ರಾಮಾಪುರ ಬ್ಲಾಕ್ ಬಿಜೆಪಿ ಮಂಡಲದಿಂದ ತಿರಂಗಾ ಯಾತ್ರೆ

ಸಂಜೆವಾಣಿ ವಾರ್ತೆ
ಹನೂರು ಮೇ 28 :-
ಪಹಲ್ಗಾಮ್‍ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತೀಯ ಯೋಧರು ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ದಮನಕ್ಕೆ ನಡೆಸಿದ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ರಾಮಾಪುರ ಬ್ಲಾಕ್ ಬಿಜೆಪಿ ಮಹದೇಶ್ವರ ಮಂಡಲ ವತಿಯಿಂದ ತಿರಂಗಾ ಯಾತ್ರೆ ಮೆರವಣಿಗೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದರು.


ಹನೂರು ತಾಲೂಕಿನ ರಾಮಾಪುರ ಜೆ.ಎಸ್.ಎಸ್ ಕಲ್ಯಾಣ ಮಂಟಪದ ಹತ್ತಿರ ಭುವನೇಶ್ವರಿ ತಾಯಿ ಭಾವಚಿತ್ರ ಹೊತ್ತ ವಾಹನ ಜಾಥಾಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಭಾರತೀಯ ಹೆಮ್ಮೆಯ ಯೋಧರಿಗೆ ಜೈಕಾರ ಹಾಕುತ್ತಾ ಮೆರವಣಿಗೆ ಸಾಗಿತು.


ರಾಮಾಪುರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಮೂಲಕ ಸಾಗಿದ ತಿರಂಗಾ ಯಾತ್ರೆ ಮೆರವಣಿಗೆ ಭಾರತ್ ಮಾತಾ ಕೀ ಜೈ. ಯೋಧರಿಗೆ ಜೈಕಾರ ಹಾಕುತ್ತಾ ಮಹದೇಶ್ವರ ಕಲ್ಯಾಣ ಮಂಟಪಕ್ಕೆ ತೆರಳಿದರು. ನಂತರ ನಡೆದ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಮಾದೇಶ್, ಅಂತೋಣಿಯಪ್ಪ, ಮಾಣಿಕ್ಯಂ, ಗಂಗಾಧರ್, ಮಾದೇಶ್ ಇವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ರಾಮಾಪುರ ಬಿಜೆಪಿ ಮಂಡಲ ಅಧ್ಯಕ್ಷ ರಾಜು, ಬಿಜೆಪಿ ಯುವ ಮುಖಂಡ ನಿಶಾಂತ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ರಾಮಾಪುರ ಮಂಡಲದ ಉಪಾಧ್ಯಕ್ಷ ಜಗದೀಶ್, ಪ್ರಧಾನಿ ಕಾರ್ಯದರ್ಶಿ ಶಿವಕುಮಾರ್, ಮುರುಗೇಶ್, ಕೃಷ್ಣಮೂರ್ತಿ, ಹನೂರು ಬಸವರಾಜು, ಕಿಸಾನ್ ಸಂಘದ ಅಧ್ಯಕ್ಷ ರಾಜಣ್ಣ, ಎಸ್.ಸಿ ಘಟಕದ ಅಧ್ಯಕ್ಷ ಮುನೇಶ್, ಗ್ರಾಮ ಪಂ. ಸದಸ್ಯ ರಾಜು, ಅಶ್ವತ್, ಕುರುಬರ ದೊಡ್ಡಿ ಚಾಂದ್ ಪಾಷಾ, ಪೆÇನ್ನಾಚಿ ಜಯಪ್ರಕಾಶ್, ಸೇರಿದಂತೆ ಮುಖಂಡರುಗಳು ಮಹಿಳೆಯರು ಭಾಗವಹಿಸಿದ್ದರು.