ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

ಸಂಜೆವಾಣಿ ವಾರ್ತೆ
ಹನೂರು ನ 15 :-
ಪಟ್ಟಣದ ಶ್ರೀ ಜಿ.ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ “ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ” ಯನ್ನು ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ವಕೀಲರಾದ ಶ್ರೀ ನಾಗರಾಜು ರವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ಪ್ರತಿ ಭಾರತೀಯರು ಈ ದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು


ಬಾಲ್ಯವಿವಾಹ ನಿಷೇಧ ಕಾಯ್ದೆ,ಪರಿಸರ ಸಂರಕ್ಷಣಾ ಕಾಯ್ದೆ ,ಮೋಟಾರ್ ವಾಹನ ಕಾಯ್ದೆ ,ವನ್ಯಜೀವಿ ಸಂರಕ್ಷಣೆ ಕಾಯ್ದೆ ಮತ್ತು ಪೆÇೀಕ್ಸ್ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಸುಧೀರ್ಘ ಮಾಹಿತಿಯನ್ನು ನೀಡಿದರು.
ಬಾಲ್ಯವಿವಾಹ ಅನ್ನೋದು ಕಾನೂನು ಬಾಹಿರವಾದದ್ದು. ಇದನ್ನ ತಡೆಗಟ್ಟಬೇಕಾದರೆ ಅರಿವು ಮುಖ್ಯವಾದದ್ದು ಬಾಲ್ಯವಿವಾಹ ಮಾಡಿದರೆ ಲಗ್ನ ಪ್ರತಿಕೆ ಮಾಡುವರು, ಕಲ್ಯಾಣ ಮಂಟಪದ ಮಾಲೀಕರು, ಬಾಲಕಿಯ ತಂದೆ, ತಾಯಿಗಳು ಹಾಗೂ ಹುಡುಗ ಮತ್ತು ಆತನ ತಂದೆ ತಾಯಿಗಳು ಹಾಗೂ ಪೆÇ್ರೀತ್ಸಾಹ ಮಾಡಿದವರ ಮೇಲೆ ಪ್ರಕರಣ ದಾಖಲಾಗುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ಇನ್ನೂ ಜೀವಂತವಾಗಿದೆ ಒಬ್ಬ ಬಾಲಕಿ ತನ್ನ ಸ್ನೇಹಿತೆಗೆ ಬಾಲ್ಯವಿವಾಹ ಮಾಡುತ್ತಿರುವುದರ ಬಗ್ಗೆ ತಿಳಿದಾಗ ನೀವು ತಕ್ಷಣ 1098 ಕರೆ ಮಾಡಿ ಯಾವುದೇ ಕಾರಣಕ್ಕೂ ನಿಮ್ಮ ಹೆಸರನ್ನು ಹೇಳುವುದಿಲ್ಲ ಒಬ್ಬ ಬಾಲಕಿ ಒಂದು ಬಾಲ್ಯವಿವಾಹವನ್ನು ತಡೆಯಬಹುದು.


ಹಾಗೂ ಭಾರತದಲ್ಲಿ ಮಕ್ಕಳ ಮೇಲೆ ಅನೇಕ ಲೈಂಗಿಕ ದೌರ್ಜನ್ಯಗಳು ಪ್ರತಿದಿನ ನಡೆಯುತ್ತಿದೆ ಇದನ್ನ ತಡೆಗಟ್ಟಲು ಪೆÇೀಕ್ಸ್ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಪೆÇೀಕ್ಸೋ ಕಾಯ್ದೆಯ ಉದ್ದೇಶಗಳು, ಮಹತ್ವ ಹಾಗೂ ಕೆಲವು ಪ್ರಕರಣಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಾ ವಿದ್ಯಾರ್ಥಿಗಳಿಗೆ ತಿಳುವಳಿಕೆಯನ್ನು ನೀಡಿದರು.
ಪ್ರಾಂಶುಪಾಲರಾದ ರಾಜೇಶ್ ಮಾತನಾಡಿ ಬಾಲ್ಯವಿವಾಹದಿಂದ ಆ ಹೆಣ್ಣು ಮಗು ಶಿಕ್ಷಣದಿಂದ ದೂರವಾಗುತ್ತದೆ ಹಾಗೂ ಇನ್ನೂ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಾಳೆ ಚಿಕ್ಕ ವಯಸ್ಸಿಗೆ ಗರ್ಭದರಿಸಿದರೆ ಮಗು ಅಂಗವಿಕಲರಾಗಬಹುದು.


ಮಾನಸಿಕವಾಗಿ ಕುಗ್ಗಬಹುದು ಹಾಗೂ ಇನ್ನೂ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿ ಗುಂಡ್ಲುಪೇಟೆ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಅಲಲ್ಲಿ ಬಾಲ್ಯವಿವಾಹ ನಡೆಯವುದರ ಬಗ್ಗೆ ಮಾಧ್ಯಮವರದಿಗಳಿಂದ ತಿಳಿದುಕೊಂಡಿದ್ದೇವೆ ಇದೂ ಸಂಪೂರ್ಣ ಕಡಿಮೆಯಾಗಬೇಕು. ಪೆÇೀಕ್ಸ್ ಕಾಯ್ದೆ 2012 ರಲ್ಲಿ ಜಾರಿಗೆ ಬಂದಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆ ಈ ಕಾಯ್ದೆಯಡಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಉಪನ್ಯಾಸಕರಾದ ಲಾಜರಸ್, ಶಿವಕುಮಾರ್, ಕುಸುಮ, ನಂಜುಂಡಯ್ಯ, ಹರೀಶ್, ಮಹೇಂದ್ರ, ನಂದಿನಿ, ದೇವಿಕಾ, ಯಶಸ್ವಿನಿ, ಕಲೈವಾಣಿ, ಲಿಂಗರಾಜು, ತೇಜು, ಸಿಬ್ಬಂದಿಗಳಾದ ಪ್ರಭು, ಮೂರ್ತಿ ಹಾಗೂ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.