Home ಜಿಲ್ಲೆ ಮಂಗಳೂರು ರಾಷ್ಟ್ರ ಮಟ್ಟದ ಕ್ರೀಡಾಪಟು ಭಾನವಿ ಪಿ.ಎಸ್ ಕುಕ್ಕುಜಡ್ಕ ಅವರಿಗೆ ಅಭಿನಂದನೆ

ರಾಷ್ಟ್ರ ಮಟ್ಟದ ಕ್ರೀಡಾಪಟು ಭಾನವಿ ಪಿ.ಎಸ್ ಕುಕ್ಕುಜಡ್ಕ ಅವರಿಗೆ ಅಭಿನಂದನೆ

ಸುಳ್ಯ:ಸುಳ್ಯದ ಅಮರ ಸಂಘಟನಾ ಸಮಿತಿ ವತಿಯಿಂದ ರಾಷ್ಟ್ರ ಮಟ್ಟದ ಕ್ರೀಡಾಪಟು ಭಾನವಿ ಪಿ. ಎಸ್ ಕುಕ್ಕುಜಡ್ಕ ಅವರಿಗೆ ಅಭಿನಂದನೆ ಮತ್ತು ಸಹಾಯಹಸ್ತ ಕಾರ್ಯಕ್ರಮ ಅಮರಮೂಡ್ನೂರು ಗ್ರಾಪಂ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಆಶ್ರಯದಲ್ಲಿ ಆಳ್ವಾಸ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ೧೮ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ೪೦೦ ಮೀ ಓಟದಲ್ಲಿ ಪ್ರಥಮ ಹಾಗೂ ೨೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು. ೪೦೦ ಮೀ ಓಟವನ್ನು ೫೬.೧೬ ಸೆಕೆಂಡ್‌ಗಳಲ್ಲಿ ಕ್ರಮಿಸಿ ೨೫ ವರ್ಷಗಳ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸ್ಥಾಪಿಸಿದರು.
ಅಲ್ಲದೇ ನೇರವಾಗಿ ದಕ್ಷಿಣ ಭಾರತ ಮಟ್ಟಕ್ಕೆ ಹಾಗೂ ಪಂಜಾಬ್‌ನ ಪಟಿಯಾಲದಲ್ಲಿ ನಡೆಯುವ ನ್ಯಾಷನಲ್ ಯೂತ್ ಗೇಮ್ಸ್ ಕ್ರೀಡಾಕೂಟಕ್ಕೆ ನೇರ ಆಯ್ಕೆಯಾದ ಅವರನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಅದರೊಂದಿಗೆ ಅವರಿಗೆ ಸುಮಾರು ಅಂದಾಜು ಹತ್ತು ಸಾವಿರ ರೂ ಮೌಲ್ಯದ ರನ್ನಿಂಗ್ ಶೂ ಖರೀದಿಸಲು ಸಹಾಯಹಸ್ತನೀಡಲಾಯಿತು.
ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸುಧೀರ್ ದೇವಾ, ಗೌರವಾಧ್ಯಕ್ಷ ಶಿವಪ್ರಸಾದ್ ದೊಡ್ಡಿಹಿತ್ಲು, ಪೋಷಕರಾದ ಸುರೇಶ ಚಾಮಡ್ಕ ಮತ್ತು ಅನಿತಾ ಉಪಸ್ಥಿತರಿದ್ದರು.
ಸಮಿತಿಯ ಸದಸ್ಯ ಹರ್ಷಿತ್ ಜಿ ಜೆ. ಸ್ವಾಗತಿಸಿ, ಕಾರ್ಯದರ್ಶಿ ಜಯಪ್ರಸಾದ್ ಸಂಕೇಶ ವಂದಿಸಿ, ನಿರೂಪಿಸಿದರು.