Home ಜಿಲ್ಲೆ ಲೋಕ್ ಅದಾಲತ್ ನಲ್ಲಿ ವಿಚ್ಛೇದನ ಬೇಡವೆಂದು ಒಂದಾದ ಐದು ಜೋಡಿಗಳು

ಲೋಕ್ ಅದಾಲತ್ ನಲ್ಲಿ ವಿಚ್ಛೇದನ ಬೇಡವೆಂದು ಒಂದಾದ ಐದು ಜೋಡಿಗಳು

 ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ :ಜು.12 ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಐದು ಜೋಡಿಗಳು ಲೋಕ ಅದಾಲತ್ ನಲ್ಲಿ  ಮನವೊಲಿಸಿ ಒಟ್ಟಾಗಿ ಹೋಗುವಂತೆ ನ್ಯಾಯಾಧೀಶರು ಸಲಹೆ ಒಪ್ಪಿ  ಐದು ಜೋಡಿಗಳು ಒಂದಾದರು .

 ಗೌರವಾನ್ವಿತ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶಕನದಂತೆ ತಾಲೂಕು ಕಾನೂನು ಸೇವೆಗಳ ಸಮಿತಿ, ಹಗರಿಬೊಮ್ಮನಹಳ್ಳಿ ವತಿಯಿಂದ ರಾಷ್ಟ್ರೀಯ ಲೋಕ್ ಅದಾಲತ್ ಶುಕ್ರವಾರ ನಡೆಯಿತು.

 ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪ್ರಕರಣಗಳನ್ನು ಸಂಧಾನಕ್ಕಾಗಿ ಕ್ರಮ ತೆಗೆದುಕೊಳ್ಳಲಾಗಿತ್ತು. ಸದರಿ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಪಾಲು ವಿಭಾಗ ಪ್ರಕರಣಗಳು ಹಾಗೂ ಕಕ್ಷಿದಾರರು ಮತ್ತು ವಕೀಲರು ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಸದರಿ ಅದಾಲತ್ಗೆ ಸಹಕರಿಸಿದರು.  ಹಿರಿಯ ಸಿವಿಲ್ ನ್ಯಾಯಾಧೀಶ ಮಧುಸೂದನ್.ಡಿ.ಕೆ, ನ್ಯಾಯಾಲಯಾದಲ್ಲಿ 974 ಪ್ರಕರಣಗಳ ಪೈಕಿ 67 ಪ್ರಕರಣಗಳನ್ನು ಇತ್ಯಾರ್ಥ ಮಾಡಿದರು. ಸಿವಿಲ್ ಕಿರಿಯ ನ್ಯಾಯಾಧೀಶ ಸೈಯ್ಯದ್ ಮೋಹಿದ್ದೀನ್ 755 ಪ್ರಕರಣಗಳನ್ನು ಅದಾಲತ್ಗೆ ಗುರುತಿಸಿ ಅದರಲ್ಲಿ 66 ಪ್ರಕರಣಗಳನ್ನು ಇತ್ಯಾರ್ಥ ಮಾಡಿದರು. ಜೊತೆಗೆ 823 ಪ್ರಕರಣಗಳಲ್ಲಿ 13 ಪ್ರಕರಣಗಳನ್ನು ಇತ್ಯಾರ್ಥ ಮಾಡಿದರು. 

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೊಟ್ರೇಶ್ ಶೆಟ್ಟರ್,ಉಪಾಧ್ಯಕ್ಷರಾದ ಬಿ. ಎಂ. ಆಂಜನೇಯ. ಹಿರಿಯ ವಕೀಲರಾದ ಲಿಂಗನಗೌಡ, ಸಿ. ಹುಲುಗಪ್ಪ, ಆಂಜನೇಯ ಎಚ್, ವಸಂತಿ ಸಲ್ಮಾನಿ ವಕೀಲರು ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಕಕ್ಷಿದಾರರು ಹಾಜರಿದ್ದು ಅದಾಲತ್ ನ್ನು ಯಶಸ್ವಿಗೊಳಿಸಿದರು.