ರೈತರ ಆಹೋರಾತ್ರಿ ಧರಣಿ ಪ್ರತಿಭಟನೆಗೆ ಸ್ಪಂದಿಸದ ಆಡಳಿತ ಸರ್ಕಾರ

ಸಂಜೆವಾಣಿ ವಾರ್ತೆ
ಹನೂರು.ಡಿ.3:-
ಚಾಮರಾಜನಗರ ಲೋಕಸಭಾ ಸಂಸದರಾದ ಸುನೀಲ್ ಬೋಸ್, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ರವರನ್ನು ಹುಡುಕಿ ಅವರನ್ನು ವಡಕೆಹಳ್ಳ ಆಹೋರಾತ್ರಿ ಧರಣಿ “ಸ್ಥಳಕ್ಕೆ ಕರೆತರುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ರೈತರು ರಾಮಪುರ ಪೆÇಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.


ಭಾರತ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರೀಕರಿಗೆ ಸಂವಿಧಾನದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಚುನಾವಣೆಯನ್ನು ಜಾರಿ ಮಾಡಿದೆ ಚುನಾವಣೆಯಲ್ಲಿ ಜನರ ಕೆಲಸ ಕಾರ್ಯ ಅಂದರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿ ಲೋಕಸಭಾ ಸಂಸದರಾಗಿ ಆಯ್ಕೆಯಾದ ಸುನಿಲ್ ಬೋಸ್ ಅವರು ಕಾಣೆಯಾಗಿದ್ದಾರೆ.
ತಿ.ನರಸೀಪುರ ಕ್ಷೇತ್ರದ ಶಾಸಕರಾದ ಹೆಚ್.ಸಿ.ಮಹದೇವಪ್ಪ ರವರು ಕಳೆದ ಲೋಕಸಭಾ ಚುನಾವಣೆಯ ವೇಳೆ ನಮ್ಮ ಭಾಗಕ್ಕೆ ಬಂದು ನನ್ನ ಮಗನಾದ ಸುನೀಲ್ ಬೋಸ್‍ಗೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉದ್ಯೋಗ ಮಾಡಲು ಉದ್ಯೋಗ ಕೊಡಿ ಎಂದು ಕೇಳಲಾಗಿ ನಮ್ಮ ಭಾಗದ ಮತದಾರರು ಅವರಿಗೆ ಉದ್ಯೋಗವನ್ನು ಕಲ್ಪಿಸಿರುತ್ತೇವೆ.


ಹಾಗೂ ಸರ್ಕಾರ ನೀಡುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಪಡೆದುಕೊಳ್ಳುತ್ತಿರುವ ಸೌಲಭ್ಯಗಳಿಗೆ ತಕ್ಕಂತೆ ಕ್ಷೇತ್ರದಲ್ಲಿ ಕೆಲಸ ಮಾಡದೆ ನಾಗರೀಕರಿಗೆ ತುಂಬಾ ಸಮಸ್ಯೆಯಾಗುತ್ತಿದ್ದು, ಈಗಾಗಲೇ ಕಳೆದ 37 ದಿನಗಳಿಂದ ರೈತರು ಹಾಗೂ ನಾಗರೀಕರು ನೀರಿನ ಸಮಸ್ಯೆ. ಪೆÇೀಡಿ ಸಮಸ್ಯೆ, ಬಗರ್ ಹುಕುಂ ಸಮಸ್ಯೆ ಬಗೆಹರಿಸುವಂತೆ ಧರಣಿ ಪ್ರತಿಭಟನೆ ಮಾಡಲಾಗುತ್ತಿದೆ.
ಉದ್ಯೋಗ ಪಡೆದುಕೊಂಡಿರುವ ಸಂಸದ ಇಲ್ಲಿಯತನಕ ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ವಿಫಲರಾಗಿ ನೀಡಿರುವ ಉದ್ಯೋಗವನ್ನು ನಿಭಾಯಿಸುವಲ್ಲೂಕೂಡ ವಿಫಲರಾಗಿದ್ದಾರೆ. ಈಗಾಗಲೇ ಅವರು ಕಾಣೆಯಾಗಿ ಎಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ಇಲ್ಲಿ ಕೆಲಸ ನಿರ್ವಹಿಸಲು ಅವರನ್ನು ಹುಡುಕಿ ಆಹೋರಾತ್ರಿ ಧರಣಿ ಸ್ಥಳಕ್ಕೆ ಕರೆತರಬೇಕು.


ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ರವರನ್ನು ಕರ್ನಾಟಕ ಸರ್ಕಾರ ಚಾಮರಾಜನಗರ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಉಸ್ತುವಾರಿ ಜವಾಬ್ದಾರಿ ನೀಡಿದ್ರು. ಇವರು ಕೂಡ ತಮ್ಮ ಕೆಲಸವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಈಗಾಗಲೇ ಅವರು ಕೇಂದ್ರ ಸ್ಥಳವಾದ ಚಾಮರಾಜನಗರಕ್ಕೆ ಭೇಟಿಕೊಡುತ್ತಿದ್ದು ಅವರು ಕೂಡ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳುತ್ತಿರುತ್ತಾರೆ.
ಆದರೆ ಹನೂರು ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳನ್ನು ಆಲಿಸಲು ಬರುತ್ತಿಲ್ಲ. ಈಗಾಗಲೇ ರೈತರು ಹಾಗೂ ನಾಗರೀಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಇವರನ್ನು ಹುಡುಕಿ ಅಹೋರಾತ್ರಿ ಧರಣಿ ಸ್ಥಳಕ್ಕೆ ಕರೆದು ಕೊಂಡು ಬರ ಬೇಕೆಂದು ದೂರು ನೀಡಿದ್ದಾರೆ.


ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಮಾರ್ಟಳ್ಳಿ ಘಟಕದ ಅಧ್ಯಕ್ಷ ಅರ್ಪುದರಾಜ್, ಬಿದರಹಳ್ಳಿ ಪುಟ್ಟಸ್ವಾಮಿ, ಲೂರ್ದುಸ್ವಾಮಿ, ಜೋಸೆಫ್, ಸೂಸೈಮಾಣಿಕ್ಯಂ, ಆರೋಕ್ಯ ಸೆಲ್ವಾರಾಜ್, ಸೇಸು ಸೇರಿದಂತೆ ಇನ್ನಿತರರು ಇದ್ದರು.