Home ಜಿಲ್ಲೆ ರಾಜ್ಯ ಲೆಕ್ಕಪರಿಶೋಧಕರ ಸಂಸ್ಥೆ ಇಸಿ ಸದಸ್ಯರಾಗಿ ಸಿ.ಎರ್ರಿಸ್ವಾಮಿ 5 ಬಾರಿಗೆ ಅವಿರೋಧ ಆಯ್ಕೆ

ರಾಜ್ಯ ಲೆಕ್ಕಪರಿಶೋಧಕರ ಸಂಸ್ಥೆ ಇಸಿ ಸದಸ್ಯರಾಗಿ ಸಿ.ಎರ್ರಿಸ್ವಾಮಿ 5 ಬಾರಿಗೆ ಅವಿರೋಧ ಆಯ್ಕೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಆ.21: ನಗರದಲ್ಲಿ ಕಳೆದ 18 ವರ್ಷಗಳಿಂದ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿರುವ. ಚಿಲಕರಾಯ ಎರ್ರಿಸ್ವಾಮಿ ಇವರು ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಟೆಂಟ್ ಅಸೋಶಿಯೇಷನ್ ಸಂಸ್ಥೆಗೆ ಕಾರ್ಯಕಾರಿ ಮಂಡಳಿ ಸದಸ್ಯ ಸ್ಥಾನಕ್ಕೆ  ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ  ಸತತ 5ನೇ ಬಾರಿಗೆ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಳ್ಳಾರಿ ಶಾಖೆಯ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಇವರು ರಾಜ್ಯ  ಮಟ್ಟದ ಈ ಸಂಸ್ಥೆಯಲ್ಲಿ ಈ ಹಿಂದಿನ ನಾಲ್ಕು ವರ್ಷಗಳಿಂದ “ಸಹಕಾರ ಸಮಿತಿಯ” ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಗೆ ಸಂಬಂಧಪಟ್ಟ ಲೆಕ್ಕಪರಿಶೋಧನಾ ವರದಿ ಪರಿಷ್ಕರಣಾ ಸಮಿತಿಗೆ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.