ವಕೀಲನನ್ನು ಬಂಧಿಸಲು ಆಗ್ರಹಿಸಿ ಪಂಜಿನ ಮೆರವಣಿಗೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ.11-
ಸರ್ವೊಚ್ಚ ನ್ಯಾಯಾಲಯ ನ್ಯಾಯದೀಶರನ್ನು ಅಪಮಾನಿಸಿರುವ ವಕೀಲ ರಾಕೇಶ್ ಕಿಶೋರನನ್ನು ದೇಶದ್ರೋಹ ಕಾಯ್ದೆಯಡಿ ಬಂಧನಕ್ಕೆ ಆಗ್ರಹಿಸಿ, ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಮದ್ಯಪ್ರದೇಶ ವಕೀಲ ಅನಿಲ್ ಮಿಶ್ರಾ ಹಾಗೂ ವಕೀಲರ ಅಸಭ್ಯ ವರ್ತನೆಯನ್ನು ಸಮರ್ಥಿಸಿರುವ ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು ಪಂಜಿನ ಪ್ರತಿಭಟನಾ ಮೆರವಣಿಯನ್ನು ನಡೆಸಿದರು.


ಖಾಸಗಿ ಬಸ್ ನಿಲ್ದಾಣದ ಮುಂಭಾಗ ಜಮಾವಣೆಗೊಂಡಿದ್ದ ದಸಂಸ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಂಜುಗಳಿಗೆ ಆಕ್ರೋಶದ ಕಿಚ್ಚನ್ನು ಹೊತ್ತಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಿಜೆ ಅವರ ಮೇಲೆ ಚಪ್ಪಲಿ ತೂರಿರುವ ಹಾಗೂ ಮಧ್ಯಪ್ರದೇಶದಲ್ಲಿ ಅಂಬೇಡ್ಕರ್ ಕುರಿತ ಹಗುರವಾಗಿ ಮಾತನಾಡಿರುವ ವಕೀಲರು ಮತ್ತು ವಕೀಲರ ಕಾನೂನುಬಾಹಿರ ಕೃತ್ಯವನ್ನು ಸಮರ್ಥಿಸಿರುವ ನಿವೃತ್ತ ಐಪಿಎಸ್ ಅಧಿಕಾರಿಯಾಗಿ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗುತ್ತಾ, ಮೂವರ ಮೇಲೂ ಕಠಿಣ ಕಾನೂನು ಕ್ರಮಕ್ಕೆ ಆಗಮಿಸಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.


ವೃತ್ತದಲ್ಲಿಯೇ ಮೂವರ ಭಾವಚಿತ್ರಗಳನ್ನು ದಹಿಸಿ, ಆಕ್ರೋಸಾ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕಾಲೇಜು ರಸ್ತೆಯ ಮಾರ್ಗವಾಗಿ ತಾಲೂಕು ಕಚೇರಿ ಮುಂಭಾಗವಿರುವ ಅಂಬೇಡ್ಕರ್ ಪುತ್ತಳಿಯ ಬಳಿ, ಮಂಜುನಾಥ್ ಮೆರವಣಿಗೆ ಸಮಾಪ್ತಿಗೊಳಿಸಿದರು. ಮೆರವಣಿಗೆಯ ಉದ್ದಕ್ಕೂ ದೇಶದಲ್ಲಿ ಕೋಮುವಾದಿ ಮನಸ್ಥಿತಿಯ ಹಿನ್ನೆಲೆಯುಳ್ಳ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಅಸಹನೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವ ಕಿಡಿಗೇಡಿಗಳಿಗೆ ಕೇಂದ್ರ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿಕಾರಿದರು.


ಪ್ರತಿಭಟನೆಯ ನೇತೃತ್ವ ವಹಿಸಿದ ಆಲಗೂಡು ಶಿವಕುಮಾರ್ ಮಾತನಾಡಿ ಸ್ಪೃಶ್ಯ – ಅಸ್ಪೃಶ್ಯತೆ, ಮಡಿ – ಮೈಲಿಗೆ, ಅಸಮಾನತೆ, ಜಾತೀಯತೆ, ಕೋಮು ಭಾವನೆ, ತಾರತಮ್ಯ ನೀತಿಗಳನ್ನೇ ತನ್ನ ಉಸಿರಾಗಿಸಿಕೊಂಡು ಸದಾ ಜಾತಿ-ಜಾತಿಗಳ ನಡುವೆ ಧರ್ಮ-ಧರ್ಮಗಳ ನಡುವೆ ಜಗಳ ತಂದಿಟ್ಟು ಲಾಭ ಮಾಡಿಕೊಂಡು ನಿರಂತರವಾಗಿ ಆಳುವ ವರ್ಗವಾಗಿ ಆಧಿಪತ್ಯ ಸ್ಥಾಪಿಸಿಕೊಂಡಿರುವ ಬ್ರಾಹ್ಮಣ್ಯ ಪಾರುಪತ್ಯದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ[ಖSS] ಈಗ 100 ವರ್ಷ ತುಂಬಿದೆಯಂತೆ.!! ಈ ಶತಮಾನೋತ್ಸವದ ಉನ್ಮಾದ ಸ್ಥಿತಿಯಲ್ಲಿರುವ ಕೋಮುವಾದಿಗಳು ಇಂಥ ಶೂ ಎಸೆತದಂತ ಅವಾಂತರಗಳು ಹಾಗೂ “ಸಂವಿಧಾನ – ಪ್ರಜಾಪ್ರಭುತ್ವ”ಕ್ಕೆ ಧಕ್ಕೆ ತರುವಂತಹ ಜಾತಿ ಗಲಭೆ – ಕೋಮು ಗಲಭೆಗಳನ್ನು ಸೃಷ್ಟಿಸಿ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಒಡ್ಡುವ ಕುಕೃತ್ಯದಲ್ಲಿ ತೊಡಗುವ ಅಪಾಯವಿದ್ದೇ ಇದೆ. ಹಾಗಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ಪ್ರಜ್ಞಾವಂತ ಶೂದ್ರ ಜನ ಸಮುದಾಯಗಳು ಸದಾ ಎಚ್ಚರಿಕೆಯಿಂದಿದ್ದು ಪರಸ್ಪರ “ಶಾಂತಿ – ಸೌಹಾರ್ದತೆ – ಸಹಬಾಳ್ವೆ – ಏಕತೆ”ಯನ್ನು ಕಾಪಾಡಿಕೊಂಡು ಕೋಮುವಾದಿಗಳ ಇಂತಹ ವಿಕೃತಿಗಳಿಗೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಗಳ ಮೂಲಕ ತಕ್ಕ ಉತ್ತರ ನೀಡಬೇಕೆಕಂದು ಕರೆ ನೀಡುತ್ತದೆ.


ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ (ಬಣರಹಿತ)ಯ ಜಿಲ್ಲಾ ಸಂಚಾಲಕ ಸಿ.ಉಮಾಮಹದೇವ, ಮುಖಂಡರಾದ ಕೇತುಪುರ ಶಿವಪ್ರಕಾಶ್, ಸೋಸಲೆ ನಂಜುಂಡಸ್ವಾಮಿ, ಕಿರಗಸೂರು ರಜನಿ, ಬನ್ನಹಳ್ಳಿಹುಂಡಿ ಉಮೇಶ, ಆಲಗೂಡು ನಾಗರಾಜ್ ಮೂರ್ತಿ, ಶಾಂತಕುಮಾರ್, ರವಿಚಂದ್ರ, ವಾಟಾಳ್ ನಾಗರಾಜ್, ಕೃಷ್ಣಮೂರ್ತಿ, ಉಕ್ಕಲಗೆರೆ ರವಿಕುಮಾರ್, ತುಂಬಲ ಸಿದ್ದರಾಜು,
ಮಹದೇವಸ್ವಾಮಿ, ಕೆಂಪನಪುರ ಮಂಟಯ್ಯ, ಹೊಸಪುರ ಸೋಮಶೇಖರ್, ಬಿಲಗೆರೆಹುಂಡಿ ಶಿವಕುಮಾರ್, ಚಂದಳ್ಳಿಮಲ್ಲೇಶ್, ಸಿ ಬಿ ಹುಂಡಿ ನಾಗೇಶ್. ಯಡದೂರೆ ನಾರಾಯಣ, ಚಿಕ್ಕಲಕ್ಷ್ಮೀಪುರ ಲಿಂಗರಾಜು,
ಇಂಡವಾಳು ನಾಗರಾಜು ಸುಜ್ಜಲೂರು ಶಿವಯ್ಯ, ಕೇತಹಳ್ಳಿ ಪ್ರಶಾಂತ್, ಮಾದಪುರ ಉಮೇಶ್, ದಾಸೆಗೌಡನಕೊಪ್ಪಲು ಬಸವರಾಜು. ಕನ್ನಹಳ್ಳಿ ಶಶಿಕುಮಾರ್, ಸಂಪತ್ತು ಕುಮಾರ್,ಯಡದೊರೆ ನಾರಾಯಣ, ರಾಜು, ಕಟ್ಟೆಹುಂಡಿ ಆನಂದ್ ಹಾಗೂ ಇತರರು ಇದ್ದರು