ಸಂಜೆವಾಣಿ ವಾರ್ತೆ
ಹನೂರು.ಆ.5:- ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ವರ್ಷಾಚರಣೆಯ ಅಂಗವಾಗಿ ಇಂದು ಆರ್ ಎಸ್ ಎಸ್ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಉತ್ಸವಕಾರ್ಯಕ್ರಮ ದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣಸ್ವಾಮಿ ಜೀ ಅವರು ಮಾತನಾಡಿ ವಿಜಯದಶಮಿ ದಿನದಂದು ಸ್ಥಾಪನೆಯಾದ ಆರ್ ಎಸ್ ಎಸ್ ಸಂಘಟನೆ ಇಂದಿಗೆ ನೂರು ವರ್ಷಗಳನ್ನು ಪೂರೈಸಿದೆ ಎಂದು ತಿಳಿಸಿದರು.
ಜಿಲ್ಲಾ ಸಹ ಕಾರ್ಯವಾಹ ಶಿವಕುಮಾರ್, ಮಂಡಲ ಅಧ್ಯಕ್ಷ ವೃಷಭೇಂದ್ರ ಸ್ವಾಮಿ ಚಂಗವಾಡಿ ರಾಜು, ಸಂಘದ ಕಾರ್ಯಕರ್ತರುಗಳಾದ ಮುರುಗೇಶ್ ಜಗನ್ನಾಥ ನಾಯ್ಡು ಬಸವರಾಜು ಕೃಷ್ಣೇಗೌಡ ರಂಗಸ್ವಾಮಿ ನಾಯ್ಡು ಮಾತೃಭೂಮಿ ಮೂರ್ತಿ ಶಿವಸ್ವಾಮಿ ಜಡೇಸ್ವಾಮಿ ಶ್ರೀಕಾಂತ್ ರಾಧಾಕೃಷ್ಣ ಅರವಿಂದ್ ರಾಚಪ್ಪಾಜಿ ಶ್ರೀನಿವಾಸ್ ಆಚಾರ್ ಸೇರಿದಂತೆ ಹಲವಾರು ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.




























