Home ಜಿಲ್ಲೆ ಮೈಸೂರು ಲೋಕಾಯುಕ್ತರಿಗೆ ಸಾರ್ವಜನಿಕ ಕುಂದು ಕೊರತೆ ದೂರು ಸ್ವೀಕಾರ ಸಭೆ

ಲೋಕಾಯುಕ್ತರಿಗೆ ಸಾರ್ವಜನಿಕ ಕುಂದು ಕೊರತೆ ದೂರು ಸ್ವೀಕಾರ ಸಭೆ

ಸಂಜೆವಾಣಿ ವಾರ್ತೆ
ಹನೂರು.ಫೆ.20:-
ಪಟ್ಟಣದ ಲೋಕೋಪ ಯೋಗಿ ಇಲಾಖೆ ವಸತಿಗೃಹದಲ್ಲಿ ಕರ್ನಾಟಕ ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆ ದೂರು ಸ್ವೀಕಾರ ಸಭೆ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಕಂದಾಯ ಇಲಾಖೆ ಸಂಬಂಧಿಸಿದಂತೆ ವಿದ್ಯುತ್ , ಪಟ್ಟಣ ಪಂಚಾಯಿತಿ. ಹಾಗೂ ಗ್ರಾಮ ಪಂಚಾಯಿತಿ ಲೋಕೊಪ ಇಲಾಖೆ ಸಂಬಂಧಿಸಿದಂತೆ ಒಟ್ಟು ಎಂಟು ದೂರುಗಳನ್ನು ಸ್ವೀಕೃತವಾದವು.


ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಹಿತ್ ಕುಮಾರ್ ರವರು ದೂರು ಸ್ವೀಕರಿಸಿಕೊಂಡು ನಂತರ ಮಾತನಾಡಿದ ಅವರು ಎಲ್ಲಾ ಇಲಾಖೆ ಅಧಿಕಾರಿಗಳು ಈಗಾಗಲೇ ಬಂದಿರುವಂತಹ ದೂರುಗಳನ್ನು ಆದಷ್ಟು ಬೇಗ ಬಗೆಹರಿಸಬೇಕು ಅವರಿಗೆ ಯಾವುದೇ ರೀತಿಯಲ್ಲಿ ಸಬೂಬು ಹೇಳುವಂತಿಲ್ಲ. ಒಂದು ವೇಳೆ ಅವರ ದೂರುಗಳನ್ನು ವಿಳಂಬ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಆದರಿಂದ ಸಾರ್ವಜನಿಕರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಅವರ ಕೆಲಸ ಕಾರ್ಯಗಳನ್ನು ಜರೂರಾಗಿ ಮಾಡಿಕೊಡಿ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಚೈತ್ರಾ. ಎ.ಡಿ.ಎಲ್.ಆರ್ ನಟರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಾಲ್ಲೋಕು ವೈದ್ಯಧಿಕಾರ ಡಾಕ್ಟರ್ ಪ್ರಕಾಶ , ಕೇಶವ ಮೂರ್ತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅಂಬಿಕಾ, ಪಟ್ಟಣ ಪಂ. ಮುಖ್ಯ ಅಧಿಕಾರಿ ರೇಖಾ. ಡಿ.ಟಿ ನಾಗೇಂದ್ರ ಸೇರಿದಂತೆ ಇನ್ನಿತರರು ಇದ್ದರು.