
ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.17: ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರೆ ವರ್ಷ ಆಗಿದೆ. ಅವರ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು . ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು. ನಗರದಲ್ಲಿಂದು ಆಯೋಜಿಸಿರುವ ಬಿಜೆಪಿ ಪ್ರತಿಭಟನಾ ಱ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ನ ಕೊನೆ ಸಿಎಂ ಸಿದ್ದರಾಮಯ್ಯ ಆಗುತ್ತಾರೆ. ನಾನು ಶರಣರ ನಾಡಿನಿಂದ ಬಂದಿದ್ದೇನೆ. ನಾವು ಏನ್ ಹೇಳ್ತಿವೋ ಅದೆಲ್ಲಾ ಆಗಿದೆ. ಬಳ್ಳಾರಿ ನೆಲದಲ್ಲಿ ಗುಂಡಿನ ದಾಳಿ ಮಾಡಿಸಿ ಅವರ ಶಾಸಕ ಅಮಾಯಕನನ್ನು ಕೊಂದಿದ್ದಾನೆ. ಕೂಡಲೇ ಭರತ್ ರೆಡ್ಡಿಯನ್ನ ಬಂಧಿಸಬೇಕಿತ್ತು. ಆದರೆ, ಅವರ ಮೇಲೆ ಕೇಸ್ ಹಾಕಿಲ್ಲ. ನಾವು ಪ್ರತಿಭಟನೆ ಮಾಡಲು 50 ಲಕ್ಷ ಡಿಪೋಸಿಟ್ ಇಡಬೇಕು ಅಂತಾರೆ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬ್ರಿಟಿಷರೂ ಅಡ್ಡಿ ಪಡಿಸಿಲ್ಲ. ಅವರು ದುರಾಡಳಿತ ಮಾಡಿದಾಗ ಜನ ಬ್ರಿಟಿಷರನ್ನು ಓಡಿಸಿದರು. ಇದೀಗ ಸಿದ್ದರಾಮಯ್ಯ ಅವರನ್ನ ಓಡಿಸಲು ಕಾಲ ಹತ್ತಿರ ಬಂದಿದೆ ಎಂದರು.




























