
ನವದೆಹಲಿ,ಫೆ,15:- ರಷ್ಯಾದ ತೈಲದ ಮೇಲಿನ ಅಮೆರಿಕದ ನಿರ್ಬಂಧಗಳ ನಡುವೆ,ಭಾರತ ಇಂಧನ ಖರೀದಿಗಳು ವೆಚ್ಚಗಳು, ಅಪಾಯಗಳು ಮತ್ತು ಲಭ್ಯತೆ ಆಧರಿಸಿರುತ್ತದೆ ಹೊರತು ರಾಜಕೀಯ ಒತ್ತಡವಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ
ಜರ್ಮನಿಯ ಮ್ಯೂನಿಚ್‍ನಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಅವರು ಕಾರ್ಯತಂತ್ರದ ಸ್ವಾಯತ್ತತೆಗೆ ಭಾರತದ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ರಷ್ಯಾ ಇಂಧನ ಆದಾಯದ ಮೇಲಿನ ಅಮೇರಿಕಾ ಒತ್ತಡ ಬಿಗಿಗೊಳಿಸಿದ ಹಿನ್ನೆಲೆಯಲ್ಲಿ ಭಾರತ ಜಾಗತಿಕ ವೇದಿಕೆಯಿಂದ ದೃಢವಾದ ಸಂಕೇತ ಕಳುಹಿಸಿದೆ.
ಇಂಧನ ಖರೀದಿಗಳು ರಾಜಕೀಯ ಒತ್ತಡದಿಂದಲ್ಲ, “ವೆಚ್ಚಗಳು, ಅಪಾಯಗಳು ಮತ್ತು ಲಭ್ಯತೆಯಿಂದ” ಮಾರ್ಗದರ್ಶಿಸಲ್ಪಡುತ್ತವೆ ಎಂದು ಹೇಳಿದ್ದಾರೆ.
ರಷ್ಯಾದ ತೈಲದ ಮೇಲಿನ ಅಮೆರಿಕದ ಹೊಸ ನಿರ್ಬಂಧಗಳು ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಹೇಳಿಕೆಗಳ ನಡುವೆ ಸಂದೇಶ ಬಂದಿದೆ,ಭಾರತ ಹೆಚ್ಚುವರಿ ರಷ್ಯಾದ ಕಚ್ಚಾ ತೈಲ ಖರೀದಿ ನಿಲ್ಲಿಸಲು ಒಪ್ಪಿಕೊಂಡಿದೆ ಎನ್ನುವ ಮಾಹಿತಿ ನಡುವೆಯೇ ಸಚಿವ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ
ಭಾರತ-ಅಮೆರಿಕ ವ್ಯಾಪಾರ ತಿಳುವಳಿಕೆಯು ಭಾರತದ ದೀರ್ಘಕಾಲೀನ ಕಾರ್ಯತಂತ್ರದ ಸ್ವಾಯತ್ತತೆ ನೀತಿಯನ್ನು ದುರ್ಬಲಗೊಳಿಸುತ್ತದೆ ಎನ್ನುವ ವಾದ ತಳ್ಳಿಹಾಕಿದ ಅವರು
ರಷ್ಯಾದ ಇಂಧನ ವಲಯದ ಮೇಲಿನ ಇತ್ತೀಚಿನ ಅಮೆರಿಕ ನಿರ್ಬಂಧಗಳ ನಂತರ ಹೆಚ್ಚುವರಿ ರಷ್ಯಾದ ತೈಲವನ್ನು ಖರೀದಿಸುವುದನ್ನು ತಡೆಯಲು ಅಮೆರಿಕ ಭಾರತದಿಂದ ಬದ್ಧತೆ ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೋ ತಿಳಿಸಿದ್ದಾರೆ
“ರಷ್ಯಾದ ತೈಲದ ಮೇಲೆ ಅಮೆರಿಕ ಹೆಚ್ಚುವರಿ ನಿರ್ಬಂಧ ವಿಧಿಸಿದೆ. ಭಾರತದೊಂದಿಗಿನ ಸಂಭಾಷಣೆಯಲ್ಲಿ, ಹೆಚ್ಚುವರಿ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುವ ಬದ್ಧತೆಯನ್ನು ಪಡೆದುಕೊಂಡಿದ್ದೇವೆ. ಯುರೋಪ್ ಮುಂದುವರಿಯುವ ಹೆಜ್ಜೆಗಳನ್ನು ಇಟ್ಟಿದೆ” ಎಂದು ಹೇಳಿದ್ಧಾರೆ
ಜರ್ಮನ್ ವಿದೇಶಾಂಗ ಸಚಿವ ಜೋಹಾನ್ ವಾಡೆಫುಲ್ ಅವರೊಂದಿಗೆ ವೇದಿಕೆಯಲ್ಲಿ ಮಾತನಾಡುದ ಜೈಶಂಕರ್ ಭಾರತದ ವಿದೇಶಾಂಗ ನೀತಿ ದಿಕ್ಸೂಚಿ ಸುಲಭವಾಗಿ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
“ಇಂಧನ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಇಂದಿನ ಸಂಕೀರ್ಣ ಮಾರುಕಟ್ಟೆಯಾಗಿದೆ. ಭಾರತದಲ್ಲಿ, ಯುರೋಪ್‍ನಲ್ಲಿ ಮತ್ತು ಬಹುಶಃ ಪ್ರಪಂಚದ ಇತರ ಭಾಗಗಳಲ್ಲಿ ತೈಲ ಕಂಪನಿಗಳು ಲಭ್ಯತೆ ನೋಡುತ್ತವೆ, ವೆಚ್ಚಗಳನ್ನು ನೋಡುತ್ತವೆ, ಅಪಾಯಗಳನ್ನು ನೋಡುತ್ತವೆ ಮತ್ತು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಇತ್ತೀಚಿನ ಫೆÇ?ನ್ ಸಂಭಾಷಣೆಯ ನಂತರ, ಎರಡೂ ಕಡೆಯವರು ಭಾರತೀಯ ಸರಕುಗಳ ಮೇಲಿನ ಅಮೇರಿಕಾ ಸುಂಕವನ್ನು ಶೇಕಡಾ 50 ರಿಂದ ಶೇಕಡಾ 18 ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ.


























