
ಮಂಗಳೂರು- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ನವೆಂಬರ್ ೭ ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.
ನವೆಂಬರ್ ೭ ರಂದು ಬೆಳಿಗ್ಗೆ ೯:೫೫- ಮಂಗಳೂರು ವಿಮಾನ ನಿಲ್ದಾಣ ಆಗಮನ, ೧೦:೩೦ ರಿಂದ ಸಂಜೆ ೬ ರವರೆಗೆ – ವಸತಿ ನಿಲಯ, ಶಾಲೆ, ಅಂಗನವಾಡಿ, ಪೊಲೀಸ್ ಠಾಣೆ ಮತ್ತು ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ.
ನವೆಂಬರ್ ೮ ರಂದು ಆಯೋಗದ ಅಧ್ಯಕ್ಷರು ಮಂಗಳೂರಿನಿಂದ ಹೈದರಾಬಾದಿಗೆ ತೆರಳಲಿದ್ದಾರೆ.



























