
ಸಂಜೆವಾಣಿ ನ್ಯೂಸ್
ಮೈಸೂರು: ನ.02:- ಮೈಸೂರಿನ ಮಹಾರಾಜ ಮೈದಾನದಲ್ಲಿ ಜಿತೋ ಮಹಿಳಾ ಘಟಕದಿಂದ ಆಯೋಜಿಸೊರುವ ಎರಡು ದಿನಗಳ ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶಕ್ಕೆ ಬಾಲಿವುಡ್ ನಟ ಸೋನು ಸೂದ್, ನಟ ಡಾಲಿ ಧನಂಜಯ್, ನಟಿ ಸಪ್ತಮಿ ಗೌಡ ಚಾಲನೆ ನೀಡಿದರು.
ನಂತರ ನಟ ಸೋನಿ ಸೂದ್ ಕೋವೀಡ್ ಸಂದರ್ಭದಲ್ಲಿ ಮಾಡಿದ ಸೇವೆ ಹಾಗೂ ಅವರ ಸಮಾಜ ಸೇವೆ ಬಗ್ಗೆ ವಿಶೇಷ ಗೋಷ್ಠಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸೋನು ಸೂದ್, ಸಮಾಜಕ್ಕೆ ಎನಾದರೂ ಮಾಡಬೇಕಾದರೆ ರಸ್ತೆಯಲ್ಲಿ ಹೇಗೆ ಸ್ಪೀಡ್ ಬ್ರೇಕರ್ ಬರುತ್ತದೆ ಹಾಗೇ ಸಾಕಷ್ಟು ಸವಾಲು ಗಳು ಎದುರಾಗುತ್ತದೆ ಅವುಗಳನ್ನು ನಾವು ಎದುರಿಸಬೇಲು ಆಗ ಮಾತ್ರ ಸಮಾಜಕ್ಕೆ ನಾವು ಏನಾದರೂ ಕೊಡಗುಗೆ ನೀಡಬಹುದು ಎಂದರು.
ಜಿತೋ ಕಾರ್ಯಕ್ರಮಗಳಿಗೆ ನಾನು ಸಾಕಷ್ಟು ಭಾರಿ ಭಾಗವಹಿಸಿದ್ದೇನೆ. ಪ್ರತಿ ಬಾರಿಯೂ ಅವರಿಂದ ಕಲಿತುಕೊಂಡಿದ್ದೇನೆ. ನಾವು ಸರ್ಕಾರಗಳು ಕೆಲಸಗಳು ಮಾಡಿಲ್ಲ ಎಂದು ದೂಷಿಸುತ್ತೇವೆ. ಅದರೆ ಜಿತೋ ಜನಪ್ರತಿನಿಧಿಯಂತೆ ಸಮಾಜ ಸೇವೆ ಮಾಡುತ್ತಿದ್ದಾರೆ. ಮತ್ತಷ್ಟು ಉತ್ತಮ ಕೆಲಸ ಮಾಡಿಲಿ ಎಂದು ಹಾರೈಸಿದರು.
ಮಹಿಳಾ ಉದ್ಯೋಗಿಗಳಿಗೆ ಗಂಡಸರಿಗಿಂತ ಹೆಚ್ಚು ಕ್ರಿಯಾಶೀಲತೆ ಇದ್ದು, ಎಲ್ಲರಿಗೂ ಸ್ಪೂರ್ತಿದಾಯಕರಾಗಿದ್ದಾರೆ. ಅವರೇ ಸಮಾಜದ ನಿಜವಾದ ಹೀರೋಗಳು ಎಂದು ತಿಳಿಸಿದರು.
ಸಮಾವೇಶದ ಆವರಣದಲ್ಲಿ ವಸ್ತ್ರ, ಆಭರಣ, ಗೃಹೋಪಯೋಗಿ ವಸ್ತು, ಚಿನ್ನಾಭರಣ, ಮಕ್ಕಳ ಆಟಿಕೆ, ಸ್ಟೇಷನರಿ ವಸ್ತುಗಳು, ತಿಂಡಿ-ತಿನಿಸು ಸೇರಿದಂತೆ 150 ಕ್ಕೂ ಹೆಚ್ಚು ವಿವಿಧ ಮಳಿಗೆಗಳು ಎಲ್ಲರನ್ನು ಆಕರ್ಷಿಸಿತು.
ಕಾರ್ಯಕ್ರಮದಲ್ಲಿ ಜಿತೋ ಮೈಸೂರು ಮಹಿಳಾ ವಿಭಾಗದ ಅಧ್ಯಕ್ಷೆ ಮೋನಾ ಭತೇವರ್, ಕಾರ್ಯದರ್ಶಿ ರಜಿನಿ ದಗಲಿಯ, ಚಿಟೋ ಕೆಜಿಜಿ ವಲಯದ ಅಧ್ಯಕ್ಷ ಪ್ರವೀಣ್ ಬ್ರಿಘಿ, ಕಾರ್ಯದರ್ಶಿ ದಿಲೀಪ್ ಜೈನ್, ಸಂಚಾಲಕಿ ಪಿಂಕಿ ಜೈನ್, ಜಿತೋ ಮೈಸೂರು ಘಟಕದ ಅಧ್ಯಕ್ಷ ವಿನೋದ್ ಬಾಳ್ತಿವಾಳ್, ಕಾರ್ಯದರ್ಶಿ ಗೌತಮ್ ನಲೇಚಾ, ಜಿತೋ ಮೈಸೂರು ಯುವ ವಿಭಾಗದ ಕಾರ್ಯದರ್ಶಿ ಸಿದ್ಧರಾಜ್ ಜುಗಾ ಪುಣೆ, ಇತರರು ಉಪಸ್ಥಿತರಿದ್ದರು.


























