ರೇನಾ ಸೌಹಾರ್ದ ಸಹಕಾರ ಸಂಘ 14,511ರೂ. ನಿವ್ವಳ ಲಾಭ: ಎ.ಎಸ್.ಮಹದೇವಸ್ವಾಮಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ. 22-
ರೇನಾ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘವು ಪ್ರಸಕ್ತ ವರ್ಷದಲ್ಲಿ ಉತ್ತಮ ವಹಿವಾಟು ನಡೆಸಿ, 14,511 ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎ.ಎಸ್. ಮಹದೇವಸ್ವಾಮಿ ತಿಳಿಸಿದರು.


ನಗರದ ಮೆಗಾ ಕಾಂಪ್ಲೆಕ್ಸ್‍ನಲ್ಲಿರುವ ರೇನಾ ವಿವಿದ್ದೋದ್ದೇಶಿತ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ರೇನಾ ಸಹಕಾರ ಸಂಘ ಬಹಳ ಉತ್ತಂಗದಲ್ಲಿ ನಡೆಯುತ್ತಿತ್ತು. ನಂತರ ನಷ್ಟವನ್ನು ಹೊಂದಿತ್ತು. ಸತತ ನಷ್ಟವನ್ನು ತುಂಬಿಕೊಂಡು ಪ್ರಸಕ್ತ ಸಂಘವು ಆಡಳಿತ ಮಂಡಲಿ ಹಾಗೂ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಲಾಭವನ್ನು ಪಡೆದುಕೊಂಡಿದೆ ಎಂದರು.


ಕಳೆದ ಮೂರು ವರ್ಷಗಳಿಂದ ಸಂಘವನ್ನು ಲಾಭದತ್ತ ಕೊಂಡೊಯುತ್ತಿದ್ದು, 2021-22 ಸಾಲಿನಲ್ಲಿ ನಷ್ಟಲ್ಲಿದ್ದ ಸಂಘವನ್ನು ಕ್ರಮೇಣ ವ್ಯವಸ್ಥಿತವಾಗಿ ಎಲ್ಲರ ಸಹಕಾರದಿಂದ ಮುನ್ನಡೆಸಲಾಗುತ್ತಿದೆ. ಸದಸ್ಯರು ನಮ್ಮ ಸಂಘದ ಮೇಲೆ ವಿಶ್ವಾಸವಿಟ್ಟು, óಷೇರು, ಠೇವಣಿ ಹಾಗೂ ಇತರೇ ವ್ಯವಹಾರವನ್ನು ಮಾಡುವ ಮೂಲಕ ಅಭಿವೃದ್ದಿ ಹೊಂದಬೇಕು ಎಂದರು.


ಸಹಕಾರಿ ಕ್ಷೇತ್ರ ಬೆಳೆದಷ್ಟು ರೈತರು ಹಾಗೂ ಸಹಕಾರಿ ಸಂಘದ ಸದಸ್ಯರು ಅಭಿವೃದ್ದಿ ಹೊಂದುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರಿ ಕ್ಷೇತ್ರ ಬಲವಾಗಿದ್ದು, ಸರ್ಕಾರ ಮಾಡಲಾಗದಷ್ಟು ಕೆಲಸ ಕಾರ್ಯಗಳನ್ನು ಸೌಹಾರ್ದ ಸಹಕಾರಿ ಸಂಘಗಳು ಮಾಡುತ್ತಿವೆ. ಈ ಮಾದರಿಯಲ್ಲಿ ಚಾಮರಾಜನಗರದಲ್ಲಿಯು ಸಂಘವನ್ನು ಮಾದರಿ ಸಂಘವನ್ನಾಗಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಸಭೆಯಲ್ಲಿ ರೇನಾ ವಿವಿದೋದ್ದೇಶ ಸೌಹರ್ದ ಸಹಕಾರಿ ನಿಯಮಿತವನ್ನು ಎಲ್ಲಾ ಸದಸ್ಯರ ಅನುಮೋದನೆ ಮೇರೆಗೆ ಗಡಿನಾಡು ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮತಿ ಎಂದು ಮರು ನಾಮಕರಣ ಮಾಡಲು ಸರ್ವ ಸದಸ್ಯರ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.


ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ. ಶಂಕರ್, ನಿರ್ದೇಶಕರಾದ ಕೆ.ಜಿ. ಪ್ರಕಾಶ್, ಸಿ.ಎಸ್. ರೇಣುಕಾಪ್ರಸಾದ್, ಜಿ. ಸೋಮಣ್ಣ, ಕೆ.ಎಂ. ಮಂಜುನಾಥ್, ವೈ.ಅಕ್ಷಯ್, ಎಚ್.ಎಂ. ಮಹದೇವಸ್ವಾಮಿ, ಎನ್.ಸಿ. ಅಶ್ವಿನಿ, ಶೋಭರವಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನಕುಮಾರ್, ಸಹಾಯಕ ಬಸವರಾಜು ಹಾಗು ಸದಸ್ಯರು ಇದ್ದರು.