Home Uncategorized ಲಯನ್ಸ್ ಕ್ಲಬ್ ನಲ್ಲಿ ಬೇಸಿಗೆ ಶಿಬಿರ

ಲಯನ್ಸ್ ಕ್ಲಬ್ ನಲ್ಲಿ ಬೇಸಿಗೆ ಶಿಬಿರ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.22 ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ನಲ್ಲಿ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್ ( ರಿ) ಬಳ್ಳಾರಿ ಇವರಿಂದ ಹಮ್ಮಿಕೊಂಡಿದ್ದ ಬೇಸಿಗೆಯ ತರಬೇತಿ ಸಿಬಿರ ಕಾರ್ಯಕ್ರಮದ ಕೊನೆಯ ದಿನಾವಾದ ಇಂದು ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಹಿಂದುಸ್ಥಾನಿ ಸಂಗೀತ ಸುಗಮಸಂಗೀತ ಚಿತ್ರಗೀತೆಗಳು ಯೋಗ ಧ್ಯಾನ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮದ ಉದ್ಘಾಟನೆಯನ್ನು ಲೆಕ್ಕಪರಿಶೋಧಕ.. ಸಿದ್ದರಾಮೇಶ್ವರಗೌಡ  ಇವರು ನೆರವೇರಿಸಿ ಮಕ್ಕಳಿಗೆ ಸಂಗೀತ ಕಲಿಸುವದರಿಂದ ಶರೀರ ಶಾರೀರ ಎರಡೂ ಸ್ಥಿಮಿತದಲ್ಲಿರುತ್ತದೆ ಪೋಷಕರು ತಾಯಂದಿರು ತಮ್ಮ ತಮ್ಮ ಮಕ್ಕಳ ಬುದ್ಧಿಮಟ್ಟವನ್ನ ಜಾಗೃತಗೊಳಿಸ ಬೇಕಾದರೆ ಇಂತಹ ಬೇಸಿಗೆ ಸಿಬಿರ ಅಗತ್ಯ ಎಂದರು

ಕೆ.ಎಂ ಸಿದ್ದಲಿಂಗಯ್ಯ ಸ್ವಾಮಿ ಮಾತನಾಡಿ ಪಂಡಿತ ಪಟ್ಟರಾಜ ಕವಿ ಗವಾಯಿಗಳವರ ಆಶ್ರಮದ ವಿದ್ಯಾರ್ಥಿಗಳು ದೊಡ್ಡ ಬಸವಗವಾಯಿಗಳು ಇಂತಹ ಗವಾಯಿಗಳು ಮುತ್ಸದ್ದಿತನ ಹಾಗೂ ವಿನಯತೆಯವೆಕ್ತಿ ಬಳ್ಳಾರಿಗೆ ನಮ್ಮ ಮತ್ತು ನಿಮ್ಮ ಗೆ ದೊರೆತದ್ದು ಸುದೈವ ಇಂತವರ ಪಾಠಶಾಲೆಯಲ್ಲಿ ಕಲಿತ ಮಕ್ಕಳು ಮುಂದಿನ ಪೀಳಿಗೆಯಲ್ಲಿ ಮಹಾನ್ ವೆಕ್ತಿಗಳಾಗಲಿ ಎಂದು ಹಾರೈಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಬಯಲಾಟದ ರಂಗ ಶಿಕ್ಷಕರು ಹೆಚ್ ತಿಪ್ಪೇಸ್ವಾಮಿ ಮಾತನಾಡಿ ಹತ್ತಾರು ವರ್ಷಗಳಿಂದ ಬೇಸಿಗೆ ಸಿಬಿರ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಹಾಡುಗಾರಿಕೆ ದ್ಯಾನ ಯೋಗದಂತಹ ಕಾರ್ಯಕ್ರಮದಿಂದ ಮನಶುದ್ದೀ ಯೊಂದಿಗೆ ಸಂಸ್ಕಾರ ಸಂಸ್ಕೃತಿ ಸಾಂಸ್ಕೃತಿಕವಾಗಿ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುವದರ ಜೊತೆಗೆ ಸಂಗೀತಗಾರರಾಗುವ ನಿಟ್ಟಿನಲ್ಲಿ ಬೆಳೆಯಲಿ ಬಳ್ಳಾರಿಯ ಅನೇಕ ಪ್ರತಿಭೆಗಳು  ಜೀ ಕನ್ನಡ ವಾಹಿನಿ ನಡೆಸಿ ಕೊಡುವ

ಸರಿಗಮಪ ವೇದಿಕೆಯಲ್ಲಿ ಬಳ್ಳಾರಿಯ ಕೀರ್ತಿ ಹೆಚ್ಚಿದ್ದಾರೆ ಇವರಲ್ಲಿ ಸಹ ಅಂತಹ ಪ್ರತಿಭೆಗಳು ಅರಳಲಿ ಬೇಸಿಗೆ ಸಿಬಿರಿದ ಕಾರ್ಯಕ್ರಮ ಯಶಶ್ವಿಯಾಗಲೆಂದು ಹಾರೈಸಿದರು.

ಅತಿಥಿಗಳಾಗಿ  ಮಲ್ಲಿಕಾರ್ಜುನ ಲಯನ್ಸ್ ಕ್ಲಬ್ ಅಧ್ಯಕ್ಷರು ಬಳ್ಳಾರಿ ಅಕ್ಕಿಶರಣ ಬಸವ ಲಯನ್ಸ್ ಕ್ಲಬ್ ಖಜಾಂಚಿ, ಶ್ರೀಮತಿ ಬಸಲಿಂಗಮ್ಮ ಯೋಗಶಿಕ್ಷಕರು ಈ ಹನುಮಾವ ಧೂತಬಂಡಿಹಟ್ಟಿ ದೊಡ್ಡ ಬಸವಗವಾಯಿ

ವೀರೇಶ್ ಸೋಮನಾಥ ಅತಿಥಿಗಳಾಗಿ ಭಾಗವಹಿಸಿದ್ದರು. ಕೃಷಿಯೋ ಪುಟ್ಟರಾಜ ಹಾರ್ಮೋನಿಯಂ ಪಂಚಾಕ್ಷರಿ ತಬಲವಾದನ ಯೋಗೀಶ್ ಸಂಗನಕಲ್ಲು ಬೇಸಿಗೆ ಸಿಬಿರಿದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ತಂದೆ ತಾಯಂದಿರು ಪೋಷಕರು ಭಾಗವಹಿಸಿದ್ದರು ಟ್ರಸ್ಟ್ ಅಧ್ಯಕ್ಷರು ಶ್ರೀಮತಿ ಕವಿತಾ ಕಗ್ಗಲ್ ವಂದನಾರ್ಪಣೆ ನಡೆಸಿಕೊಟ್ಟರು g5