
ಸಂಜೆವಾಣಿ ನ್ಯೂಸ್
ಮೈಸೂರು.ನ.18:– ಶಿಕ್ಷಣ, ಸೇವೆ, ಜ್ಞಾನವನ್ನು ಜಾತ್ಯಾತೀತವಾಗಿ ನೀಡುತ್ತಾ ಬಂದಿರುವ ಶ್ರೀ ರಾಮಕೃಷ್ಣ ಆಶ್ರಮ ಶತಮಾನದ ಸಂಭ್ರಮದಲ್ಲಿದ್ದು, ನ.21ರಿಂದ 24ರವರೆಗೆ ಅನೇಕ ಸೇವಾ, ಧಾರ್ಮಿಕ, ವಿಚಾರ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಈ ಕುರಿತು ಆಶ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ನೂರರ ಘಟ್ಟವನ್ನು ಸ್ಮರಣೀಯವಾಗಿರಿಸಲು ನಾಲ್ಕು ದಿನಗಳ ಕಾಲ ನಾನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನ.21ರ ಬೆಳಿಗ್ಗೆ 6.30ಕ್ಕೆ ಸ್ವಾಮಿ ಅಮರೇಶ್ವರಾನಂದಜಿ ನೇತೃತ್ವದಲ್ಲಿ ಪೂಜೆ, ಸ್ವಾಮಿ ಆತ್ಮಜ್ಞಾನಂದಜಿ ಮತ್ತು ಸ್ವಾಮಿ ಜ್ಞಾನಯೋಗನಂದಜಿ ನೃತೃತ್ವದಲ್ಲಿ ಭಜನೆ ಹೋಮ ಆಶ್ರಯಮದ ದೇವಾಲಯದಲ್ಲಿ ನಡೆಯಲಿದೆ. ಬೆ.10.15ಕ್ಕೆ ಪೌರಕಾರ್ಮಿಕರ ಸನ್ಮಾನಿಸುವ ನಾರಾಯಣ ಸೇವೆ ಕಾರ್ಯಕ್ರಮದಲ್ಲಿ ಪೇಜಾವರದ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನಿಧ್ಯವಹಿಸುವರು. ಭಾಷಣಕಾರರಾಗಿ ಕಡಪ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಅನುಪಮಾನಂದಜಿ, ಹಲಸೂರು ರಾಮಕೃಷ್ಣಮಠದ ಅಧ್ಯಕ್ಷ ಬೋಧಸ್ವರೂಪಾನಂದಜಿ, ಶಾಸಕ ಜಿ.ಟಿ.ದೇವೇಗೌಡ, ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಗೌರವಕಾರ್ಯದರ್ಶಿ ಡಾ.ಎಚ್.ಸುದರ್ಶನ್, ವಿಶೇಷ ಆಹ್ವಾನಿತರಾಗಿ ಮಾಜಿ ಎಲ್.ನಾಗೇಂದ್ರ, ಕನ್ನಡ ಪರಿಚಾರಕ ಅರವಿಂದ ಶರ್ಮ ಇರುವರು ಎಂದರು.
ನ.21ರ ಬೆ.11.50ಕ್ಕೆ ಶತಮಾನೋತ್ಸವ ಸ್ಮರಣ ಸಂಚಿಕೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮುಖ್ಯ ಅತಿಥಿಯಾಗಿ, ಶ್ರೀ ರಾಮಕೃಷ್ಣ ಆಶ್ರಮದ ಮಾಜಿ ಅಧ್ಯಕ್ಷ ಆತ್ಮವಿದಾನಂದಜಿ, ಚೆನ್ನೈನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸತ್ಯಜ್ಞಾನಾನಂದಜಿ, ವೆಂಕಟಾಪುರ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಅಮೂರ್ತಾನಂದಜಿ ಸಾನಿಧ್ಯವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಶಾಸಕ ಎಸ್.ಟಿ.ಸೋಮಶೇಖರ್, ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಎಚ್.ಸಿ.ಕಿಶೋರ್ ಚಂದ್ರ ಇರುವರು. ಮದ್ಯಾಹ್ನ 3.30ಕ್ಕೆ ನಡೆಯುವ ಶತಮಾನೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಬೇಲೂರು ಮಠದ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅಧ್ಯಕ್ಷ ಗೌತಮಾನಂದಜಿ ಮಹಾರಾಜ್ ಸಾನಿಧ್ಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತಿಥಿಗಳಾಗಿ ಊಟಿ ರಾಮಕೃಷ್ಣಮಠದ ಅಧ್ಯಕ್ಷ ರಾಘವೇಶಾನಂದಜಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಭಾರತೀಯ ಅಂಚೆ ಸೇವೆಯ ಕರ್ನಾಟಕ ಅಂಚೆ ವೃತ್ತದ ಮುಖ್ಯ ಅಂಚೆ ಅಧೀಕ್ಷಕ ಕೆ.ಪ್ರಾಶ್ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಆರ್.ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ನವದೆಹಲಿ ದೂರಸಂಪರ್ಕ ಇಲಾಖೆ ನಿವೃತ್ತ ಉಪನಿರ್ದೇಶಕ ಎನ್.ಎಸ್.ಚಕ್ರವರ್ತಿ, ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಎಚ್.ಸಿ.ಕಿಶೋರ್ ಚಂದ್ರ, ಮೈಸೂರು ರಾಮಕೃಷ್ಣ ಆಶ್ರಮದ ನಿವೃತ್ತ ಪ್ರಾಂಶುಪಾಲ ಕೀರ್ತಿಕುಮಾರ್, ನಿವೃತ್ತ ತಹಸೀಲ್ದಾರ್ ಜೆ.ಕೆ.ಬಸಪ್ಪ, ಅಭಿದಾನ್ ಪುಣ್ಯ ಟ್ರಸ್ಟ್ ಅಧ್ಯಕ್ಷ ಸಾಯಿ ಗಿರಿಧರನ್ ಅವರನ್ನು ಸನ್ಮಾನಿಸಲಾಗುವುದು. ಸಂ.6.30ಕ್ಕೆ ಬೇಲೂರು ರಾಮಕೃಷ್ಣ ಮಠದ ಸಹಾಯಕ ಪ್ರಧಾನ ಕಾರ್ಯದರ್ಶಿ ಬಲಭದ್ರಾನಂದಜಿ ಸಾನಿಧ್ಯದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ, ಮಾಜಿ ಸಂಸದ ಪ್ರತಾಪಸಿಂಹ ಭಾಗವಹಿಸುವರು. ಆತ್ಮಶ್ರದ್ಧಾನಂದಜಿ, ಶಾಂತಿವ್ರತಾನಂದಜಿ “ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ”, ಸರ್ವಸ್ಥಾನಂದಜಿ, ಬೋಧಮಯಾನಂದಜಿ “ಭಾರತದ ಪುನರುತ್ಥಾನ ಮತ್ತು ಸ್ವಾಮಿ ವಿವೇಕಾನಂದ” ಮತ್ತು ವೀರೇಶಾನಂದಜಿ, ಡಾ.ಆರ್.ಬಾಲಸುಬ್ರಹ್ಮಣಿಯಮ್ “ಮೈಸೂರಿನಲ್ಲಿ ರಾಮಕೃಷ್ಣ ಭಾವಧಾರೆ” ವಿಷಯ ಕುರಿತು ವಿಶೇಷ ಭಾಷಣ ಮಾಡುವರು ಎಂದರು.
ನ.22ಕ್ಕೆ ಬೆ.6.15ಕ್ಕೆ ತದ್ಯಕ್ತಾನಂದಜಿ, ಗಿರಿಜಾತ್ಮಾನಂದಜಿಯವರ ಉಷಾಕಿರ್ತನೆ, ಬೆ.8.45ಕ್ಕೆ ಮುಕ್ತಿನಾಥಾನಂದಜಿ, ಲೋಕೋತ್ತರಾನಂದಜಿ ಸಾನಿದ್ಯದಲ್ಲಿ ಅತಿಥಿಗಳಾಗಿ ಶಾಸಕರಾದ ಕೆ.ಹರೀಶ್‍ಗೌಡ, ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಮೊದಲಾದವರು ವಿವೇಕಾಯಾತ್ರೆ ವೇದಿಕೆಯಲ್ಲಿರುವರು. ಬೆಳಿಗ್ಗೆ 10ಕ್ಕೆ ಸದ್ವಿದ್ಯ ಪಾಠಶಾಲಾ, ವಿವೇಕ ಸ್ಮಾರಕ, ದೇವರಾಜ ಅರಸು ರಸ್ತೆ, ದಿವಾನ್ಸ್ ರಸ್ತೆ, ಶಿವಾರಂಪೇಟೆ, ಸಂತೆಪೇಟೆ, ದೇವರಾಜ ಅರಸು ರಸ್ತೆ, ಮರಿಮಲ್ಲಪ್ಪ ಕಾಲೇಜು, ಸದ್ವಿದ್ಯಾ ಕಾಲೇಜಿನಲ್ಲಿ ವಿವೇಕಾನಂದ ಯಾತ್ರೆ ಅಂತ್ಯವಾಗಲಿದೆ ಎಂದರು.
ಮ.2.45ಕ್ಕೆ ಲಖ್ನೌ ರಾಮಕೃಷ್ಣ ಮಠದ ಮುಕ್ತಿನಾಥಾನಂದಜಿ ಸಾನಿದ್ಯದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅತಿಥಿಯಾಗಿ, ಸತ್ಯೇಶಾನಂದಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಗೌರವಾನ್ವಿತ ಅತಿಥಿಗಳಾಗಿದ್ದಾರೆ. ಭಾಷಣಕಾರರಾಗಿ ಜಿತಕಾಮಾನಂದಜಿ ಮುಕ್ತಿದಾನಂದಜಿ, ಡಾ.ವೈ.ಎನ್.ಶ್ರೀಧರ್, ಎಸ್.ಬಿ.ನಿತ್ಯಾನಂದ ಮೊದಲಾದವರು ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸುವರು. ಸಂ.6.30ರಿಂದ ನಡೆಯುವ ಹೊನಲು ಬೆಳಕಿನ ಪ್ರದರ್ಶನ ಮತ್ತು ರಾಮಕೃಷ್ಣ ವಿದ್ಯಾಶಾಲೆಯ ಶೈಕ್ಷಣಿಕ ಸೇವೆ ಅವಲೋಕನ ಮತ್ತು ರಾಮಕೃಷ್ಣ-ವಿವೇಕಾನಂದ ಭಾವಧಾರೆಗೆ ಮೈಸೂರು ರಾಜಮನೆತನದ ಕೊಡುಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ನೀತಿ ಆಯೋಗದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಆರ್.ಸುಬ್ರಹ್ಮಣ್ಯಂ, ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯ ಆರ್ಥಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ನ.23ರ ಬೆ.6.15ಕ್ಕೆ ರಘುರಾಮನಂದಜಿ, ಸರ್ವದರ್ಶನಾನಂದಜಿ ಉಷಾಕೀರ್ತನೆ, ಬೆ.9ಕ್ಕೆ ಸಂತ ಸಮಾಗಮ ಕಾರ್ಯಕ್ರಮದಲ್ಲಿ ಗೌತಮಾನಂದಜಿ ಮಹಾರಾಜ್, ಗುರುಶರಣಾನಂದಜಿ ಮಹಾರಾಜ್ ಸಾನಿಧ್ಯದಲ್ಲಿ “ಮಾನವನ ದೈವೀಕರಣವೇ ಧರ್ಮದ ಉದ್ದೇಶ ಮತ್ತು ಶಕ್ತಿ” ಕುರಿತು ಶ್ರೀ ದತ್ತವಿಜಯಾನಂದ ತೀರ್ಥ, ನಿಶ್ಚಲಾನಂದ ಸ್ವಾಮೀಜಿ, ಅಚ್ಯುತೇಶನಂದಜಿ ಮತ್ತು “ಸನಾತನ ಧರ್ಮದ ಆಧ್ಯಾತ್ಮಿಕ ಶಕ್ತಿಯ ಆವಿರ್ಭಾವವಾಗಿ ಶ್ರೀ ರಾಮಕೃಷ್ಣರು” ವಿಷಯ ಕುರಿತು ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ವೀರೇಶಾನಂದ ಸರಸ್ವತಿ, ಸರ್ವಲೋಕಾನಂದಜಿ, ಶ್ರೀಕಾಂತಾನಂದಜಿ ವಿಶೇಷ ಉಪನ್ಯಾಸ ನೀಡುವರು. ಮ.3ಕ್ಕೆ ಶ್ರೀ ರಾಮಕೃಷ್ಣ ಆಶ್ರಮದ ಕನ್ನಡ ಪ್ರಕಟಣೆಗಳು, “ವಿವೇಕ ಪ್ರಭ” ಮಾಸಪತ್ರಿಕೆ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ನಿತ್ಯಾಸ್ಥಾನಂದಜಿ ಸಾನಿಧ್ಯದೊಂದಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮುಖ್ಯ ಅತಿಥಿಗಳಾಗಿರುವರು. ಆತ್ಮಜ್ಞಾನಂದಜಿ, ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಲೀಲಾ ಪ್ರಕಾಶ್, ಡಾ.ಚಿದಾನಂದಗೌಡ, ಹಂಪ ನಾಗರಾಜಯ್ಯ ಅತಿಥಿಯಾಗಿದ್ದು, ಲಕ್ಷ್ಮಿನರಸಿಂಹ ಶಾಸ್ತ್ರಿ, ಸಿ.ಎಸ್.ಮಂಗಳಮ್ಮ, ಡಾ.ಕೆ.ಎಲ್.ಪ್ರಸನ್ನಾಕ್ಷಿ, ಡಾ.ಕೆ.ಅನಂತರಾಮು, ಡಾ.ಎಚ್.ಎನ್.ಮುರುಳೀಧರ್, ಪಾರ್ಥಸಾರಥಿ ಅವರಿಗೆ ಗೌರವ ಸಮರ್ಪಣೆ ಮಾಡುವರು. ಸಂ.6ರಿಂದ ಶ್ರೀ ರಾಮಕೃಷ್ಣ ಆಶ್ರಮ, ಶ್ರೀ ಶಾರದದೇವಿ ಮತ್ತು ಸ್ವಾಮಿ ವಿವೇಕಾನಂದರನ್ನು ಕುರಿತ ವಿಚಾರಸಂಕಿರಣವನ್ನು ಆಯೋಜಿಸಿದ್ದ ಅನೇಕರು ಭಾಷಣ ಮಂಡಿಸುವರು ಎಂದರು.
ನ.24ರ ಬೆ.9ಕ್ಕೆ ಸಮರ್ಪಣ ಸಮಾವೇಶದಲ್ಲಿ ಗೌತಮಾನಂದಜಿ ಮಹಾರಾಜ್, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೊದಲಾದವರು ಭಾಗವಹಿಸುವರು. ಸಂ.5.30ಕ್ಕೆ ನಡೆಯುವ ವಿವೇಕ ಗಾಥಾ ಕಾರ್ಯಕ್ರಮದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮಿ ಸಾನಿದ್ಯದೊಂದಿಗೆ ಮುಖ್ಯ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮೊದಲಾದವರು ಭಾಗವಹಿಸುವರು. ಈ ಕಾರ್ಯಕ್ರಮಕ್ಕೆ ದೇಶ ವಿದೇಶದಿಂದ ಅನೇಕ ಸ್ವಾಮೀಜಿ, ಚಿಂತಕರು, ಡೆಲಿಗೆಟ್ಸ್‍ಗಳು ಸೇರಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಎಲ್ಲಾ ದಿನಗಳು ಉಚಿತ ದಾಸೋಹ ಇರಲಿದೆ ಎಂದರು. ಶ್ರೀರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್, ರಾಮಕೃಷ್ಣ ಅಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಸ್ವಾಮಿ ಮಹಾಮೇದಾನಂದಜೀ ಮಹಾರಾಜ್, ನಿವೃತ್ತ ಪ್ರಾಂಶುಪಾಲ ಎಸ್.ಬಾಲಾಜಿ, ಪ್ರಾಂಶುಪಾಲ ಟಿ.ಕೆ. ಚಂದ್ರಶೇಖರ್, ಆಡಳಿತಗಾರ ಪೆÇ್ರ.ಚಂದ್ರಶೇಖರ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅರುಣ್‍ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.




























