ಲೋಕಸಭೆಯಲ್ಲಿ ಗುಟ್ಕಾ, ಪಾನ್ ಮಸಾಲಾ ಉದ್ಯಮಕ್ಕೆ ಅಂಕುಶ: ಮಸೂದೆ ಮಂಡನೆ


ನವದೆಹಲಿ,ಡಿ.೧- ಲೋಕಸಭೆಯಲ್ಲಿ ಗದ್ದಲ ಕೋಲಾಹಲದ ನಡುವೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಂಬಾಕು ಉತ್ಪನ್ನಗಳಿಗೆ ಸುಂಕ ವಿಧಿಸುವ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಹೊಸ ತೆರಿಗೆ ಮಸೂದೆಯನ್ನು ಮಂಡಿಸಿದರು. ಇದೇ ವೇಳೆ ಆರೋಗ್ಯ ಭದ್ರತೆಗೆ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆಯನ್ನು ಮಂಡಿಸಲಾಗಿದೆ.
ದೇಶದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ಉದ್ಯಮ ಗುರಿಯಾಗಿಸಿ ಹೊಸ ಕಠಿಣ ಕಾನೂನು ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು ಕಾನೂನು ಉಲ್ಲಂಘಿಸುವರ ವಿರುದ್ಧ ಕನಿಷ್ಠ ೫ ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಸೂದೆಯ ಅನ್ವಯ ಗುಟ್ಕಾ, ಪಾನ್ ಮಸಾಲಾ ಹಾಗೂ ಇತರ ತಂಬಾಕು ಆಧಾರಿತ ಔಷಧಗಳು ಮತ್ತು ಯಂತ್ರೋಪಕರಣಗಳು ಬಳಸುವ ಯಂತ್ರೋಪಕರಣಗಳು ಮತ್ತು ಉತ್ಪಾದನಾ ಘಟಕಗಳ ಮೇಲೆ ವಿಶೇಷ ಸೆಸ್ ವಿಧಿಸಿಲ್ಲ. ಹೊಸ ಮಸೂದೆಯ ಅನ್ವಯ, ಕಾರ್ಖಾನೆ ಎಷ್ಟು ಉಪಯೋಗಕ್ಕೆ ಬರುತ್ತದೆ ಅಲ್ಲ, ಕಾರ್ಖಾನೆ ಯಂತ್ರಗಳ ಉತ್ಪಾದನೆ ಸಾಮರ್ಥ್ಯದ ಮೇಲೆ ಸೆಸ್ ಲೆಕ್ಕಾಚಾರ ಮಾಡಿದೆ. ಈ ಕೈಯಿಂದಲೇ ತಯಾರಿಸುವ ಉತ್ಪನ್ನಗಳಿಗೆ ಸ್ಥಿರ ಮಾಸಿಕ ಸೆಸ್ ವಿಧಿಸಲು ಅವಕಾಶವಿದೆ.

ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಹೊಸ ಆದಾಯ ಸಂಗ್ರಹಿಸುವ ಉದ್ದೇಶದಿಂದ ಈ ಮದೂದೆಗಳನ್ನು ಪರಿಚಯಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೈಯಿಂದ ತಯಾರಿಸಿದ ಪಾನ್ ಮಸಾಲ ಮತ್ತು ಗುಟ್ಕಾ ಉತ್ಪನ್ನಗಳ ಮೇಲೆ ನಿಗದಿತ ಮಾಸಿಕ ಸೆಸ್ ಕಡ್ಡಾಯ. ಹೊಸ ಮಸೂದೆಯು ಕಾನೂನಾಗಿ ರೂಪುಗೊಂಡ ನಂತರ, ಗುಟ್ಕಾ ಅಥವಾ ತಂಬಾಕು ಉತ್ಪನ್ನ ತಯಾರಕರು ತಮ್ಮ ಉತ್ಪಾದನೆಯಲ್ಲಿನ ಲಾಭ-ನಷ್ಟಗಳನ್ನು ಲೆಕ್ಕಿಸದೇ ಪ್ರತಿ ತಿಂಗಳು ಸೆಸ್ ಠೇವಣಿ ಆರಂಭ. ಒಂದು ವೇಳೆ ಯಂತ್ರ ಅಥವಾ ಘಟಕವು ೧೫ ದಿನಗಳಿಗಿಂತ ಹೆಚ್ಚು ಕಾಲ ಮುಚ್ಚಿದ್ರೆ ಆ ಒಂದು ಅವಧಿಗೆ ಮಾತ್ರ ವಿನಾಯತಿ ಅಗತ್ಯ.

ಹೊಸ ಕಾನೂನು ಅಡಿಯಲ್ಲಿ, ಎಲ್ಲಾ ತಯಾರಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತೆ. ಜೊತೆಗೆ ಸಂಪೂರ್ಣ ಉತ್ಪಾದನೆ, ಸೆಸ್ ವಿವರಗಳೊಂದಿಗೆ ಮಾಸಿಕ ರಿಟರ್ನ್ಸ್ ಕೂಡ ಸಲ್ಲಿಸಿ. ಜೊತೆಗೆ ಸರ್ಕಾರಿ ಅಧಿಕಾರಿಗಳು ಯಾರೂ ಇಲ್ಲ ಸಮಯದಲ್ಲೂ ಕಾರ್ಖಾನೆಗಳ ಮೇಲೆ ದಾಳಿ ಮಾಡಲು ಅಥವಾ ಲೆಕ್ಕಪರಿಶೋಧಿಸಲು ಅವಕಾಶ ಕಲ್ಪಿಸಲಾಗಿದೆ.

೫ ವರ್ಷದವರೆಗೆ ದಂಡ, ಶಿಕ್ಷೆಗುಟ್ಕಾ ಮತ್ತು ಪಾನ್ ಮಸಾಲ ನಿಯಮಗಳನ್ನ ಉಲ್ಲಂಘನೆ ಮಾಡಿದ್ರೆ, ೫ ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸದಿದ್ದರೆ, ಭಾರೀ ದಂಡ ವಿಧಿಸಲಾಗಿದೆ. ಇದರೊಂದಿಗೆ ಅಗತ್ಯಬಿದ್ದರೆ, ಸರ್ಕಾರ ಪ್ರಸ್ತುತ ಸೆಸ್ ದರ ಹೆಚ್ಚಿಸುವ ಅಧಿಕಾರ ಹೊಂದಿದೆ.

ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ಹೊಸ ಮಸೂದೆ ಕಾನೂನಿನ ಪರಿವರ್ತನೆಗೊಂಡರೆ, ಗುಡ್ಕಾ, ಪಾನ್ ಮಸಾಲ ಹಾಗೂ ತುಂಬಾಕು ಉತ್ಪನ್ನಗಳ ತಯಾರಕರ ಮೇಲೆ ನೇರವಾಗಿ ಆರ್ಥಿಕತೆ ಹೊರೆಯಾಗಲಿದೆ.

ಇದರಿಂದ ತಯಾರಕರು ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ, ಆದ್ದರಿಂದ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ ಎಂದು ಗುಟ್ಕಾ ಪ್ರಿಯರು ಕಿಡಿ ಕಾರಿದ್ದಾರೆ.