Home ಜಿಲ್ಲೆ ರಾಜ್ಯ ಬಜೆಟ್ ಆಸೆಯ ದಲಿತರಿಗೆ ತಲುಪುವಂತೆ ಮಾಡಿ. ದಲಿತ ಹಕ್ಕುಗಳ ಸಮಿತಿಯಿಂದ ಸರ್ಕಾರಕ್ಕೆ ಮನವಿ

ರಾಜ್ಯ ಬಜೆಟ್ ಆಸೆಯ ದಲಿತರಿಗೆ ತಲುಪುವಂತೆ ಮಾಡಿ. ದಲಿತ ಹಕ್ಕುಗಳ ಸಮಿತಿಯಿಂದ ಸರ್ಕಾರಕ್ಕೆ ಮನವಿ

ಸಂಜೆವಾಣಿ ವಾರ್ತೆ

ಹೊಸಪೇಟೆ, ಮಾ6: ಇಂದು ಮಂಡಿಸುವ ರಾಜ್ಯ ಬಜೆಟ್‍ನಲ್ಲಿ ದಲಿತರಿಗೆ ತಲುಪಿಸುವ ಯೋಜನೆಗಳು ಸರಿಯಾಗಿ ಮುಟ್ಟುವಂತೆ ಕ್ರಮ ಜರುಗಿಸುವಂತೆ ದಲಿತ ಹಕ್ಕುಗಳ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದೆ.

ಗುರುವಾರ ದಲಿತ ಹಕ್ಕುಗಳ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರಾಜ್ಯದ ಒಟ್ಟು ಜನಸಂಖ್ಯೆಯ 24 ಪ್ರತಿಶತ ಅಂದರೆ ಕಾಲುಭಾಗ ದಲಿತರೇ ಇದ್ದರೂ ಕಳೆದ 13 ವರ್ಷಗಳಿಂದ 3ಲಕ್ಷ46ಸಾವಿರ ಕೋಟಿ ವೆಚ್ಚಮಾಡಲಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿತ್ತಿವೆ, ಆದರೆ ಇಷ್ಟು ಪ್ರಮಾಣದ ಮೊತ್ತ ದಲಿತ ಕುಟುಂಬಗಳಿಗೆ ತಲುಪಿ ಅವರ ಆರ್ಥಿಕ ಪ್ರಗತಿಗೆ ಕಾರಣವಾಗಿವೆಯೇ ಎಂಬುದು ಮಾತ್ರ ಅರ್ಥವಾಗದ ಪ್ರಶ್ನೆಯಾಗಿದೆ, ಇದು ಉಭಯ ಸದನಗಳಲ್ಲಿ ಸಾಧಕ ಬಾದಕಗಳ ಚೆರ್ಚೆಯಾಗಬೇಕು ಸರಿಯಾಗಿ ಮಿಸಲು ನಿಧಿ ಈ ಕುಟುಂಬಗಳ ಪ್ರಗತಿಗೆ ಕಾರಣವಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರು ಮರಡಿ ಜಂಬಯ್ಯನಾಯಕ್ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.