
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ, ನ.01 : ಎಪಿಎಂಸಿಯಲ್ಲಿ ರೈತರಿಗೆ ಸೂಕ್ತ ಮಾಹಿತಿ ಜೊತೆಗೆ ಬೆಂಬಲ ಬೆಲೆ ಸಿಗದಂತಾಗಬೇಕು ರೈತರು ಕಷ್ಟಪಟ್ಟು ಬೆಳೆಗಳನ್ನು ಬೆಳೆಯುತ್ತಾರೆ ಖರೀದಿದಾರರು ಬೆಳೆಗೆ ತಕ್ಕ ಬೆಲೆಯನ್ನು ನೀಡಬೇಕು ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಹೇಳಿದರು
ಪಟ್ಟಣದ ಎಪಿಎಂಸಿಯಲ್ಲಿ ಶುಕ್ರವಾರ ರೈತರು ಬೆಳೆದ ಮೆಕ್ಕೆಜೋಳ ಖರೀದಿಯಲ್ಲಿ ವರ್ತಕರು ತೂಕದಲ್ಲಿ (ಬಾಜ್) ತಾರತಮ್ಯದ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ರೈತರಿಗೆ ಮೋಸ ಮಾಡುತ್ತಿರುವ ಬಗ್ಗೆ÷ದೂರುಗಳು ಬರುತ್ತಿರುವುದರ ಜೊತೆ ರೈತರು ಖರೀದಿದಾರರಿಗೆ ಮಾರಾಟ ಮಾಡುವ ಬೆಳೆಗಳನ್ನು ತೂಕ ಹಾಕುವಾಗ ಬಾಜ್‌ನಲ್ಲಿ ತಾರತಮ್ಯವಾಗದಂತೆ ಅಧಿಕಾರಿಗಳು ತಾಕೀತು ಮಾಡಬೇಕು ಎಂದರು.
ರೈತರು ಸಾಲ ಮಾಡಿ ಬೆಳೆಗಳನ್ನು ಬೆಳೆದಿರುತ್ತಾರೆ ಅವರಿಗೆ ಬೆಂಬಲ ಬೆಲೆ ನಿಡುವುದು ಧರ್ಮವಾಗಿದೆ ಅದನ್ನು ಬಿಟ್ಟು ವರ್ತಕರು ಅವರಿಂದ ವಸೂಲಿತಪ್ಪಿಸಬೇಕು ಎಂದರು
ತಹಶಿಲ್ದಾರ್ ಆರ್.ಕವಿತಾ ಮಾತನಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಳೆದ ವರ್ಷವೇ ತೀರ್ಮನಿಸಲಾಗಿತ್ತು ಆದರೆ ರೈತರು ತಮ್ಮ ಬೆಳೆಗಳನ್ನು ಕೊಟ್ಟಿದ್ದರಿಂದ ಹಲವು ಕ್ರಮಗಳನ್ನು ಜರುಗಿಸಲು ಸಾಧ್ಯವಾಗಿರಲಿಲ್ಲಾ, ಈ ಬರಿ ಮೊದಲು ಎಪಿಎಂಸಿಯಲ್ಲಿ ರೈತರಿಗೆ ನೆರವಾಗುವ ಮಾಹಿತಿಯ ನಮಫಲಕವನ್ನು ಅಳವಡಿಸಿ ಜೊತೆಗೆ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಸಹಾಯ ವಾಣಿ ಸೇವೆಯನ್ನು ನಿಗದಿಗಳಿಸುವಂತೆ ಎಪಿಎಂಸಿ ಕಾರ್ಯದರ್ಶಿ ಶೈಲಜಾ ಅವರಿಗೆ ತಾಕೀತು ಮಾಡಿದರು,
ಶೈಲಜಾ ಮಾತನಾಡಿದರು ಎಪಿಎಂಸಿಯ ವರ್ತಕರು ಮತ್ತು ಹೊರಗಡೆ ಖರೀದಿದಾರರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು ಇಲ್ಲವಾದರೆ ಅವರ ಖರೀದಿಗಾಗಿ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು.ಎಂದರು

































