
ಸಂಜೆವಾಣಿ ನ್ಯೂಸ್
ಮೈಸೂರು: ನ.28:– ಸರಗೂರು ತಾಲ್ಲೂಕಿನ ಕೊತ್ತೆಗಾಲ ಹಾಗೂ ಚಾಮೇಗೌಡನ ಹುಂಡಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ರಾಜ್ಯ ರೈತ ಕಲ್ಯಾಣ ಸಂಘದ ಪ್ರಧಾನ ಕಚೇರಿಗೆ ಭೇಟಿ ನೀಡಿ, ರಾಜ್ಯಾಧ್ಯಕ್ಷರಾದ ಭೂಮಿಪುತ್ರ ಸಿ.ಚಂದನ್‍ಗೌಡರ ಜೊತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಮ್ಮ ಊರಿನ ಸಮಸ್ಯೆಗಳ ಬಗ್ಗೆ ವಿವರಿಸಿ, ಬಳಿಕ ರೈತ ಕಲ್ಯಾಣದ ಧ್ಯೇಯೋದ್ದೇಶಗಳನ್ನು ಮೆಚ್ಚಿ, ತಾವೂ ಕೂಡಾ ಮಣ್ಣಿನ ಸೇವೆಯಲ್ಲಿ ತೊಡಗುವುದಾಗಿ ತಿಳಿಸಿ, ರೈತ ಕಲ್ಯಾಣಕ್ಕೆ ಸೇರ್ಪಡೆಯಾದರು.
ಈ ವೇಳೆ ಸರಗೂರು ತಾಲ್ಲೂಕು ಗೌರವಾಧ್ಯಕ್ಷರನ್ನಾಗಿ ಧನ್ಯಕುಮಾರ್, ಸರಗೂರು ಹೋಬಳಿ ಗೌರವಾಧ್ಯಕ್ಷರನ್ನಾಗಿ ಎಚ್.ಶಿವು, ಚಾಮೇಗೌಡನ ಹುಂಡಿ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಸುರೇಶ್, ಉಪಾಧ್ಯಕ್ಷರನ್ನಾಗಿ ಕೆಂಪನಾಯಕ ಮತ್ತು ಹಿರನಾಯಕ ಹಾಗೂ ಗೌರವಾಧ್ಯಕ್ಷರನ್ನಾಗಿ ರವಿಕುಮಾರ್ ರವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಯಿತು. ಈ ಸಂದರ್ಭದಲ್ಲಿ ಶಿವು ಶಂಖಹಳ್ಳಿ, ಸತೀಶ್ ಸಾಗರೆ ಮತ್ತು ಉಮೇಶ್ ರವರು ಉಪಸ್ಥಿತರಿದ್ದರು.




























