತಾಲೂಕು ವಕೀಲರುಗಳ ನಡುವೆ ಪರಸ್ಪರ ವಿವಾದ ಉಂಟಾಗಿದ್ದು ಘಟನೆಯ ಸಂಬಂಧ ಪರಸ್ಪರ ದೂರು ಪ್ರತಿದೂರು ದಾಖಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಗವಿರಂಗಪ್ಪ ದೇವಾಲಯದ ಬಳಿ ನಡೆದ ಅಪಘಾತ ಪ್ರಕರಣದಲ್ಲಿ ವಕೀಲ ಬೋರೇಗೌಡ ಎನ್ನುವವರು ಅಕ್ರಮವಾಗಿ ನಡೆದುಕೊಂಡಿದ್ದಾರೆಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ ಮತ್ತು ಸಂಘದ ಕೆಲವು ಪದಾಧಿಕಾರಿಗಳು ಪ್ರಶ್ನಿಸಿದ ಸಂದರ್ಭದಲ್ಲಿ ಬೋರೇಗೌಡ ಎನ್ನುವವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ ಮತ್ತಿತರರು ಪಟ್ಟಣ ಪೆÇೀಲೀಸರಿಗೆ ದೂರು ನೀಡಿದ್ದರೆ ಇದಕ್ಕೆ ಪ್ರತಿಯಾಗಿ ತಮ್ಮ ಮೇಲೆ ನಾಗೇಗೌಡ ಮತ್ತು ಮತ್ತಿತರ ವಕೀಲರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ವಕೀಲ ಬೋರೇಗೌಡ ಪ್ರತಿದೂರು ದಾಖಲಿಸಿದ್ದಾರೆ.
ದೂರು ಪ್ರತಿದೂರು ದಾಖಲಾದ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾದ ಹಿನ್ನೆಲೆಯಲ್ಲಿ ತಾಲೂಕು ವಕೀಲರ ಸಂಘದ ಭವನದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಪುರುಷೋತ್ತಮ ನೇತೃತ್ವದಲ್ಲಿ ವಕೀಲರು ಸುದ್ದಿಗೋಷ್ಠಿ ನಡೆಸಿ ಪ್ರತಿದೂರು ದಾಖಲಿಸಿದ್ದಲ್ಲದೆ ಘಟನೆಗೆ ಸಂಬಂಧಿಸಿದಂತೆ ವಕೀಲರ ಸಂಘದ ಅಧ್ಯಕ್ಷ ಮತ್ತಿತರರನ್ನು ಬಂಧಿಸುವಂತೆ ಪೆÇಲೀಸರ ಮೇಲೆ ಕೆಲವು ಸಾರ್ವಜನಿಕರ ಸಂಘಟನೆಗಳ ಹೆಸರಿನಲ್ಲಿ ಒತ್ತಡ ಹೇರಿದ ವಕೀಲ ಬೋರೇಗೌಡರ ವಿರುದ್ದ ವಾಗ್ದಾಳಿ ನಡಸಿದರು.
ಘಟನೆಯ ವಿವರಗಳನ್ನು ಮಾಧ್ಯಮದ ಮುಂದೆ ಕೆಲವು ದಾಖಲೆಗಳ ಮೂಲಕ ಬಹಿರಂಗಗೊಳಿಸಿದ ವಕೀಲರು ಬೋರೇಗೌಡರ ನಡೆ ವಕೀಲ ವೃತ್ತಿಗೆ ಕಳಂಕ ಎಂದು ದೂರಿದರು. ವಕೀಲರ ಸಂಘದ ಯಾವುದೇ ಪದಾಧಿಕಾರಿಗಳು ಬೋರೇಗೌಡರ ಮೇಲೆ ಹಲ್ಲೆ ನಡೆಸಿಲ್ಲ. ಆತನ ಅಕ್ರಮ ಚಟುವಟಿಕೆಗಳನ್ನು ಪ್ರಶ್ನಿಸಿದ ವಕೀಲರ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ವಕೀಲರು ದೂರು ದಾಖಲಿಸಿದ್ದಾರೆ. ತನ್ನ ವಿರುದ್ದ ದೂರು ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ವಕೀಲ ಬೋರೇಗೌಡ ಸ್ವಯಂ ಹಲ್ಲೆ ಮಾಡಿಕೊಂಡು ಸುಳ್ಳು ಪ್ರತಿದೂರು ದಾಖಲಿಸಿ ತಾಲೂಕು ವಕೀಲರ ಸಂಘ ಮತ್ತು ವಕೀಲರ ಘನತೆಗೆ ಧಕ್ಕೆ ತಂದಿದ್ದಾನೆ. ವಕೀಲ ಬೋರೇಗೌಡರ ವಿರುದ್ದ ಸಾಕಷ್ಟು ಆರೋಪಗಳಿದ್ದು ಈತನಿಂದ ವಂಚನೆಗೆ ಒಳಗಾದ ಕೆಲವು ಕಕ್ಷಿದಾರರು ಈತನ ಮೇಲೆ ನ್ಯಾಯಾಲಯದ ಆವರಣದಲ್ಲಿಯೇ ಒಮ್ಮೆ ದಾಳಿ ಮಾಡಿದ್ದಾರೆ. ಅನಾರೋಗ್ಯ ಪೀಡಿತರು ಮತ್ತಿತರ ಕೌಟುಂಬಿಕ ಸಮಸ್ಯೆಗಳಿಗೆ ಸಿಲುಕಿದ ಕುಟುಂಬಗಳ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ಕೊಡಿಸುತ್ತೇನೆಂದು ಕೆಲವರಿಂದ ಹಣ ಪಡೆದು ವಂಚಿಸಿದ್ದು ಈತನ ವಿರುದ್ದ ಬೆಂಗಳೂರಿನ ವಿಧಾನ ಸೌಧ ಪೆÇಲೀಸರು ಹತ್ತು ಹಲವು ಪ್ರಕರಣ ದಾಖಲಿಸಿದ್ದು ಕೆಲವೊಂದು ಪ್ರಕರಣದಲ್ಲಿ ಈತ ಜೈಲಿಗೂ ಹೋಗಿ ಬಂದಿದ್ದಾನೆ.
ಕರಿಕೋಟು ಹಾಕುವ ವಕೀಲರನ್ನು ಕಂಡರೆ ಕ್ರಿಮಿನಲ್ ಗಳು ಬೆದರಬೇಕು. ಆದರೆ ಇಲ್ಲಿ ಒಬ್ಬ ಕ್ರಿಮಿನಲ್ ವಕೀಲನಾಗಿದ್ದು ವಕೀಲ ವೃತ್ತಿಯ ಘನತೆ ಗೌರವಗಳಿಗೆ ತೇಜೋವಧೆ ಮಾಡುತ್ತಿದ್ದಾನೆ. ಕ್ರಿಮಿನಲ್ ಹಿನ್ನೆಲೆಯ ಕಾರಣದಿಂದ ಬೋರೇಗೌಡರಿಗೆ ತಾಲೂಕು ವಕೀಲರ ಸಂಘದ ಸದಸ್ಯತ್ವ ನೀಡಿಲ್ಲ. ಕೆಲವೊಂದು ಅಪಘಾತ ಪ್ರಕರಣಗಳಲ್ಲಿ ಅರ್ಜಿದಾರನೂ ಈತನೇ ಮತ್ತು ಎದುರುದಾರನೂ ಈತನೇ ಆಗಿದ್ದು ತನ್ನದೇ ವಾಹನ ನೀಡಿ ಸುಳ್ಳು ಪ್ರಕರಣಗಳನ್ನು ಪ್ರಕರಣಗಳನ್ನು ಸೃಷ್ಠಿ ಮಾಡಿ ವಂಚಿಸುತ್ತಾನೆ. ಕೆಲವೊಂದು ಪ್ರಕರಣಗಳಲ್ಲಿ ಕೇಸ್ ನಡೆಸದೆ ಕಕ್ಷಿದಾರರಿಂದ ಹಣಪಡೆದು ವಂಚಿಸಿರುತ್ತಾರೆ. ವಕೀಲ ವೃತ್ತಿ ಎನ್ನುವುದು ಒಂದು ಸೇವೆ. ಆದರೆ ವಕೀಲ ಬೋರೇಗೌಡ ವಕೀಲ ವೃತ್ತಿಗೆ ಕಳಂಕವಾಗಿದ್ದು ತಾಲೂಕು ವಕೀಲರ ಸಂಘದ ಯಾವುದೇ ಪದಾಧಿಕಾರಿಗಳು ಈತನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಲೂಕು ವಕೀಲರ ಸಂಘದ ಉಪಧ್ಯಕ್ಷ ಪುರುಷೋತ್ತಮ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಹಿರಿಯ ವಕೀಲರಾದ ಕೆ.ಎನ್.ನಾಗರಾಜು, ಕೆ.ಆರ್.ಮಹೇಶ್, ಗಂಜೀಗೆರೆ ಲೋಕೇಶ್ ಮತ್ತು ನಿರಂಜನ್ ಮಾತನಾಡಿದರು. ಹಲವು ವಕೀಲರು ಸುದ್ದಿಗೋಷ್ಠಿಯಲ್ಲಿದ್ದರು.




























