
ಸಂಜೆವಾಣಿ ವಾರ್ತೆ
ನಂಜನಗೂಡು.ಅ.24:- ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆರ್. ಧ್ರುವನಾರಾಯಣ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿರುವ `ಆರ್. ಧ್ರುವನಾರಾಯಣ್ ಮೆಮೋರಿಯಲ್ ಕಪ್ ಸೀಸನ್ 3′ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಕ್ರೀಡೆಯನ್ನು ಶಾಸಕ ದರ್ಶನ್ ಗೋಲು ಹೊಡೆಯುವ ಮೂಲಕ ಚಾಲನೆ ನೀಡಿದರು
ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಪಾಲ್ಗೊಂಡು, ಪೂಜ್ಯ ತಂದೆಯವರಾದ ಆರ್. ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಚಾಲನೆ ನೀಡಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ನಮ್ಮ ತಂದೆಯವರು ಫುಟ್ಬಾಲ್ ಕ್ರೀಡೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಕ್ರೀಡಾಪಟುವಾಗಿದ್ದರು. ನಮ್ಮ ಕುಟುಂಬವೇ ಕ್ರೀಡೆಗೆ ಸದಾ ಪೆÇ್ರೀತ್ಸಾಹ ನೀಡುತ್ತಾ ಬಂದಿದ್ದು, ನಾನೂ ಸಹ ಟೆನಿಸ್ ಕ್ರೀಡಾಪಟುವಾಗಿ ಆಟವನ್ನು ಆಡಿದ್ದೇನೆ. ಫುಟ್ಬಾಲ್ ಕ್ರೀಡೆಯ ಬಗ್ಗೆಯೂ ನನಗೆ ವಿಶೇಷ ಆಸಕ್ತಿ ಇದೆ. ತಂದೆಯವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿರುವುದು ನನಗೆ ಹೆಮ್ಮೆಯಾಗಿದೆ.
ಇಂತಹ ಕ್ರೀಡಾಕೂಟಗಳು ಕ್ಷೇತ್ರದಲ್ಲಿ ಹೆಚ್ಚೆಚ್ಚು ಆಗಬೇಕು ಇದರಿಂದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ತಂಡದ ಮನೋಭಾವವನ್ನು ಬೆಳೆಸಲು ಸಹಕಾರಿಯಾಗುತ್ತದೆ
ಈಗ ನಡೆಯುತ್ತಿರುವ ಫುಟ್ಬಾಲ್ ಕಾರ್ಯಕ್ರಮ ಮೂರನೇ ವರ್ಷದ ಕ್ರೀಡಾಕೂಟವಾಗಿದೆ ಮೂರು ವರ್ಷ ಕೂಡ ವಿಭಿನ್ನವಾಗಿ ಸುಂದರವಾಗಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಪ್ರತಿವರ್ಷವು ಒಂದು ವರ್ಷಕ್ಕಿಂತ ಇನ್ನೊಂದು ವರ್ಷ ಎಲ್ಲರ ಸಹಕಾರದಿಂದ ಅಚ್ಚುಕಟ್ಟಾಗಿ ಕ್ರೀಡಾಕೂಟ ನಡೆಯುತ್ತಿದೆ ಕ್ರೀಡೆ ಎಂದರೆ ಸಾಕು ನಂಜನಗೂಡಿಗೆ ಒಂದು ಇತಿಹಾಸವಿದೆ ಎಲ್ಲಾ ಮುಖಂಡರುಗಳು ಕ್ರೀಡಾಪಟುಗಳು ಸಹಕಾರ ನೀಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿ ಎಲ್ಲರ ಸಹಕಾರ ಪಡೆದು ಕ್ರೀಡೆಗಳನ್ನು ನಡೆಸುತ್ತೇವೆ ಎಂದರು
ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ತಹಸೀಲ್ದಾರ್ ಸ್ಮಿತಾ ರಾಮು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ಮಾರುತಿ ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್ ಪದ್ಮನಾಬ್ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಸವೇಗೌಡ ಖಗಿ ಯೂನಿವರ್ಸಿಟಿ ಮಹೇಂದ್ರ ಸಂಕಲ್ಪ್ ಗ್ರೂಪ್ಸ್ ವಿಷ್ಣು ಮಾಜಿ ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ದೊರೆಸ್ವಾಮಿ ನಾಯಕ ರಿಯನ ಬಾನು ಶ್ರೀಧರ್ ಎಸ್. ಪಿ ಮಹೇಶ್ ಗಂಗಾಧರ್ ಸೋಮು , ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಕ್ರೀಡಾಪಟುಗಳು ಹಾಜರಿದ್ದರು.
























