ರಾಮನಗರ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ  ಭೂಮಿ ಪೂಜೆ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.18
ಪಟ್ಟಣದ ರಾಮನಗರ ಗುರುಭವನ ಪಕ್ಕದ  ಅಂಜನೇಯಸ್ವಾಮಿ ದೇವಸ್ಥಾನವನ್ನು ಸುಂದರೀಕರಣಗೊಳಿಸಲು ನವೀಕರಣಕ್ಕೆ ಶಾಸಕ ಕೆ ನೇಮಿರಾಜ್ ನಾಯ್ಕ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಶಾಸಕರು ಮಾತನಾಡಿ ಇಲ್ಲಿಗೆ ಬರುವಂತಹ ಭಕ್ತರಿಗೆ ಶುದ್ಧ ಕುಡಿಯುವ ನೀರು, ನೆರಳು, ಬೆಳಕು,  ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಅಂದಾಜು 50 ಲಕ್ಷ ರೂ.ಅನುದಾನದಲ್ಲಿ ದೇವಸ್ಥಾನದ ನವೀಕರಣಗೊಳಿಸಲಾಗುವುದು. ಆ ಈಗಾಗಲೇ ಕುಡಿಯುವ ನೀರಿಗಾಗಿ ಕೊಳವೆಬಾವಿಯನ್ನು ಕೊರೆಸಲಾಗಿದೆ,  ಸಮೃದ್ಧನೀರು ಸಿಕ್ಕಿದೆ ಎಂದರು.
ಗ್ರಾನೈಟ್ ಕಲ್ಲು ಈಗಾಗಲೇ ಬಂದಿದ್ದು ನಾಳೆಯಿಂದ ನೆಲಹಾಸು ಕಾಮಗಾರಿಯನ್ನು ಆರಂಭಿಸಲಾಗುವುದು. ಇದರ ಜೊತೆಯಲ್ಲಿಯೇ ಸುಂದರ ಗೋಪುರ ನಿರ್ಮಿಸುವ ಕೆಲಸ ಕೂಡ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ
ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಚೇಂಬರ ಅಪ್  ಕಾಮರ್ಸ್ ಅಧ್ಯಕ್ಷ ಮೃತ್ಯುಂಜಯ, ಮುಖಂಡ ರಾದ ಕನ್ನಿಹಳ್ಳಿ ಚಂದ್ರಶೇಖರ, ಬಡಿಗೇರ ಸಿದ್ದರಾಜ್, , ಚಿದ್ರಿ ಸತೀಶ್, ಎಲಿಗಾರ ಮಂಜುನಾಥ, ಬುಲೇಟ್ ಬಸವರಾಜ, ಪವಾಡಿ ಮಂಜುನಾಥ, ದೇವಸ್ಥಾನ ಸಮಿತಿಯ ಅನ್ವೇರಿಶ್ರೀನಿವಾಸ, ಶಾಸಕರ ಆಪ್ತ ಸಹಾಯಕ ಬ್ಯಾಟಿ ನಾಗರಾಜ್,ಚಿತ್ತಾವಡಿಗಿ ಪ್ರಕಾಶ್,ಇತರರಿದ್ದರು.