
ಮಂಗಳೂರು- “ರೋಟರಿ ಸಂಸ್ಥೆಯ ಸದಸ್ಯರು ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ ಶ್ರಮಿಸಿ ಸಮಾಜಸೇವಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ನೂತನ ಸದಸ್ಯರನ್ನು ಹೆಚ್ಚು ಸೇರ್ಪಡಿಸಿಗೊಳಿಸಿ ಸಂಸ್ಥೆ ಯನ್ನು ಬಲಪಡಿಸಿ ಯಶಸ್ಸು ಸಾಧಿಸಬೇಕು” ಎಂದು ಮೈಸೂರು ನಗರ ಮೂಲದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ರೋಟರಿ ಜಿಲ್ಲಾ ೩೧೮೧ರ ಗವರ್ನರ್ ರಾಮಕೃಷ್ಣ ಪಿ.ಕೆ ಸಲಹೆ ನೀಡಿದ್ದಾರೆ.
ನಗರದ ಮಂಗಳೂರು ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಸ್ಥಾಪನಾ ದಿನಾಚರಣೆಯಲ್ಲಿ ಸಂಸ್ಥೆಗೆ ಅಧಿಕೃತ ಭೇಟಿ ನೀಡಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ರೋಟರಿ ಅಂತರ್ ರಾಷ್ಟ್ರೀಯ ಪ್ರತಿಷ್ಠಾನಕ್ಕೆ ಉದಾರ ದಾನ ನೀಡಬೇಕು ಎಂದು ಕರೆ ನೀಡಿದರು
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರವಿಶಂಕರ್ ರಾವ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ. ರಂಜನ್ ಸಂಪಾದಕ್ವದ ಸಂಸ್ಥೆಯ ಗೃಹ ವಾರ್ತಾ ಪತ್ರಿಕೆ ‘ಸಿಟಿ ಬಿಟ್ಸ್ ಆಂಡ್ ಬೈಟ್ಸ್’ಯನ್ನು ಬಿಡುಗಡೆಗೊಳಿಸಿ ಸಂಸ್ಥೆಯ ಸಮಾಜಸೇವಾ ಕಾರ್ಯ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪನಾ ಸದಸ್ಯ ಡಾ. ರಂಜನ್, ಸರಿತಾ ಡಿ ಸೋಜ , ಪ್ರಶಾಂತ್ ರೈ, ಭಸವ ಕುಮಾರ್, ಸುದೇಶ್‌ರನ್ನು ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ಸಜ್ಞಾ ಭಾಸ್ಕರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಪದ್ಮನಾಭ್ ನಾಯ್ಕ್ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸಲಹೆಗಾರ ರಾಜೇಂದ್ರ ಕಲ್ಬಾವಿ, ವಲಯ ಪ್ರತಿನಿಧಿ ಪ್ರಶಾಂತ್ ರೈ ಉಪಸ್ಥಿತರಿದ್ದರು. ಕೆನ್ಯೂಟ್ ಪಿಂಟೋ ಅತಿಥಿಗಳನ್ನು ಗುರುತಿಸಿ ಗೌರವಿಸಿದರು. ಕಾರ್ಯದರ್ಶಿ ಪದ್ಮನಾಭ್ ನಾಯ್ಕ್ ವಂದಿಸಿದರು.





























