ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ
ಸುಳ್ಯ:ಪಂಜ ಉತ್ಪಾದಕರ ಸಹಕಾರ ಸಂಘದ ೨೦೨೪-೨೫ ನೇ ಸಾಲಿನ ಸರ್ವಸದಸ್ಯರ ೩೯ನೇ ಮಹಾಸಭೆ ಬುಧವಾರ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಭಾಸ್ಕರ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ೨೦೨೪-೨೫ ಸಾಲಿನಲ್ಲಿ ಒಟ್ಟು ರೂ. ೨,೪೨,೦೨,೩೧೩ ಕೋಟಿ ವ್ಯವಹಾರ ನಡೆಸಿ ರೂ. ೩,೩೦,೮೪೩ ಲಕ್ಷ ನಿವ್ವಳ ಲಾಭ ಗಳಿಸಿದೆ. ಪ್ರತೀ ಲೀಟರ್ ಗೆ ೧.೧೦ ರೂ ಬೋನಸ್, ಶೇ.೭ ಷೇರು ಡಿವಿಡೆಂಡ್ ನೀಡಲಿದ್ದೇವೆ”. ಎಂದು ಹೇಳಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಪಂಜ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಮೋನಪ್ಪ ಕೆಬ್ಲಾಡಿ, ನಿರ್ದೇಶಕರಾದ ಚನಿಯಪ್ಪ ಗೌಡ ಕುಳ್ಳಕೋಡಿ, ನಾರಾಯಣ ನಾಯ್ಕ ಚಾಳೆಗುಳಿ, ಜಯಂತ ಕುಳ್ಳಕೋಡಿ, ಉದಯ ಬಿಡಾರಕಟ್ಟೆ, ಮೋನಪ್ಪ ಗೌಡ ಮಿತ್ರಾಣೆ, ಪೆರ್ಗಡೆ ಕಾಣಿಕೆ, ಗಣೇಶ ಪಾಲೋಳಿ, ಪದ್ಮಯ್ಯ ನಾಯ್ಕ ಸಂಪ, ಲಕ್ಷ್ಮೀ ನೇರಳ, ಯಶೋಧ ಬರೆಮೇಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
.ಸನ್ಮಾನ- ಗೌರವಾರ್ಪಣೆ:
೨೦೨೪- ೨೫ ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ರಾಜೀವಿ ಪಿ. ಪ್ರಥಮ, ಯಶೋಧ ಬಿ ಸಿ ದ್ವಿತೀಯ, ಕುಸುಮಾಧರ. ಕೆ ತೃತೀಯ ಸ್ಥಾನ ಪಡೆದಿದ್ದು ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಅಲ್ಲದೇ ಹೆಚ್ಚು ಹಾಲು ಹಾಕಿದ ೧೦ ಸದಸ್ಯರನ್ನು ಹಾಗೂ ಹೆಚ್ಚು ಗುಣಮಟ್ಟದ ಹಾಲು ನೀಡಿದ ಇಬ್ಬರನ್ನು ಗೌರವಿಸಲಾಯಿತು. ಸಂಘದಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಗೊಂಡ ವನಿತಾ ಕರಿಮಜಲು ಅವರನ್ನು ಸನ್ಮಾನಿಸಲಾಯಿತು. ಹೇಮಾವತಿ ನಾಯರ್ ಕೆರೆ ಪ್ರಾರ್ಥಿಸಿದರು. ಭಾಸ್ಕರ ನಾಯಕ್ ಸ್ವಾಗತಿಸಿ, ಆದರ್ಶ ಚಿದ್ಗಲ್ಲು ವರದಿ ವಾಚಿಸಿದರು. ಮೋನಪ್ಪ ಕೆಬ್ಲಾಡಿ ವಂದಿಸಿದರು. ಜಾನುವಾರು ಕೃತಕ ಗರ್ಭಧಾರಣೆ ಕಾರ್ಯಕರ್ತ ಕೇಶವ ಕೆ, ಸಿಬ್ಬಂದಿಗಳಾದ ಮಧುಸೂದನ ಕೆ ಆರ್, ಪದ್ಮಯ್ಯ ನಾಯ್ಕ ಕೆಮ್ಮೂರು ಸಹಕರಿಸಿದರು.




























