ಲಿಫ್ಟ್‌ನಲ್ಲಿ ನೆಲಕ್ಕೆ ಬಡಿದು ನಾಯಿ ಕೊಂದ ಮಹಿಳೆ

ಬೆಂಗಳೂರು,ನ.೩- ಮನೆಕೆಲಸದಾಕೆಯು ಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬಾಗಲೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ.


ಅಕ್ಟೋಬರ್ ೩೧ರಂದು ಕೃತ್ಯ ನಡೆದಿದ್ದು, ಲಿಫ್ಟ್‌ನ ಸಿಸಿ ಕ್ಯಾಮೆರಾದಲ್ಲಿ ಮನೆ ಕೆಲಸದಾಕೆ ಪುಷ್ಪಲತಾ ಅಮಾನವೀಯ ಕೃತ್ಯ ಸೆರೆಯಾಗಿದೆ. ಘಟನೆ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಾಯಿ ನೋಡಿಕೊಳ್ಳಲೆಂದೇ ಪುಷ್ಪಾಲತಾಳನ್ನು ನೇಮಿಸಲಾಗಿತ್ತು. ನಾಯಿ ಸಾಯಿಸಿದ ಬಳಿಕ ಲಿಫ್ಟ್ ಹೊರಗೆ ಹೋಗಿ ಬಿತ್ತು ಎಂದು ಪುಷ್ಪಾಲತಾ ಕಥೆ ಕಟ್ಟಿದ್ದಳು. ಈ ಬಗ್ಗೆ ಶ್ವಾನದ ಮಾಲಕಿ ಸೆಕ್ಯೂರಿಟಿ ಬಳಿ ವಿಚಾರಿಸಿದಾಗ ಮಾಹಿತಿ ದೊರಕಿದೆ. ಅನುಮಾನ ಬಂದು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.